Kannada NewsLatest

ರಸ್ತೆ ಕಾಮಗಾರಿಗಾಗಿ ಸಂಚಾರ ಮಾರ್ಗ ಬದಲಾವಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಗರದ 3ನೇ ರೈಲ್ವೆ ಗೇಟ್ ನಿಂದ ಗೋವಾವೇಸ್ ಬಸವೇಶ್ವರ ವೃತ್ತ ವರೆಗಿನ ಅಟಲ್ ಬಿಹಾರಿ ವಾಜಪೇಯಿ ಮಾರ್ಗದ ರಸ್ತೆಯ ವೈಟ್ ಟಾಪಿಂಗ್ ರಸ್ತೆ ಕಾಮಗಾರಿ ಕೈಗೆತ್ತಿಕೊಂಡಿದ್ದು, ಇದೇ ವೇಳೆ ಎಲ್ ಆ್ಯಂಡ್ ಟಿ
ಕಂಪನಿಯವರು ನಗರದ 24×7 ನೀರು ಸರಬರಾಜು ಕುರಿತು ಕಾಮಗಾರಿ ಕೈಗೆತ್ತಿಕೊಂಡ ಹಿನ್ನೆಲೆಯಲ್ಲಿ ನಗರದ ಕೆಲ ಸಂಚಾರ ಮಾರ್ಗಗಳನ್ನು ಬದಲಾವಣೆ ಮಾಡಿ ಪೊಲೀಸ್ ಆಯುಕ್ತರ ಕಚೇರಿ ಪ್ರಕಟಣೆ ಹೊರಡಿಸಿದೆ.

ಈ ಕಾಮಗಾರಿಗಳು ಸುಮಾರು ಒಂದು ತಿಂಗಳವರೆಗೆ ನಡೆಯುವ ಸಾಧ್ಯತೆಗಳಿರುತ್ತವೆ. ಕಾರಣ ಕಾಮಗಾರಿಗಳ ಮುಕ್ತಾಯದವರೆಗೆ ಸಾರ್ವಜನಿಕ ಸುಗಮ ಸಂಚಾರ ವ್ಯವಸ್ಥೆ ಕುರಿತು ಈ ಕೆಳಗೆ ನಮೂದಿಸಿದ ಮಾರ್ಗಗಳಲ್ಲಿ ಫೆ.27  ರಂದು ಹೊರತುಪಡಿಸಿ ಎಲ್ಲ ಮಾದರಿಯ ವಾಹನಗಳನ್ನು ಸಂಚಾರ ಮಾರ್ಗಗಳನ್ನು ಬದಲಾಯಿಸಿದ್ದು ಸಾರ್ವಜನಿಕರು  ಪರ್ಯಾಯ ಮಾರ್ಗಗಳನ್ನು ಬಳಸಿಕೊಳ್ಳಬೇಕಿದೆ. ಬದಲಾದ ಮಾರ್ಗಗಳ ವಿವರ ಇಂತಿದೆ.

1) 3ನೇ ರೈಲ್ವೆ ಗೇಟ್ ನಿಂದ ಅಟಲ ಬಿಹಾರಿ ವಾಜಪೇಯಿ ಮಾರ್ಗ ಮೂಲಕ ಗೋಗಟೆ ವೃತ್ತ, ಚನ್ನಮ್ಮ ವೃತ್ತ ಮಾರ್ಗವಾಗಿ ಸಂಚರಿಸುವ ವಾಹನಗಳು ಕಾಂಗ್ರೆಸ್ ರಸ್ತೆ ಬಳಸಿಕೊಂಡು ಗೋಗಟೆ ವೃತ್ತದ ಮೂಲಕ ಮುಂದೆ ಸಾಗಬೇಕು.

2) ಅಟಲ್ ಬಿಹಾರಿ ವಾಜಪೇಯಿ ಮಾರ್ಗ ಮೂಲಕ ಅನಗೋಳ, ವಡಗಾಂವ, ಶಹಾಪುರ ಕಡೆಗೆ ಖಾನಾಪುರ ಕಡೆಯಿಂದ ಸಂಚರಿಸುವವರು ದೇಸೂರು ಕ್ರಾಸ್‌ ನಲ್ಲಿ ಬಲ ತಿರುವು ಪಡೆದು ಯಳ್ಳೂರ ಮಾರ್ಗವಾಗಿ ಮತ್ತು ಚೋರ್ಲಾ, ಜಾಂಬೋಟಿ, ಪೀರನವಾಡಿ ಕಡೆಯಿಂದ ಸಂಚರಿಸುವವರು ಬೆಮ್ಕೋ ಕ್ರಾಸ್ ಹತ್ತಿರ ಬಲತಿರುವು ಪಡೆದು  ಕೆಎಲ್ ಇ  ಎಂಜಿನಿಯರಿಂಗ್ ಕಾಲೇಜ್ ರೈಲ್ವೆ ಗೇಟ್ ಮೂಲಕ ಅನಗೋಳ ಮುಖ್ಯ ರಸ್ತೆ ಸೇರಿ ಮುಂದೆ ಸಾಗಬೇಕು.

3) ಟಿಳಕವಾಡಿ ಪ್ರದೇಶದ ಸೋಮವಾರ ಪೇಟೆ, ಮಂಗಳವಾರ ಪೇಟೆ, ಬುಧವಾರ ಪೇಟೆ, ಗುರವಾರ ಪೇಟೆ ವ್ಯಾಪ್ತಿಯ ಬೆಳಗಾವಿ ನಗರ ಪ್ರವೇಶ ಬಯಸುವ ರಹವಾಸಿಗಳು ಗೋವಾವೇಸ್ ವೃತ್ತ ಕಡೆಗೆ ಸಂಚರಿಸದೆ, 2ನೇ ರೈಲ್ವೆ ಗೇಟ್ ಮೂಲಕ ಹಾಗೂ ದೇಶಮುಖ ರಸ್ತೆ, ಶುಕ್ರವಾರ ಪೇಟ 1ನೇ ರೈಲ್ವೆ ಗೇಟ್ ಮೂಲಕ
ಕಾಂಗ್ರೆಸ್ ರಸ್ತೆ ಬಳಸಿಕೊಳ್ಳಬೇಕು.

4) ಅನಗೋಳ, ಭಾಗ್ಯ ನಗರ, ಆದರ್ಶ ನಗರ, ಹಿಂದವಾಡಿ ಪ್ರದೇಶ ವ್ಯಾಪ್ತಿಯ ಅಟಲ್ ಬಿಹಾರಿ ವಾಜಪೇಯಿ ಮಾರ್ಗ ಬಳಸಿ ಗೋವಾವೇಸ್ ಸರ್ಕಲ್ ಕಡೆ ಸಂಚರಿಸುವ ಸಾರ್ವಜನಿಕರು ಹಿಂದವಾಡಿ ಮುಖ್ಯ ರಸ್ತೆಯಿಂದ ಡಾಕ್ ಬಂಗ್ಲಾ (ಕೋರೆ ಗಲ್ಲಿ ಕ್ರಾಸ್), ಶಹಾಪುರ ರಸ್ತೆ ಬಳಸಿ ಗೋವಾವೇಸ್ ವೃತ್ತ ಸೇರಿ ಮುಂದೆ ಸಂಚರಿಸಬೇಕು ಎಂದು ಪೊಲೀಸ್ ಆಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.

ಬೆಳಗಾವಿಯ ಇತಿಹಾಸದಲ್ಲೇ ಈ ರೀತಿಯ ಮೊದಲ ಕನ್ನಡ ನಾಟಕ: ಗುರುವಾರ, ಶುಕ್ರವಾರ ಪ್ರದರ್ಶನ

https://pragati.taskdun.com/first-kannada-drama-of-its-kind-in-the-history-of-belgaum-thursday-friday-performance/

*7 ವೇತನ ಆಯೋಗ; ಸರ್ಕಾರಿ ನೌಕರರ ಪರ ಧ್ವನಿಯೆತ್ತಿದ ಮಾಜಿ ಸಿಎಂ ಯಡಿಯೂರಪ್ಪ*

https://pragati.taskdun.com/7th-pay-commissionb-s-yedyurappasupportvidhanasabhe/

*ಡಾ.ಬೆಟಗೇರಿ ಕೃಷ್ಣಶರ್ಮ ಕಾವ್ಯದ ಜೀವಧಾತು ದೇಸಿಯತೆ: ಪ್ರೊ. ಭೈರಮಂಗಲ ರಾಮೇಗೌಡ*

https://pragati.taskdun.com/dr-betageri-krishna-sharmakavyada-jeevadhatuprof-bhairamangala-ramegowda/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button