ಪ್ರಗತಿವಾಹಿನಿ ಸುದ್ದಿ, ತುಮಕೂರು: ಅನಧಿಕೃತವಾಗಿ ಪೋಸ್ಟರ್ ಅಂಟಿಸಿದ ಆರೋಪದಡಿ ಪೊಲೀಸರ ವಶದಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಬಿಡುಗಡೆ ಮಾಡುವಂತೆ ಮಹಿಳಾ ಪಿಎಸ್ ಐಗೆ ಧಮಕಿ ಹಾಕಿದ ಜಿಲ್ಲಾ ಯುವ ಕಾಂಗ್ರೆಸ್ ಮುಖಂಡನನ್ನು ಪೊಲೀಸರು ಬಂಧಿಸಿದ್ದಾರೆ.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಶಿ ಹುಲಿಕುಂಟೆ ಬಂಧಿತರು. ನಗರದಲ್ಲಿ ಬಿಜೆಪಿ ಶಾಸಕ ಜ್ಯೋತಿ ಗಣೇಶ ಅವರ ಚಿತ್ರವಿರುವ ‘ಪೇ ಎಂಎಲ್ ಎ’, ‘ಭ್ರಷ್ಟಾಚಾರವೇ ನನ್ನ ಗುರಿ’ ‘ನಿಮ್ಮ ಕೆಲಸ ಆಗಬೇಕೇ? ನನಗೆ ಪೇ ಮಾಡಿ’ ಎಂದೆಲ್ಲ ಬರೆದ ಪೋಸ್ಟರ್ ಗಳನ್ನು ನಗರದಲ್ಲಿ ಅಂಟಿಸಲಾಗಿತ್ತು.
ಇದಕ್ಕೆ ಸಂಬಂಧಿಸಿದಂತೆ ತಿಲಕ ಪಾರ್ಕ್ ಠಾಣೆ ಪೊಲೀಸರು ಕೆಲ ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದರು. ಈ ವೇಳೆ ವಶದಲ್ಲಿರುವ ಕಾರ್ಯಕರ್ತರ ಬಿಡುಗಡೆಗೆ ಶಶಿ ಹುಲಿಕುಂಟೆ ಅವರು ಪಿಎಸ್ ಐ ರತ್ನಮ್ಮ ಅವರ ಮೇಲೆ ಒತ್ತಡ ಹಾಕಿದ್ದರು.
ಇದಕ್ಕೆ ಒಪ್ಪದಿದ್ದಾಗ ಪಿಎಸ್ ಐಗೆ ಆವಾಜ್ ಹಾಕಿದ ಹುಲಿಕುಂಟೆ, “ಇನ್ನು ಮೂರೇ ತಿಂಗಳಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬರುತ್ತದೆ. ಆಗ ನಿಮ್ಮನ್ನು ಸಸ್ಪೆಂಡ್ ಮಾಡಿಸುತ್ತೇನೆ” ಎಂದೆಲ್ಲ ಧಮಕಿ ಹಾಕಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಗಿ ಆರೋಪಿಸಲಾಗಿದೆ.
ಪೊಲೀಸ್ ಅಧಿಕಾರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ಬೆದರಿಕೆಯೊಡ್ಡಿದ ಆರೋಪದಡಿ ಶಶಿ ಹುಲಿಕುಂಟೆ ಅವರನ್ನು ಬಂಧಿಸಲಾಗಿದ್ದು ವಿಚಾರಣೆ ನಡೆದಿದೆ.
*ಬಿ.ಎಸ್.ವೈ ಪರಿಶ್ರಮಕ್ಕೆ ಸಂದ ಫಲ ಇದು; ಸಿಎಂ ಬೊಮ್ಮಾಯಿ*
https://pragati.taskdun.com/cm-basavaraj-bommaib-s-yedyurappashivamogga-airport/
https://pragati.taskdun.com/indian-techies-invited-to-work-in-germany-preparing-for-visa-process-simplification/
ಪತ್ನಿ ಸಾವಿನ ಕ್ಷಣದಲ್ಲಿ ವಿಸಾ ಇಲ್ಲದಿದ್ದರೂ ನೆರವಾದ ಭಾರತದ ಔದಾರ್ಯ ನೆನೆದ ಪಾಕಿಸ್ತಾನಿ ಕ್ರಿಕೆಟಿಗ
https://pragati.taskdun.com/pakistan-cricketer-remembered-indias-generosity-despite-not-having-a-visa-at-the-time-of-his-wifes-death/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ