Karnataka News

ಅತಂತ್ರ ವಿಧಾನಸಭೆ ಸೃಷ್ಟಿಯಾಗಲ್ಲ : ಮುರುಗೇಶ ನಿರಾಣಿ

ಪೂರ್ಣ ಬಹುಮತದೊಂದಿಗೆ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ, ಡಬಲ್ ಇಂಜಿನ್ ಸರ್ಕಾರದ ಲಾಭ ಕರ್ನಾಟಕಕ್ಕೆ ಸಿಕ್ಕಿದೆ

ಪ್ರಗತಿವಾಹಿನಿ ಸುದ್ದಿ, ಬೀಳಗಿ: ಬೀಳಗಿ ಮತಕ್ಷೇತ್ರದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರಿ ಸೌಲಭ್ಯ ದೊರಕಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಕಳೆದ ೨೦ ವರ್ಷಗಳಿಂದ ನನ್ನನ್ನು ಎತ್ತರದ ಸ್ಥಾನಕ್ಕೆ ಏರಿಸಿದ ಬೀಳಗಿ ಜನತೆಯ ಭಾವನೆಗಳಿಗೆ ಸ್ಪಂದಿಸಿ ಜನಪರ ಕೆಲಸ ಮಾಡಿದ ಸಂತೃಪ್ತಿ ನನ್ನಲ್ಲಿದೆ. ನನ್ನ ಎಲ್ಲ ಕನಸುಗಳು ಸಾಕಾರವಾಗಿ ಬೀಳಗಿ ಕ್ಷೇತ್ರ ರಾಜ್ಯದಲ್ಲಿಯೇ ಅಭಿವೃದ್ದಿಯಲ್ಲಿ ನಂ.೧ ಸ್ಥಾನಕ್ಕೇರುವ ಕಾಲ ಸನ್ನಿಹಿತವಾಗಿದೆ ಎಂದು ಮುರುಗೇಶ ನಿರಾಣಿ ಹೇಳಿದರು.
ಹನುಮ ಜಯಂತಿಯ ನಿಮಿತ್ಯ ತುಳಸಿಗೇರಿ ಹನುಮಾನ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಶೋಭಾಯಾತ್ರೆಗೆ ಚಾಲನೆ ನೀಡಿದ ನಂತರ ಅಗಸನಕೊಪ್ಪ ಗ್ರಾಮದಲ್ಲಿ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ರೈತರಿಗೆ ನೀರು, ವಿದ್ಯುತ್ ಹಾಗೂ ಬಡಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಆದ್ಯತೆಯ ಮೇರೆಗೆ ನೀಡಿದ್ದೇನೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ನಿಷ್ಪಕ್ಷಪಾತವಾಗಿ ದೊರೆಯುವಂತೆ ನೋಡಿಕೊಂಡಿದ್ದೇನೆ. ಜಾತಿ, ಮತಗಳ ಬೇಧ ಮರೆತು ಎಲ್ಲ ಸಮಾಜದವರು ನನ್ನನ್ನು ಪ್ರೀತಿಸುವ ನಿಮ್ಮ ಅಭಿಮಾನಕ್ಕೆ ನಾನು ಚಿರಋಣಿ . ಮುಂಬರುವ ಚುನಾವಣೆಯಲ್ಲಿ ಮತ್ತೊಮ್ಮೆ ತಾವೆಲ್ಲ ಆಶಿರ್ವದಿಸುವ ಮೂಲಕ ಇನ್ನಷ್ಟು ಜನಸೇವೆಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಕಳೆದ ೭೫ ವರ್ಷಗಳ ಅವಧಿಯಲ್ಲಿ ಕಾಂಗ್ರೇಸ್-ಜೆಡಿಎಸ್ ಸರ್ಕಾರದಿಂದ ವಂಚಿತವಾದ ಅಭಿವೃದ್ದಿ ಡಬಲ್ ಇಂಜನ್ ಸರ್ಕಾರದಿಂದ ಆಗಿದೆ. ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯ, ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಬಲಿಷ್ಟವಾಗುತ್ತಿದೆ. ಜನತೆ ಬಿಜೆಪಿ ಜೊತೆಗಿದ್ದಾರೆ. ಕಾಂಗ್ರೇಸ್ ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರುವ ಹಗಲುಗನಸು ಕಾಣುತ್ತಿದೆ ಅತಂತ್ರ ವಿಧಾನಸಭೆ ಸೃಷ್ಟಿಯಾಗಲ್ಲ, ಪೂರ್ಣಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬಂದು ಜನಸೇವೆ ಮಾಡುತ್ತೇವೆ ಎಂದು ನಿರಾಣಿ ಹೇಳಿದರು


ಕಾಂಗ್ರೇಸ್ ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿ ಸೇರ್ಪಡೆ


ಮುರುಗೇಶ ನಿರಾಣಿಯವರ ಅಭವೃದ್ದಿ ಕಾರ್ಯಗಳನ್ನು ಮೆಚ್ಚಿ ಮತ್ತಿಕಟ್ಟಿ ಗ್ರಾಮದ ಬಸವರಾಜ ಬನ್ನಿದಿನ್ನಿ, ಡೊಂಗ್ರಿಸಾಬ ನದಾಫ ಮತ್ತು ಬೆಂಬಲಿಗರು ಹಾಗೂ ನೀರಬೂದಿಹಾಳ ಗ್ರಾಮದ ಧರಿಯಪ್ಪ ಕೊಟ್ರನ್ನವರ, ಶೇಖಪ್ಪ ಹೂಲಗೇರಿ ಮತ್ತು ಅಗಸನಕೊಪ್ಪ ಗ್ರಾಮದ ಮಹಿಳಾ ಸಂಘದ ಸದಸ್ಯೆಯರಾದ ಲಕ್ಕವ್ವ ಮಾದರ, ಲಕ್ಷ್ಮವ್ವ ಹೊಸಮನಿ, ಇಂದ್ರವ್ವ ಪಾಟೀಲ, ಶೈಲಾ ಹಿರೇಗೌಡರ, ಗೀತಾ ಮಾದರ ಹಾಗೂ ನೂರಾರು ಪ್ರಚಾರ ವೇಳೆಯಲ್ಲಿ ಸೂಳಿಕೇರಿ, ಅಗಸನಕೊಪ್ಪ, ಮತ್ತಿಕಟ್ಟಿ, ನೀರಬುದಿಹಾಳ ಗ್ರಾಮಗಳ ನೂರಾರು ಕಾರ್ಯಕರ್ತರು ಕಾಂಗ್ರೇಸ್ ತೊರೆದು ಬಿಜೆಪಿ ಸೇರ್ಪಡೆಯಾದರು.

https://pragati.taskdun.com/vidhanasabha-electiondavanagere7-5-lakhsiezed/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button