Kannada NewsKarnataka News

ರಾಷ್ಟ್ರೀಯ ಹ್ಯಾಕಥಾನ್ ಪ್ರಶಸ್ತಿ ಗೆದ್ದ ಕೆಎಲ್ಎಸ್ ಜಿಐಟಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಾರ್ಚ್ 24 ಮತ್ತು 25 ರಂದು ಡಿ-ಲಿಟ್ ಸಹಯೋಗದೊಂದಿಗೆ ಗದಗದ ತೋಂಟದಾರ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ ನಡೆಸಿದ ರಾಷ್ಟ್ರೀಯ ಮಟ್ಟದ ಹ್ಯಾಕಥಾನ್ ಸ್ಪರ್ಧೆಯಲ್ಲಿ ಕೆಎಲ್ಎಸ್ ಜಿಐಟಿನ ವಿದ್ಯಾರ್ಥಿ ತಂಡ  ಪ್ರಥಮ ಸ್ಥಾನ ಗಳಿಸಿತು. ಇದರೊಂದಿಗೆ 30,000 ರೂ. ಗಳ ನಗದು ಬಹುಮಾನವನ್ನು ಬಾಚಿಕೊಂಡರು.  

ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳ ತಂಡವು ಶ್ರೀರಾಮ್ ನಾಯಕ್ ಮತ್ತು ಔಮ್ ಪೌಸ್ಕರ್ ಅವರನ್ನು ಒಳಗೊಂಡಿತ್ತು. ವಿವಿಧ ಇಂಜಿನಿಯರಿಂಗ್ ಕಾಲೇಜುಗಳ ಒಟ್ಟು 80 ವಿದ್ಯಾರ್ಥಿ ತಂಡಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು. ಈ ತಂಡಕ್ಕೆ ಪ್ರೊ.ಸಾಗರ ಪೂಜಾರ್ ಮಾರ್ಗದರ್ಶನ ನೀಡಿದ್ದು, ಪ್ರೊ.ಗಜೇಂದ್ರ ದೇಶಪಾಂಡೆ ಮತ್ತು , ಪ್ರೊ.ವಿದ್ಯಾಧೀಶ ಪಾಂಡುರಂಗಿ ಅವರು ಸಹಮಾರ್ಗದರ್ಶನ ನೀಡಿದ್ದರು.

ಕೆಎಲ್‌ಎಸ್ ಮ್ಯಾನೇಜ್‌ಮೆಂಟ್, ಕೆಎಲ್‌ಎಸ್ ಜಿಐಟಿ ಪ್ರಾಚಾರ್ಯ ಪ್ರೊ.ಡಿ.ಎ.ಕುಲಕರ್ಣಿ, ವಿದ್ಯಾರ್ಥಿ ವ್ಯವಹಾರಗಳ ಡೀನ್ ಪ್ರೊ.ಸತೀಶ್ ದೇಶಪಾಂಡೆ, ಡಾ.ವಿಜಯ್ ಎಸ್.ರಾಜಪುರೋಹಿತ್ ವಿಭಾಗ ಮುಖ್ಯಸ್ಥರು,ಸಿಎಸ್‌ಇ, ಡಾ.ರುದ್ರಗೌಡ ಪಾಟೀಲ್ ಮತ್ತು ಎಸಿಇ-ಸಿಎಸ್‌ಐ ಸಂಯೋಜಕಿ ಪ್ರೊ.ನಮಿತಾ ಭಟ್ ಇತರರು ತಂಡವನ್ನು ಅಭಿನಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button