Latest

ಮೈಸೂರಿನ ಬುಡಕಟ್ಟು ಜನಾಂಗಕ್ಕೆ ಬೆಳಗಾವಿ ಜನತೆ ಮಾನವೀಯ ಸ್ಪಂದನೆ

ಪ್ರಗತಿವಾಹಿನಿ ಸುದ್ದಿ, ಮೈಸೂರು: ಜಿಲ್ಲೆಯ ನಾಗರಹೊಳೆ ಮತ್ತು ಬಂಡೀಪುರ ಅರಣ್ಯದ ಸುತ್ತ ಇರುವ 300 ಕ್ಕೂ ಹೆಚ್ಚಿನ ಗ್ರಾಮಗಳಲ್ಲಿ ವಾಸವಾಗಿರುವ ಬುಡಕಟ್ಟು ಜನಾಂಗದ ಕುಟುಂಬಗಳಿಗೆ ಬೆಳಗಾವಿ ಜನತೆ ಮಾನವೀಯ ಆಧಾರದಲ್ಲಿ ನೆರವು ನೀಡಿದೆ.

ವಿಶ್ವ ಹಿಂದೂ ಪರಿಷತ್ ನೀಡಿದ ಕರೆಗೆ ಸ್ಪಂದಿಸಿ ಸಾರ್ವಜನಿಕರು ನಾನಾ ವಸ್ತು ರೂಪದಲ್ಲಿ ನೀಡಿದ ನೆರವನ್ನು ಬೆಳಗಾವಿಯ ಗುರು ರೋಡ್ ಲೈನ್ಸ್ ಉಚಿತವಾಗಿ ಸಾಗಾಟ ಮಾಡಿ ತಲುಪಿಸಿದೆ.

 

 

ನಾಗರಹೊಳೆ, ಬಂಡಿಪುರ ಅರಣ್ಯ ಪ್ರದೇಶದ ವಾಸಿಗಳಾದ ಜೇನು ಕುರಬ ಬೆಟ್ಟ ಕುರುಬ,
ಯರವ, ಸೋಲಿಗ ಮುಂತಾದ ಬುಡಕಟ್ಟು ಜನಾಂಗದವರು ಸಣ್ಣ  ಗುಡಿಸಲುಗಳಲ್ಲಿ ತೀರ ಕಷ್ಟದ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಉಡಲು ಬಟ್ಟೆ ಕೂಡ ಇರದ ಇವರ ಸ್ಥಿತಿಗತಿಗಳನ್ನು ಅರಿತ ವಿಶ್ವ ಹಿಂದೂ ಪರಿಷತ್ ಒಂದು ವರ್ಷದಿಂದ ಈ ಜನಾಂಗಗಳಿಗೆ ನೆರವಾಗುವ ನಿಟ್ಟಿನಲ್ಲಿ ಹಲವು ಉಪಕ್ರಮಗಳನ್ನು ಕೈಗೊಂಡಿದೆ.

ಸ್ಥಿತಿವಂತರು ತಮ್ಮ ಮನೆಯಲ್ಲಿರುವ ಹರಿಯದ ಹಳೆಯ ಬಟ್ಟೆಗಳು, ಹೊದಿಕೆ, ಬೆಡ್ ಶೀಟ್ ಇತ್ಯಾದಿಗಳನ್ನು ಸ್ವಚ್ಛಗೊಳಿಸಿ ನೀಡಿದಲ್ಲಿ ತಾತ್ಕಾಲಿಕ ನೆರವು ದೊರೆಯಲಿದೆ ಎಂದು ವಿಶ್ವ ಹಿಂದೂ ಪರಿಷತ್ ಇತ್ತೀಚೆಗೆ ಮನವಿ ಮಾಡಿತ್ತು.

 

ಇದಕ್ಕೆ ಸ್ಪಂದಿಸಿದ ಬೆಳಗಾವಿಯ ಗುರು ರೋಡ್ ಲೈನ್ಸ್ ಮಾಲೀಕರು ಬೆಳಗಾವಿ ಜನತೆ ಮಾನವೀಯ ನೆಲೆಯಲ್ಲಿ ಸ್ಪಂದಿಸಿ ನೀಡಿದ ಬಟ್ಟೆಗಳು, ಇನ್ನಿತರ ದಿನಬಳಕೆ ಪರಿಕರಗಳನ್ನು ವ್ಯವಸ್ಥಿತವಾಗಿ ಪ್ಯಾಕ್ ಮಾಡಿ ಉಚಿತವಾಗಿ ಸಾಗಾಟ ಮಾಡಿ ಬೆಂಗಳೂರಿಗೆ ಕಳುಹಿಸಿದ್ದಾರೆ. ಈ ಔದಾರ್ಯಕ್ಕೆ ವಿಶ್ವ ಹಿಂದೂ ಪರಿಷತ್ ಬೆಳಗಾವಿ ಜನತೆ ಹಾಗೂ ಗುರು ರೋಡ್ ಲೈನ್ಸ್ ನವರಿಗೆ ಧನ್ಯವಾದಗಳನ್ನು ಅರ್ಪಿಸಿದೆ.

*ಸಿಎಂ ಬಸವರಾಜ್ ಬೊಮ್ಮಾಯಿ ಆರೋಪಗಳಿಗೆ ಸಿದ್ದರಾಮಯ್ಯ ಸ್ಪಷ್ಟನೆ*

https://pragati.taskdun.com/siddaramaiahpressmeetlokayuktaacb/

7 ವೇತನ ಆಯೋಗ: ಸರಕಾರಿ ನೌಕರರ ಮುಷ್ಕರ ಫಿಕ್ಸ್?

https://pragati.taskdun.com/7-pay-commission-government-employees-strike-fix/

ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದರೆ 10 ವರ್ಷ ಜೈಲು, 1 ಕೋಟಿ ರೂ. ದಂಡ

https://pragati.taskdun.com/10-years-imprisonment-rs-1-crore-if-question-paper-is-leaked-fine/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button