ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕನ್ನಡದ ಜನಪ್ರಿಯ ಧಾರಾವಾಹಿ ಮಂಗಳಗೌರಿ ಮದುವೆ ಸಿರಿಯಲ್ ಮೂಲಕ ನೆಗೆಟಿವ್ ಶೇಡ್ ನಲ್ಲಿ ಪ್ರೇಕ್ಷಕರ ಮನಗೆದ್ದಿರುವ ನಟಿ ತನಿಷಾ ಕುಪ್ಪಂಡ ಅಭಿನಯದ ಪೆಂಟಗನ್ ಸಿನಿಮಾ ಏಪ್ರಿಲ್ 7ರಂದು ತೆರೆ ಕಾಣಲಿದೆ.
ಸಿನಿಮಾದಲ್ಲಿ ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ತನಿಷಾ, ಯೂಟ್ಯೂಬರ್ ಓರ್ವರಿಂದ ಮುಜುಗರದ ಸನ್ನಿವೇಶ ಎದುರಿಸಿದ್ದಾರೆ. ತನಿಷಾ ಅವರಿಗೆ ಮುಜುಗರಕ್ಕೀಡಾಗುವ ಪ್ರಶ್ನೆ ಕೇಳಿದ್ದ ಯೂಟ್ಯೂಬರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಪೆಂಟಗನ್ ಸಿನಿಮಾ ಐದು ವಿಭಿನ್ನ ಕಥೆಯನ್ನು ಒಳಗೊಂಡಿರುವ ಐವರು ನಿರ್ದೇಶಕರು ನಿರ್ದೇಶಿಸಿರುವ ಚಿತ್ರ ಈ ಸಿನಿಮಾದಲ್ಲಿ ತನಿಷಾ ಕುಪ್ಪಂಡ ಲಿಪ್ ಲಾಕ್, ಬ್ಯಾಕ್ ಲೆಸ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಪ್ರಚಾರದ ಭಾಗವಾಗಿ ತನಿಷಾ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಯೂಟ್ಯೂಬರ್, ನೀವು ಬ್ಲುಫಿಲ್ಮ್ ನಲ್ಲಿ ಕಾಣಿಸಿಕೊಳ್ತೀರಾ? ಎಂದು ಪ್ರಶ್ನಿಸಿದ್ದಾನೆ.
ನಟಿ ತನಿಷಾ ಆಕ್ರೋಶ ವ್ಯಕ್ತಪಡಿಸಿದ್ದು, ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಡ ಮಾತ್ರಕ್ಕೆ ನೀಲಿ ಚಿತ್ರದಲ್ಲಿ ಅಭಿನಯಿಸುತ್ತೀರಾ? ಎಂದು ಕೇಳುತ್ತೀದ್ದೀರಾ? ನಾನು ನೀಲಿ ಚಿತ್ರದ ತಾರೆಯಲ್ಲ, ಇಂತಹ ಅಸಭ್ಯ ಪ್ರಶ್ನೆಗಳನ್ನು ಕೇಳುವ ಮುನ್ನ ಎಚ್ಚರವಿರಲಿ. ಮಾತನಾಡುವ ಮುನ್ನ ಎಚ್ಚರವಿರಬೇಕು ಕನ್ನಡದಲ್ಲಿ ಯಾವ ನಟಿಯೂ ನೀಲಿ ಚಿತ್ರದಲ್ಲಿ ಕಾಣಿಸಿಕೊಂಡಿಲ್ಲ. ನಾನು ಕನ್ನಡ ಚಿತ್ರರಂಗದಲ್ಲಿ ನಟಿಸುತ್ತಿದ್ದೇನೆ ನಿಮಗೆ ಸಂದರ್ಶನ ಕೊಡುವುದಿಲ್ಲ ಎಂದು ಮೈಕ್ ಕಿತ್ತು ಸಂದರ್ಶನದ ಮಧ್ಯೆಯೇ ಹೊರ ನಡೆದಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಯೂಟ್ಯೂಬರ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ