Latest

ಸಣ್ಣ ಉಳಿತಾಯ ಯೋಜನೆ ಹೂಡಿಕೆದಾರರಿಗೆ ಸಿಹಿ ಸುದ್ದಿ

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಹೊಸ ಆರ್ಥಿಕ ವರ್ಷ 2023-24 ಆರಂಭದಲ್ಲೇ ಸರಕಾರ ಸಣ್ಣ ಉಳಿತಾಯ ಯೋಜನೆಯಡಿ ಹೂಡಿಕೆ ಮಾಡುವವರಿಗೆ ಸಿಹಿ ಸುದ್ದಿ ನೀಡಿದೆ.

ಸುಕನ್ಯಾ ಸಮೃದ್ಧಿ ಯೋಜನೆ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC), ಕಿಸಾನ್ ವಿಕಾಸ ಪತ್ರ, ಅಂಚೆ ಕಚೇರಿ ಠೇವಣಿ ಪತ್ರ, ಹಿರಿಯ ನಾಗರಿಕರ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವವರಿಗೆ ಬಡ್ಡಿದರ ಹೆಚ್ಚಿಸಿದೆ. ಈ ಮೂಲಕ 9 ತಿಂಗಳ ಅವಧಿಯಲ್ಲಿ 3ನೇ ಬಾರಿ ಸಣ್ಣ ುಳಿತಾಯ ಯೋಜನೆಗಳ ಬಡ್ಡಿದರವನ್ನು ಸರಕಾರ ಬದಲಾಯಿಸಿದಂತಾಗಿದೆ.

ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ, ಅಂದರೆ ಏಪ್ರಿಲ್ ನಿಂದ ಜೂನ್ ವರೆಗೆ ಈ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಶೇ.0.10ರಿಂದ ಶೇ.0.70ರಷ್ಟು ಹೆಚ್ಚಳ ಮಾಡಿದೆ.

  • NSCಗೆ ಶೇ. 7ರಿಂದ 7.7 ಕ್ಕೆ ಹೆಚ್ಚಳ
  • ಸುಕನ್ಯಾ ಸಮೃದ್ಧಿ 7.6ರಿಂದ 8 ಕ್ಕೆ ಹೆಚ್ಚಳ
  • ಹಿರಿಯ ನಾಗರಿಕರ ಉಳಿತಾಯ ಯೋಜನೆ 8ರಿಂದ 8.2 ಕ್ಕೆ ಹೆಚ್ಚಳ
  • ಕಿಸಾನ್ ವಿಕಾಸ ಪತ್ರ 7.2ರಿಂದ 7.5ಕ್ಕೆ ಹೆಚ್ಚಳ

ಆದರೆ PPF ಬಡ್ಡಿದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಬದಲಾಗಿ ಶೇ.7.1ರ ಮುಂದುವರಿಯಲಿದೆ.

https://pragati.taskdun.com/it-will-rain-for-three-days-from-today-in-different-parts-of-the-state/
https://pragati.taskdun.com/mla-lakshmi-hebbalkars-special-effort-belagundi-hospital-now-has-solar-power/
https://pragati.taskdun.com/qatar-airways-sports-sponsorship-with-royal-challengers-bangalore/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button