ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ:
ಸ್ಥಳೀಯ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠಕ್ಕೆ ಬೆಂಗಳೂರು ಮಹಾನಗರದ ಸಂಸ್ಕೃತ, ವೇದ, ಜ್ಯೋತಿಷ್ಯ ಪಂಡಿತರಾಗಿರುವ ಶಿವಶಂಕರ ಶಾಸ್ತ್ರಿಗಳು, ಕೇದಾರದ ಚಂದ್ರಶೇಖರ ಶಾಸ್ತ್ರಿಗಳು, ಮೋಹನಕುಮಾರ ಶಾಸ್ತ್ರಿಗಳು, ನಾಗೇಂದ್ರ ಶಾಸ್ತ್ರಿಗಳು, ನಾಗರಾಜ ಶಾಸ್ತ್ರಿಗಳು, ಶ್ರೀಕಂಠ ಆರಾಧ್ಯರು ಭೇಟಿ ನೀಡಿದ್ದರು.
ಹುಕ್ಕೇರಿ ಹಿರೇಮಠದ ಆಸ್ಥಾನ ವಿದ್ವಾಂಸರಾದ ಸಂಪತ್ ಕುಮಾರ ಶಾಸ್ತ್ರಿಗಳು ಹಾಗೂ ವಿದ್ವಾನ್ ಚಂದ್ರಶೇಖರ ಶಾಸ್ತ್ರಿಗಳು ಬಂದಿರುವ ಎಲ್ಲಾ ಅತಿಥಿ ಅಭ್ಯಾಗತರನ್ನು ಸನ್ಮಾನಿಸಿ, ಶ್ರೀಮಠದ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿದ್ವಾನ ಶಿವಶಂಕರ ಶಾಸ್ತ್ರಿಗಳು ಹುಕ್ಕೇರಿ ಹಿರೇಮಠದ ಬಗ್ಗೆ ನಾವು ತುಂಬಾ ಕೇಳ್ಪಟ್ಟಿದ್ದೇವೆ. ಉತ್ತರಕರ್ನಾಟಕದ ಜ್ವಲಂತ ಸಮಸ್ಯೆಗೆ ಸ್ಪಂದಿಸುವ ಶ್ರೀಮಠ ನಿಜಕ್ಕೂ ಕೂಡ ಸಮಾಜಮುಖಿ ಕಾರ್ಯವನ್ನು ಮಾಡುತ್ತಿದೆ. ಇಂಥ ಮಠಗಳಿಂದ ಜನರಲ್ಲಿ ನಾಡಪ್ರೇಮ, ದೇಶಪ್ರೇಮ ಹೆಚ್ಚಾಗುತ್ತಿರುವುದು ಅಭಿಮಾನದ ಸಂಗತಿ ಎಂದರು.
ಸನ್ಮಾನವನ್ನು ನೀಡಿದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಬಂದಿರುವ ಎಲ್ಲ ವಿದ್ವಾಂಸರು ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ಅಪಾರವಾಗಿರುವ ಕಾರ್ಯವನ್ನು ಮಾಡುತ್ತಿದ್ದೀರಿ. ಭಾರತ ದೇಶಕ್ಕೆ ನಾವೆಲ್ಲರೂ ಕೂಡ ವಿಶ್ವ ಗುರು ಎನ್ನುತ್ತೇವೆ ಎಂದ ಮೇಲೆ ನಿವೆಲ್ಲರೂ ಧಾರ್ಮಿಕ ವಿಧಿ ವಿಧಾನವನ್ನು ಎಲ್ಲಾ ಕಡೆ ನಡೆಸುವಾಗ ನಮ್ಮ ಸನಾತನ ಪರಂಪರೆಯನ್ನು ಉಳಿಸುವಲ್ಲಿ ಮುಂಚೂಣಿಯಲ್ಲಿ ನಿಲ್ಲಬೇಕು ಎಂದು ಶುಭವನ್ನು ಹಾರೈಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ