ಅಸಹ್ಯವೆನಿಸುವ ಭ್ರಷ್ಟಾಚಾರ ಘಟನೆಗಳು… ರಾಜಕಾರಣ ಮೌಲ್ಯ ಕಳೆದುಕೊಳ್ಳುತ್ತಿದೆ; ಕಳವಳ ವ್ಯಕ್ತಪಡಿಸಿದ ಕಾಂಗ್ರೆಸ್ ಶಾಸಕ ಶರಣಬಸಪ್ಪ ಗೌಡ ದರ್ಶನಾಪೂರ
ಪ್ರಗತಿವಾಹಿನಿ ಸುದ್ದಿ; ಐನಾಪುರ: “ಇಂದು ಮೌಲ್ಯಧಾರಿತ ರಾಜಕಾರಣ ಇಲ್ಲವಾಗಿದೆ. ಎಲ್ಲಿ ನೋಡಿದರೂ ಸ್ವ ಪ್ರತಿಷ್ಠೆ, ಸ್ವಾರ್ಥ ಮತ್ತು ಹಣದ ಹಪಾಹಪಿತನ ಎದ್ದು ಕಾಣುತ್ತಿದೆ. ಇದರಿಂದಾಗಿ ಸಾರ್ವಜನಿಕ ಕಲ್ಯಾಣ ಆಗುತ್ತಿಲ್ಲ. ಜನತೆಯ ಕಲ್ಯಾಣ ಆಡಳಿತ ಅಭಿವೃದ್ಧಿ ಪರವಾಗಿರಬೇಕು. ನಾನು ಎರೆಡು ಬಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಹಿಂದೆಂದೂ ಈ ತರಹದ ವಾತಾವರಣವಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಅಸಹ್ಯವೆನಿಸುವ ಭ್ರಷ್ಟಾಚಾರದ ಘಟನೆಗಳಿಂದ ರಾಜಕಾರಣ ಮೌಲ್ಯ ಕಳೆದುಕೊಳ್ಳುತ್ತಿದೆ” ಎಂದು ಮಾಜಿ ಸಚಿವ ಹಾಗೂ ಶಹಪುರದ ಕಾಂಗ್ರೆಸ್ ಶಾಸಕ ಶರಣಬಸಪ್ಪ ಗೌಡ ದರ್ಶನಾಪೂರ ಅವರು ಪ್ರಗತಿ ವಾಹಿನಿಯೊಂದಿಗೆ ಮಾತನಾಡುತ್ತಾ ಅಭಿಪ್ರಾಯ ಹಂಚಿಕೊಂಡರು.
ಸುರಪುರ ತಾಲೂಕಿನ ಐನಾಪುರ ಶಾಲೆಯ ಸಂಜಯ್ ದೊಡಮನಿ ಹಾಗೂ ಬಸವನಗೌಡ ದೊಡಮನಿಯವರ ವಿನಂತಿ ಮೇರೆಗೆ, ಸೌಹಾರ್ದಯುತ ಭೇಟಿ ನೀಡಿದ್ದರು.
ಇಂದು ಏರ್ಪಡಿಸಲಾಗಿದ್ದ ಮಾತೆಯರ ಕೈ ತುತ್ತು ಕಾರ್ಯಕ್ರಮದ ಕುರಿತು ಶುಭ ಹಾರೈಸಿದರು. ಅವರು ಕೆಲ ಹೊತ್ತು ಮಕ್ಕಳ ವಿದ್ಯಾಭ್ಯಾಸದ ಬಗೆಗೂ ಮಾಹಿತಿ ಪಡೆದರು.
” ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಎಲ್ಲರೂ ಶ್ರಮಪಡಬೇಕು. ಹಿಂದುಳಿದ ಭಾಗವೆಂಬ ಹಣೆಪಟ್ಟಿ ಕಳಚುವುದೇ ಗುರಿಯಾಗಬೇಕು” ಎಂದು ಸ್ಪೂರ್ತಿದಾಯಕ ಮಾತುಗಳನ್ನು ಹೇಳಿದರು.
ಈ ಸಂದರ್ಭದಲ್ಲಿ ಶಿವಮಂತ ಸಾಹು ಚಂಡಾಪುರ, ಶಾಲಾ ಸಹ ಸಂಚಾಲಕಿ ಶ್ರೀಮತಿ ವಿದ್ಯಾ ಸಂಜಯ್ ಇನ್ನು ಹಲವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ