ಮಾ.27 ರಂದು ಕಾಶಿ ಶ್ರೀ ವಿಶ್ವನಾಥ ದರ್ಶನಕ್ಕೆ ಹುಬ್ಬಳ್ಳಿಯಿಂದ ವಿಶೇಷ ರೈಲು: ಅಣ್ಣಾಸಾಹೇಬ ಜೊಲ್ಲೆ
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ: ಮಹದಾಯಿ ಕಳಸಾ ಬಂಡೂರಿ ಹೋರಾಟದಲ್ಲಿ ತೊಡಗಿದ್ದ ರೈತರು ಮಹಿಳೆಯರು ಹಾಗೂ ಸಾರ್ವಜನಿಕರ ಕಾಶಿಯ ಶ್ರೀ ವಿಶ್ವನಾಥ ದೇವರಿಗೆ ಮಹದಾಯಿ ನೀರಿನಿಂದ ಅಭೀಷೇಕ ಮಾಡುವ ಸಂಕಲ್ಪ ಸಾಕಾರವಾಗಿಸುವ ನಿಟ್ಟಿನಲ್ಲಿ ಕಾಶಿಗೆ ವಿಶೇಷ ರೈಲು ವ್ಯವಸ್ಥೆಯನ್ನು ಸಂಸದ ಅಣ್ಣಾಸಾಹೇಬ್ ಜೊಲ್ಲೆ ಕಲ್ಪಿಸಿದ್ದಾರೆ.
ಶ್ರೀ ವಿಶ್ವನಾಥ ದೇವರಿಗೆ ಮಹದಾಯಿ ನೀರಿನಿಂದ ಅಭೀಷೇಕ ಮಾಡಲು ಮತ್ತು ದರ್ಶನ ಪಡೆಯಲು ಕಾಶಿಗೆ ಪ್ರಯಾಣಿಸುವುದಕ್ಕಾಗಿ ವಿಶೇಷ ರೈಲು ಬಿಡುವಂತೆ ರೈತ ಸೇನಾ ಕರ್ನಾಟಕ ಸಂಘಟನೆಯವರು ಅಣ್ಣಾಸಾಹೇಬ ಜೊಲ್ಲೆ ಇವರಿಗೆ ಮನವಿ ಮಾಡಿದ್ದರು. ಈ ಮನವಿ ಮೇರೆಗೆ ಹುಬ್ಬಳ್ಳಿಯ ನೈಋತ್ಯ ರೈಲ್ವೆ, ಅಧಿಕಾರಿಗಳಿಗೆ ಹುಬ್ಬಳ್ಳಿಯಿಂದ ಬನಾರಸ್ ಗೆ ವಿಶೇಷ ರೈಲು ವ್ಯವಸ್ಥೆ ಮಾಡಲು ಜೊಲ್ಲೆ ಸೂಚಿಸಿದ್ದರು.
ಸಂಸದರ ಸೂಚನೆ ಮೇರೆಗೆ ಅಧಿಕಾರಿಗಳು ಮಾ.27 ರಂದು ರಾತ್ರಿ 8.30ಕ್ಕೆ ಹುಬ್ಬಳ್ಳಿಯಿಂದ ಬನಾರಸ್ ಗೆ ವಿಶೇಷ ರೈಲು ನಂ. 07347/07348 ಹೊರಡಲಿದೆ. ಇದೇ ರೈಲು ಬನಾರಸ್ ನಿಂ ದ ಮಾ.29 ರಂದು ಮರಳಿ ಬಿಡಲು ಆದೇಶ ಹೊರಡಿಸಿದ್ದಾರೆ.
ಆದರಿಂದ ಕಾಶಿಯ ಶ್ರೀ ವಿಶ್ವನಾಥ ದರ್ಶನಕ್ಕೆ ಹೋಗಲು ಎಲ್ಲಾ ಭಕ್ತಾದಿಗಳು ಹಾಗೂ ಸಾರ್ವಜನಿಕರು ಇದರ ಸದುಪಯೋಗ ಪಡೆಯುವಂತೆ ಸಂಸದ ಅಣ್ಣಾಸಾಹೇಬ ಜೊಲ್ಲೆಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ