Kannada NewsKarnataka News

ಬೆಳಗಾವಿ ಮಹಾನಗರ ಪಾಲಿಕೆಗೆ ಪ್ರಥಮ ಬಹುಮಾನ


“ನಗರ ವಸತಿರಹಿತರ ಆಶ್ರಯ” ಬೆಳಗಾವಿ ಮಹಾನಗರ ಪಾಲಿಕೆಗೆ ಪ್ರಥಮ ಬಹುಮಾನ


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಡೇ- ಎನ್.ಯು.ಎಲ್.ಎಂ, ಅಭಿಯಾನದ “ನಗರ ವಸತಿ ರಹಿತರ ಆಶ್ರಯ” ಯೋಜನೆಯ ಉಪ ಘಟಕದಡಿ ಉತ್ತಮ ನಿರ್ವಹಣೆಗೆ ಬೆಳಗಾವಿ ಮಹಾನಗರ ಪಾಲಿಕೆಗೆ ರಾಜ್ಯ ಮಟ್ಟದ ಪ್ರಥಮ ಬಹುಮಾನ ಲಭಿಸಿದೆ.
೨೦೨೨-೨೩ ನೇ ಸಾಲಿನ ಡೇ- ಎನ್.ಯು.ಎಲ್.ಎಂ ಅಭಿಯಾನದ ವಾರ್ಷಿಕ ಕ್ರಿಯಾ ಯೋಜನೆಯ ೫ ಉಪ ಘಟಕವಾರು ಪ್ರತಿ ಉಪ ಘಟಕದಡಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ನಗರ ಸ್ಥಳೀಯ ಸಂಸ್ಥೆಯನ್ನು ಗುರುತಿಸಿ, ರಾಜ್ಯ ಮಟ್ಟದ ಪ್ರಥಮ ಮತ್ತು ದ್ವಿತೀಯ ಬಹುಮಾನ ನೀಡಲಾಗಿರುತ್ತದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉನ್ನತ ಶಿಕ್ಷಣ ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ದಿ ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವರಾದ ಅಶ್ವತ್ಥನಾರಾಯಣ ಅವರು ಬೆಂಗಳೂರಿಂದ ಅರಮನೆ ಮೈದಾನದ ತ್ರಿಪುರವಾಸಿನಿ ಸಭಾಂಗಣದಲ್ಲಿ ಬುಧವಾರ (ಮಾ.೦೮) ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಪ್ರಥಮ ಬಹುಮಾನ ೧ ಲಕ್ಷ ೨೫ ಸಾವಿರ ನಗದು ಹಾಗೂ ಫಲಕ, ಪ್ರಶಸ್ತಿ ಪ್ರಮಾಣ ಪತ್ರ ನೀಡಲಾಗುವುದು.
ಮಹಾನಗರ ಪಾಲಿಕೆ ಆಯುಕ್ತರಾದ ಡಾ.ರುದ್ರೇಶ್ ಘಾಳಿ ಹಾಗೂ ಡೇ-ನಲ್ಮ್ ಅಧಿಕಾರಿ ಮತ್ತು ಉಪ ಆಯುಕ್ತರಾದ ಭಾಗ್ಯಶ್ರೀ ಹುಗ್ಗಿ ಸೇರಿದಂತೆ ಡೇ- ಎನ್.ಯು.ಎಲ್.ಎಂ ಅಭಿಯಾನದ ಅಧಿಕಾರಿ/ಸಿಬ್ಬಂದಿಗಳು ಹಾಜರಾಗಿ ಪ್ರಶಸ್ತಿಯನ್ನು ಸ್ವೀಕರಿಸುವಂತೆ ಬೆಂಗಳೂರು ರಾಷ್ಟ್ರೀಯ ಜೀವನೋಪಾಯ ಅಭಿಯಾನದ ಅಭಿಯಾನ ನಿರ್ದೇಶಕರಾದ ಡಾ. ರಾಗಪ್ರಿಯಾ.ಆರ್ ಅವರು ಆಹ್ವಾನಿಸಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button