Kannada NewsKarnataka NewsLatest

ಅಭಿವೃದ್ಧಿಗೆ ಬೆಳಗಾವಿ ಗ್ರಾಮೀಣ ಜನತೆ ಸಹಕಾರ ಮಾದರಿ: ಲಕ್ಷ್ಮೀ ಹೆಬ್ಬಾಳಕರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ಕೇವಲ ನಾಲ್ಕುವರೆ ವರ್ಷದ ಅವಧಿಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಸಮಾಧಾನ ತಂದಿದ್ದು ಇದಕ್ಕೆ ಕ್ಷೇತ್ರದ ಜನತೆ ನೀಡಿದ ಸಹಕಾರ ಮಾದರಿಯಾಗಿದೆ” ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ಅವರು, ಹಿಂಡಲಗಾ ಗ್ರಾಮದ ಸಿಂಡಿಕೇಟ್ ಕಾಲೋನಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಪೇವರ್ಸ್ ರಸ್ತೆ ಉದ್ಘಾಟಿಸಿ ಅವರು ಮಾತನಾಡಿದರು.

ಇದೇ ಕಾಲೋನಿಯಲ್ಲಿ ನೂತನ ಉದ್ಯಾನ ನಿರ್ಮಾಣಕ್ಕಾಗಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ 25 ಲಕ್ಷ ರೂ. ವೆಚ್ಚದ ಉದ್ಯಾನ ನಿರ್ಮಾಣದ ಕಾಮಗಾರಿಗಳಿಗೆ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ರಾಮಕೃಷ್ಣ ಭಟ್, ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ, ಶೋಭಾ , ವಿಜಯಾ ಆಚಾರ್ಯ, ರಾಹುಲ್ ಉರಣಕರ್, ವಿಠ್ಠಲ ದೇಸಾಯಿ, ಚೇತನಾ ಅಗಸ್ಗೆಕರ್, ಸೀಮಾ ದೇವಕರ್, ಗಜಾನಂದ ಕಾಕತ್ಕರ್, ಸಂತೋಷ ಫರ್ನಾಂಡಿಸ್, ಅಶೋಕ ಕಾಂಬಳೆ ಮತ್ತಿತರರು ಉಪಸ್ಥಿತರಿದ್ದರು.

https://pragati.taskdun.com/road-work-started-in-hindalaga-at-a-cost-of-rs-38-lakh/
https://pragati.taskdun.com/america-worried-about-india-china-intelligence-report/
https://pragati.taskdun.com/a-suspicious-balloon-flew-in-the-field-the-people-of-bailahongala-shocked/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button