ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ಆಧುನೀಕೃತ ಶಿಕ್ಷಣ ವ್ಯವಸ್ಥೆಯಿಂದ ವಿದ್ಯಾರ್ಥಿಗಳಲ್ಲಿ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವ ಸಾಮರ್ಥ್ಯ ವೃದ್ಧಿಸುವ ಹಿನ್ನೆಲೆಯಲ್ಲಿ ಶೈಕ್ಷಣಿಕ ವ್ಯವಸ್ಥೆ ಸುಧಾರಣೆಗೆ ಒತ್ತು ನೀಡಲಾಗುತ್ತಿದೆ” ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಅವರು ಹಲಗಾ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಮರಾಠಿ ಶಾಲೆಗಳಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸ್ಮಾರ್ಟ್ ಕ್ಲಾಸ್ ರೂಮ್ ಗಳನ್ನು ಉದ್ಘಾಟಿಸಿ ಮಾತನಾಡಿದರು.
“ಸ್ಮಾರ್ಟ್ ಕ್ಲಾಸ್ ಸೇವೆಯಲ್ಲಿ ಪ್ರೊಜೆಕ್ಟರ್, ಎಸಿ, ಬೆಂಚ್, ಯುಪಿಎಸ್ ಮತ್ತು ಇನ್ವರ್ಟರ್, ಕಂಪ್ಯೂಟರ್, ಪ್ರಿಂಟರ್, ಟ್ಯಾಬ್, ಸ್ಮಾರ್ಟ್ ಕ್ಯಾಬಿನೆಟ್, ಪೋಡಿಯಂ, ವಿಂಡೋ ಕರ್ಟನ್ಸ್, ಡೋರ್, ಮ್ಯಾಟ್ಸ್, ಡಿಜಿಟಲ್ ಕಂಟೆಂಟ್, ಎಲೆಕ್ಟ್ರಿಶಿಯನ್, ವಾಲ್ ಕ್ಲಾಕ್, ನೇಮ್ ಪ್ಲೇಟ್, ಪೇಂಟಿಂಗ್, ಟೈಲ್ಸ್ ಹಾಗೂ ಮುಂತಾದ ಸಾಮಗ್ರಿಗಳನ್ನು ಅಳವಡಿಸಲಾಗಿದೆ. ವಿದ್ಯಾರ್ಥಿಗಳು ಇವುಗಳ ಸದುಪಯೋಗ ಪಡೆದು ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರಲು ಮುಂದಾಗಬೇಕು” ಎಂದು ಅವರು ಹೇಳಿದರು.
ಈ ಸಮಯದಲ್ಲಿ ಗ್ರಾಮದ ಹಿರಿಯರು, ಸದಾ ಬಿಳಗೋಜಿ, ಸಚಿನ್ ಸಾಮಜಿ, ಚಾರುಕೀರ್ತಿ ಸೈಬಣ್ಣವರ, ಮಹಾವೀರ ಬೆಲ್ಲದ, ಸುಕುಮಾರ ಹುಡೇದ, ಶಾಂತು ಬೆಲ್ಲದ, ರೂಪಾ ಸುತಾರ, ಸಂತೋಷ ಕೆ., ಭರತೇಶ ಬೆಲ್ಲದ, ಸಿದ್ದು ಕುರಂಗಿ, ಗಣಪತ ಮಾರಿಹಾಳ್ಕರ್, ಮಹಾವೀರ ಪಾಟೀಲ, ಶಿವಾಜಿ ಬಿಳ್ಗೊಜಿ, ಭುಜಂಗ ಸಾಲ್ಗಾಡೊ, ಚಂದ್ರಕಾಂತ ಕಾನೋಜಿ, ಅಣ್ಣಪ್ಪ ಘೋರ್ಪಡೆ, ಕೃಷ್ಣ ಸಂತಾಜಿ, ಸುರೇಶ ಬಿಳ್ಗೊಜಿ, ಸಿ ಬಿ ನಾಯ್ಕರ್, ಅನ್ವರ್ ಲಂಗೂಟಿ, ರಾಮು ಮೊರೆ, ಯು.ಎನ್. ಹಿರೇಮಠ, ಪ್ರಕಾಶ ಪಾಟೀಲ, ಎಸ್ ಡಿಎಂಸಿ ಅಧ್ಯಕ್ಷ, ಉಪಾಧ್ಯಕ್ಷ, ಸರ್ವಸದಸ್ಯರು ಹಾಗೂ ಆಯಾ ಶಾಲೆಗಳ ಸಿಬ್ಬಂದಿ ಉಪಸ್ಥಿತರಿದ್ದರು.
ರೈತರ ಖಾತೆಗೆ ಕಿಸಾನ್ ಸಮ್ಮಾನ್ ನಿಧಿ: ಸಚಿವೆ ಶೋಭಾ ಕರಂದ್ಲಾಜೆ
https://pragati.taskdun.com/kisan-samman-fund-for-farmers-minister-shobha-karandlaje/
https://pragati.taskdun.com/suicideone-family3-peoplehaveritonduru-village/
ಮುನ್ಸಿಪಲ್ ಕೌನ್ಸಿಲ್ ಮೊದಲ ಸಭೆಯಲ್ಲಿ ಚಪ್ಪಲಿ, ಬಾಟಲಿಯಿಂದ ಬಡಿದಾಡಿದ ಬಿಜೆಪಿ, ಎಎಪಿ ಸದಸ್ಯರು
https://pragati.taskdun.com/bjp-and-aap-members-hit-with-slippers-and-bottles-in-the-first-meeting-of-the-municipal-council/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ