ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಿಗೆ ಲೋಕಾಯುಕ್ತ ಅಧಿಕಾರಿಗಳು ಮಾರ್ಚ.೨೪ ರಿಂದ ೩೦ ರವರೆಗೆ ಭೇಟಿ ನೀಡಲಿದ್ದಾರೆ.
ಸರ್ಕಾರಿ ಕಛೇರಿಗಳಲ್ಲಿ ಅಧಿಕೃತ ಕೆಲಸಗಳನ್ನು ಮಾಡಿಕೊಡುವಲ್ಲಿ ವಿಳಂಬ ಹಾಗೂ ಸದರಿ ಸರ್ಕಾರಿ ಕೆಲಸ ನಿರ್ವಹಿಸಲು ಹಣ, ಲಂಚ, ವಸ್ತುಗಳ ಬೇಡಿಕೆ ಇಟ್ಟಲ್ಲಿ ಸಾರ್ವಜನಿಕರು ತಮ್ಮ ದೂರುಗಳನ್ನು ನೇರವಾಗಿ ಲೋಕಾಯುಕ್ತ ಅಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ.
ಲೋಕಾಯುಕ್ತ ಅಧಿಕಾರಿಗಳ ತಾಲ್ಲೂಕುವಾರು ಭೇಟಿ ವಿವರ:
ಕರ್ನಾಟಕ ಲೋಕಾಯುಕ್ತ ಡಿ.ಎಸ್.ಪಿ. ಬಿ.ಎಸ್ ಪಾಟೀಲ, ಮಾ.೨೪ ರಂದು ಬೆಳಿಗ್ಗೆ ೧೧ ಗಂಟೆಯಿಂದ ೨ ವರೆಗೆ ಕ. ಲೋ. ಕಛೇರಿ ಬೆಳಗಾವಿ, ಯು.ಎಸ್.ಅವಟಿ ಇವರು ಮಾ.೨೪ ರಂದು ಬೆಳಿಗ್ಗೆ ೧೧ ರಿಂದ ೨ ಗಂಟೆಯವರೆಗೆ ಪ್ರವಾಸಿ ಮಂದಿರ ರಾಮದುರ್ಗ, ಲೋಕಾಯುಕ್ತ ಡಿ.ಎಸ್.ಪಿ. ಜೆ.ರಘು ಮಾ.೨೭ ರಂದು ಬೆಳಿಗ್ಗೆ ೧೦:೩೦ ರಿಂದ ೧ ಗಂಟೆವರೆಗೆ ಪ್ರವಾಸಿ ಮಂದಿರ ಗೋಕಾಕ, ಲೋಕಾಯುಕ್ತ ಡಿ.ಎಸ್.ಪಿ. ಜೆ.ರಘು ಮಾ.೨೭ ರಂದು ಮಧ್ಯಾಹ್ನ ೦೨ ರಿಂದ ೪.೩೦ ಗಂಟೆಯವರೆಗೆ ತಹಶೀಲ್ದಾರ ಕಛೇರಿ ಮೂಡಲಗಿ, ಕರ್ನಾಟಕ ಲೋಕಾಯುಕ್ತ ಪಿಐ .ನಿರಂಜನ ಎಮ್. ಪಾಟೀಲ ಮಾ.೨೭ ರಂದು ಬೆಳಿಗ್ಗೆ ೧೧ ರಿಂದ ೨ ಗಂಟೆಯವರೆಗೆ ಪ್ರವಾಸಿ ಮಂದಿರ ಚಿಕ್ಕೋಡಿ, ಪಿಐ ಯು.ಎಸ್. ಅವಟಿ ಇವರು ಮಾ.೨೭ ರಂದು ಬೆಳಿಗ್ಗೆ ೧೧ ರಿಂದ ೨ ಗಂಟೆ ವರೆಗೆ ಪ್ರವಾಸಿ ಮಂದಿರ ಹುಕ್ಕೇರಿ, ಇಲ್ಲಿ ಸಾರ್ವಜನಿಕರ ಭೇಟಿಗೆ ಲಭ್ಯವಿರುತ್ತಾರೆ.
ಕರ್ನಾಟಕ ಲೋಕಾಯುಕ್ತ ಪಿಐ. ನಿರಂಜನ ಎಮ್. ಪಾಟೀಲ ಮಾ.೨೮ ರಂದು ಬೆಳಿಗ್ಗೆ ೧೧ ರಿಂದ ೨ ಗಂಟೆಯವರೆಗೆ ಪ್ರವಾಸಿ ಮಂದಿರ ರಾಯಬಾಗ. ಪಿಐ ಅನ್ನಪೂರ್ಣ ಎಮ್. ಹುಲಗೂರ ಮಾ.೨೮ ರಂದು ಬೆಳಿಗ್ಗೆ ೧೧ ರಿಂದ ೨ ಗಂಟೆ ವರೆಗೆ ಪ್ರವಾಸಿ ಮಂದಿರ ಕಿತ್ತೂರು, ಪಿಐ ಪಿ.ಆರ್.ಧಬಾಲಿ ಮಾ.೨೮ ರಂದು ಬೆಳಿಗ್ಗೆ ೧೧ ರಿಂದ ೨ ಗಂಟೆ ವರೆಗೆ ಪ್ರವಾಸಿ ಮಂದಿರ ನಿಪ್ಪಾಣಿ, ಅನ್ನಪೂರ್ಣ ಎಮ್. ಹುಲಗೂರ ಇವರು ಮಾ.೨೯ ರಂದು ೧೧ ರಿಂದ ೨ ಗಂಟೆಯವರೆಗೆ ಪ್ರವಾಸಿ ಮಂದಿರ ಖಾನಾಪೂರ, ಭೇಟಿ ನೀಡಲಿದ್ದಾರೆ.
ಡಿ.ಎಸ್.ಪಿ. ಭರತ ಎಸ್.ಆರ್ ಇವರು ಮಾ.೨೯ ರಂದು ಬೆಳಿಗ್ಗೆ ೧೧ ರಿಂದ ೨ ಗಂಟೆ ವರೆಗೆ ಪ್ರವಾಸಿ ಮಂದಿರ ಸವದತ್ತಿ, . ಡಿ.ಎಸ್.ಪಿ. ಭರತ ಎಸ್.ಆರ್ ಇವರು ಮಾ.೨೯ ರಂದು ಬೆಳಿಗ್ಗೆ ೧೧ ರಿಂದ ೨ ಗಂಟೆ ವರೆಗೆ ಪ್ರವಾಸಿ ಮಂದಿರ ಸವದತ್ತಿ, ಪಿಐ ಪಿ.ರವಿಕುಮಾರ ಧರ್ಮಟ್ಟಿ ಇವರು ಮಾ. ೨೯ ರಂದು ಬೆಳಿಗ್ಗೆ ೧೧ ರಿಂದ ೨ ಗಂಟೆ ವರೆಗೆ ಪ್ರವಾಸಿ ಮಂದಿರ ಕಾಗವಾಡ, ಡಿ.ಎಸ್.ಪಿ.ಭರತ ಎಸ್ ಆರ್ ಇವರು ಮಾ.೩೦ ರಂದು ೧೧ ರಿಂದ ೨ ಗಂಟೆ ವರೆಗೆ ಪ್ರವಾಸಿ ಮಂದಿರ ಬೈಲಹೊಂಗಲ ಭೇಟಿ ನೀಡಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಈ ದೂರವಾಣಿ ಸಂಖ್ಯೆ ೦೮೩೧-೨೯೫೦೭೫೬ ಹಾಗೂ ೦೮೩೧-೨೪೨೧೯೨೨ ಯನ್ನು ಸಂಪರ್ಕಿಸಬಹುದು ಎಂದು ಬೆಳಗಾವಿಯ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ