ಅಮೃತ ಸರೋವರಕ್ಕೆ ಉತ್ತೇಜನೆ ನೀಡಲು ಕೇಂದ್ರ ಸರ್ಕಾರದ ಕ್ರಮ-ಸಂಸದ ಈರಣ್ಣ ಕಡಾಡಿ

ಪ್ರಗತಿವಾಹಿನಿ ಸುದ್ದಿ, ಮೂಡಲಗಿ : ದೇಶಾದ್ಯಂತ ೫೦೦ ನಗರಗಳನ್ನು ಅಟಲ್ ಮಿಷನ್ ೨.೦ (ಅಮೃತ್) ಯೋಜನೆಯಡಿ ಪುನರುಜ್ಜೀವನಗೊಳಿಸುವ ಹಾಗೂ ನಗರ, ಪಟ್ಟಣ ಪ್ರದೇಶದಲ್ಲಿ ಮೂಲಸೌಕರ್ಯ ಸುಧಾರಣೆಗೆ ಕೇಂದ್ರ ಸರ್ಕಾರವು ಅಟಲ್ ಮಿಷನ್ ೨.೦ ಯೋಜನೆಯಡಿ ೬,೫೨೭ ಯೋಜನೆಗಳಲ್ಲಿ ೩೬,೪೮೧.೪೭ ಕೋಟಿ ಮೌಲ್ಯದ ೨,೦೫೮ ಯೋಜನೆಗಳಿಗೆ ಅನುಮೋದಿಸಲ್ಪಟ್ಟಿವೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ ಕೌಶಲ್ ಕಿಶೋರ್ ಅವರು ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಅಟಲ್ ಮಿಷನ್ ೨.೦ (ಅಮೃತ್) ಯೋಜನೆಯ ಅನುಷ್ಠಾನದ ಕುರಿತು ಸಂಸದರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ರೂ. ೧೯,೧೫೭.೫೫ ಕೋಟಿ ಮೌಲ್ಯದ ೧,೦೨೫ ಯೋಜನೆಗಳಿಗೆ ಟೆಂಡರ್ ಆಹ್ವಾನ ಪತ್ರವನ್ನು ಹೊರಡಿಸಲಾಗಿದೆ, ೬೦ ಕಾಮಗಾರಿಗಳಿಗೆ ಪ್ರಶಸ್ತಿ ನೀಡಲಾಗಿದೆ. ರೂ ೫,೪೨೨.೮೨ ಕೋಟಿ ಮೌಲ್ಯದ ಯೋಜನೆಗಳು ಮತ್ತು ರೂ ೧೦೨.೯೯ ಕೋಟಿ ಮೌಲ್ಯದ ೨೯ ಯೋಜನೆಗಳು ಪೂರ್ಣಗೊಂಡಿವೆ. ಅಮೃತ್ ಯೋಜನೆಗಳ ಮೂಲಕ ೧೪೮ ಲಕ್ಷ ಹೊಸ ನಲ್ಲಿ ಸಂಪರ್ಕಗಳನ್ನು ಮತ್ತು ೩೩.೪೨ ಲಕ್ಷ ಹೊಸ ಒಳಚರಂಡಿ ಸಂಪರ್ಕಗಳನ್ನು ಒದಗಿಸಲು ಯೋಜಿಸಲಾಗಿದೆ. ಇದಲ್ಲದೆ, ದಿನಕ್ಕೆ ೮,೪೩೫ ಮಿಲಿಯನ್ ಲೀಟರ್ ನೀರು ಸಂಸ್ಕರಣಾ ಘಟಕದ ಸಾಮರ್ಥ್ಯ ಮತ್ತು ೨,೭೯೫ ಒಳಚರಂಡಿ ಸಂಸ್ಕರಣಾ ಘಟಕದ ಸಾಮರ್ಥ್ಯವನ್ನು ವರ್ಧಿಸಲು ಪ್ರಸ್ತಾಪಿಸಲಾಗಿದೆ. ಇದಲ್ಲದೆ, ಆಜಾದಿ ಕಾ ಅಮೃತ್ ಮಹೋತ್ಸವದ ಅಡಿಯಲ್ಲಿ ಅಮೃತ ಸರೋವರ’ಕ್ಕೆ ಉತ್ತೇಜನ ನೀಡಲು ರೂ ೩,೬೬೪ ಕೋಟಿ ಮೌಲ್ಯದ ೨,೧೦೨ ಜಲಮೂಲಗಳ ಪುನರುಜ್ಜೀವನ ಯೋಜನೆಗಳನ್ನು ಅನುಮೋದಿಸಲಾಗಿದೆ ಎಂದು ಸಚಿವರು ಉತ್ತರಿಸಿದ್ದಾರೆಂದು ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.

https://pragati.taskdun.com/foundation-laying-of-various-works-of-gokaka-athani-arabhavi-fields/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button