ಪ್ರಗತಿವಾಹಿನಿ ಸುದ್ದಿ, ಸುರೇಬಾನ: ಕಳೆದ ೫೭ ವರ್ಷಗಳಿಂದ ಕಂದಾಯ ಗ್ರಾಮವಾಗದ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಶಿವಪೇಠ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸಲು ನಿರ್ದರಿಸಿ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಶಿವಪೇಠ ಗ್ರಾಮದಲ್ಲಿ ಕೆ.ಎಚ್.ಡಿ.ಸಿ ಕೈಮಗ್ಗ ನೇಕಾರರಿದ್ದು, ನಮಗೆ ಮಕ್ಕಳ ಶಿಕ್ಷಣ ಹಾಗೂ ಮನೆ ನಿರ್ಮಾಣದ ಕೆಲಸಕ್ಕೆ ಗಣಕೀಕೃತ ಉತಾರ ಬಾರದೆ ಸಾಲಕ್ಕಾಗಿ ಪರದಾಡುವಂತಾಗಿದೆ ಎಂದು ಸೋಮವಾರ ಶಿವಪೇಠ ಗ್ರಾಮದ ಸಮುದಾಯ ಭವನದಲ್ಲಿ ಸಭೆ ಸೇರಿ ಜಿಲ್ಲಾಧಿಕಾರಿಗಳಿಗೆ ಮನವಿ ಕೊಡುವುದಾಗಿ ನಿರ್ಧರಿಸಿದ ಬೆನ್ನಲ್ಲೇ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ ಒಂದು ತಿಂಗಳೊಳಗಾಗಿ ಶಿವಪೇಠ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಘೋಷಿಸದಿದ್ದರೆ ಮುಂಬರುವ ಚುನಾವಣೆಗಳನ್ನು ಬಹಿಷ್ಕಾರ ಮಾಡುವುದಾಗಿ ಮನವಿ ಮಾಡಿಕೊಂಡಿದ್ದಾರೆ.
ಇದೆ ಮಾರ್ಚ್ ೧೫ ರಂದು ರಾಮದುರ್ಗ ತಾಲೂಕಿನ ಕೆಲ ಗ್ರಾಮಗಳನ್ನು ಕಂದಾಯ ಗ್ರಾಮವನ್ನಾಗಿ ಘೋಷಿಸಿ ಹಕ್ಕು ಪತ್ರವನ್ನು ವಿತರಣೆ ಮಾಡಲು ರಾಜ್ಯ ಸರ್ಕಾರ ಹಮ್ಮಿಕೊಂಡಿದೆ.
ಅದರ ಬೆನ್ನಲ್ಲೇ ಶಿವಪೇಠ ಗ್ರಾಮಸ್ಥರು ರವಿವಾರ ರಾಮದುರ್ಗ ಶಾಸಕರಾದ ಮಹಾದೇವಪ್ಪ ಯಾದವಾಡ ಅವರನ್ನು ಭೇಟಿ ನೀಡಿ ಸರ್ಕಾರಕ್ಕೆ ಒತ್ತಾಯಿಸುವಂತೆ ವಿನಂತಿಸಿದರು.
ಈ ವೇಳೆ ಗ್ರಾಪಂ ಸದಸ್ಯರಾದ ಶಿವಮೂರ್ತಿ ಗುರುಬಸಣ್ಣವರ, ನಾಗಪ್ಪ ಗಣಮುಖಿ, ಮಾಜಿ ಸದಸ್ಯ ಮರಿಯಪ್ಪ ಬಾರಕೇರ, ಸುರೇಶ ಗಣಮುಖಿ, ನಾಗಪ್ಪ ದೇವನಾಳ, ಎಸ್.ಆರ್. ಗುರುಬಸಣ್ಣವರ, ರಾಮನಗೌಡ ಪಾಟೀಲ, ಬಸಪ್ಪ ಇಟಗಿ, ಮಲ್ಲಪ್ಪ ಬೇವಿನಮರದ, ಬಸವರಾಜ ಬಿಳಗಿ, ಮಹಾದೇವಪ್ಪ ಗಾಣಿಗೇರ, ಮುರುಗೆಪ್ಪ ಕೊಣ್ಣೂರ ಸೇರಿದಂತೆ ಮತ್ತಿತರರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ