*ಸಾಲು ಸಾಲು ವಾಹನಗಳನ್ನು ನೋಡಿ ಭಯವಾಯ್ತು; ಇಂದಿನಿಂದ ನೀವು ಗೃಹ ಸಚಿವರು ಎಂದಾಕ್ಷಣ ಗಾಬರಿಯಾಯಿತು ಎಂದ ಅರಗ ಜ್ಞಾನೇಂದ್ರ*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭೆಯ ಅಧಿವೇಶನದ ಕೊನೆ ದಿನವಾದ ಇಂದು ಸದನದಲ್ಲಿ ಸಚಿವರು ತಮ್ಮ ಅನುಭವ, ನೆನಪುಗಳನ್ನು ಬಿಚ್ಚಿಟ್ಟರು. ಸಚಿವ ಅರಗ ಜ್ಞಾನೇಂದ್ರ ತಾವು ಗೃಹ ಸಚಿವರಾದ ಕ್ಷಣದ ತಮ್ಮ ಅನುಭವವನ್ನು ತೆರೆದಿಟ್ಟರು.
ವಿಧನಾಸಭೆಯಲ್ಲಿ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ನಾನು ಕಾಲೇಜಿನಲ್ಲಿದ್ದಾಗ ವಿಧನಸೌಧ ನೋಡಲು ಬಂದಿದ್ದೆ. ನಮ್ಮನ್ನು ಒಂದು ದಿನ ಸದನಕ್ಕೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಶಾಸಕರ ಕುರ್ಚಿ ಯಾವುದು ಎಂದು ಕೇಳಿದ್ದೆ. ನಂತರದ ದಿನಗಳಲ್ಲಿ ನನ್ನ ಕ್ಷೇತ್ರದ ಜನತೆ ನನ್ನನ್ನು ಶಾಸಕನನ್ನಾಗಿ ಮಾಡಿ ವಿಧಾನಸೌಧಕ್ಕೆ ಕಳುಸಿದ್ದು ನಾನು ಎಂದೂ ಮರೆಯಲಾಗದ ದಿನ ಎಂದು ಸವಿ ನೆನಪುಗಳನ್ನು ಹೇಳಿದರು.
ಅದರಲ್ಲಿಯೂ ಪ್ರಮುಖವಾಗಿ ನಾನು ಗೃಹಸಚಿವನಾದ ದಿನವಂತು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಂದು ದಿಕ್ಕಕ್ಕಿದ್ದಂತೆ ವಾಹನಗಳು ಬಂದು ನಿಂತಿದ್ದು ಕಂಡು ಭಯವಾಗತೊಡಗಿತು. ಸುತ್ತಮುತ್ತಲು ಸಾಲು ಸಾಲು ವಾಹನಗಳನ್ನು ನೋಡಿ ಯಾಕೆ ಇಷ್ಟೊಂದು ವಾಹನಗಳು ಬಂದಿವೆ ಎಂದು ಕೇಳಿದೆ. ಕೊಲ ಹೊತ್ತಲ್ಲೇ ಅಧಿಕಾರಿಯೊಬ್ಬರು ಸರ್ ನೀವು ಇಂದಿನಿಂದ ಗೃಹ ಸಚಿವರು ಎಂದು ಹೇಳಿದರು. ಅರೆ ಕ್ಷಣ ಶಾಕ್ ಜೊತೆಗೆ ಅಚ್ಚರಿಯಾಯಿತು. ಗೃಹ ಇಲಾಖೆ…ಇದು ಬೇಕಿತ್ತಾ ನನಗೆ.. ನನ್ನಿಂದ ಸಾಧ್ಯವೇ? ಎನಿಸಿತು.
ವಿಪಕ್ಷಗಳಿಂದ ವಾಗ್ದಾಳಿ. ಸಿದ್ದರಾಮಯ್ಯನವರಿಗೆ ವೈಯಕ್ತಿಕವಾಗಿ ನಾನು ಎಂದರೆ ಪ್ರೀತಿಯಿದೆ. ಆದರೆ ಖಾತೆ ವಿಚಾರವಾಗಿ ಟೀಕಿಸಿದರು. ನೀನು ಒಳ್ಳೆಯವನು ಆದರೆ ಗೃಹ ಖಾತೆ ನಿಭಾಯಿಸಲು ಅಸಮರ್ಥ ಎಂದು ಹೇಳಿದರು. ಈ ಮೂಲಕ ರಾಜಕೀಯ ಶುರು ಮಾಡಿದರು. ಒಂದು ರೀತಿಯ ಬೇಸರವಾಯಿತು. ಕಾನೂನು ಸಚಿವ ಮಾಧುಸ್ವಾಮಿ ಆಪದ್ಭಾಂಧವನಂತೆ ಸಲಹೆಗಳನ್ನು ನೀಡಿದರು. ಸಮಸ್ಯೆಗಳು ಎದುರಾದಾಗ ಬಗೆಹರಿಸಿದರು. ರಾಜ್ಯದಲ್ಲಿ ಹಲವು ಸಂಘರ್ಷಗಳು, ಹೋರಾಟಗಳು ನನ್ನ ಅವಧಿಯಲ್ಲಿ ಎದುರಾಯಿತು ಎಲ್ಲವನ್ನೂ ಸಮರ್ಪಕವಾಗಿ ನಿಭಾಯಿಸಿದ್ದೇನೆ. ಗೃಹ ಸಚಿವನಾಗಿ ಉತ್ತಮವಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಬಗ್ಗೆ ತೃಪ್ತಿಯಿದೆ ಎಂದು ಹೇಳಿದರು.
*ಸಿದ್ದರಾಮಯ್ಯ ಕಾರ್ಯವೈಖರಿ ಶ್ಲಾಘಿಸಿದ ಮಾಜಿ ಸಿಎಂ; ದೇವೇಗೌಡರು ನಮಗೆ ಆದರ್ಶ ಎಂದ ಯಡಿಯೂರಪ್ಪ*
https://pragati.taskdun.com/b-s-yedyurappavidhanasabhelast-speech/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ