ಎಸ್ಸೆಸ್ಸೆಲ್ಸಿ ಪರೀಕ್ಷಾ ಅಕ್ರಮ, ಕರ್ತವ್ಯ ಲೋಪ: ಬೆಳಗಾವಿಯಲ್ಲೂ 7 ಶಿಕ್ಷಕರ ಅಮಾನತು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಎಸ್ಸೆಸ್ಸೆಲ್ಸಿ ಪರೀಕ್ಷಾ ಅಕ್ರಮ, ಕರ್ತವ್ಯ ಲೋಪ ಆರೋಪದ ಮೇಲೆ ಬೆಳಗಾವಿಯಲ್ಲೂ 7 ಶಿಕ್ಷಕರನ್ನು ಅಮಾನತುಗೊಳಿಸಿ ಡಿಡಿಪಿಐ ಬಸವರಾಜ ನಾಲತವಾಡ ಆದೇಶ ಹೊರಡಿಸಿದ್ದಾರೆ.
ನಿನ್ನೆಯಷ್ಟೆ ಕಲಬುರಗಿಯಲ್ಲಿ 16 ಶಿಕ್ಷಕರನ್ನು ಅಮಾನತುಗೊಳಿಸಲಾಗಿತ್ತು. ಇದೀಗ ಬೆಳಗಾವಿಯಲ್ಲೂ 7 ಶಿಕ್ಷಕರನ್ನು ಅಮಾನತಿಗೊಳಿಸಿ ಆದೇಶ ಹೊರಡಿಸಲಾಗಿದೆ.
ಡಿಡಿಪಿಐ ಹೊರಡಿಸಿದ ಆದೇಶ ಹೀಗಿದೆ:
3:3-4-2023ರಂದು ಎಸ್.ಎಸ್.ಎಲ್.ಸಿ ಗಣಿತ ಪರೀಕ್ಷೆಯ ದಿನದಂದು ಉಲ್ಲೇಖ(3)ರ ಪ್ರಕಾರ ಮಾನ್ಯ ಆಪರ ಆಯುಕ್ತರು ಶಾಲಾ ಶಿಕ್ಷಣ ಇಲಾಖೆ ಧಾರವಾಡ ಇವರು ಕರ್ನಾಟಕ ಪ್ರೌಢ ಶಾಲೆ ಹಿರೇಬಾಗೇವಾಡಿ ತಾ, ಬೆಳಗಾವಿ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದಾಗ ಪರೀಕ್ಷಾ ಕೇಂದ್ರದಲ್ಲಿ ಕೊಠಡಿ ಮೇಲ್ವಿಚಾರಕರು ಮಕ್ಕಳನ್ನು ಸರಿಯಾಗಿ ತಪಾಸಣೆ ಮಾಡದೇ ಇರುವುದು ಮತ್ತು ಪೋಲಿಸ್ ವ್ಯವಸ್ಥೆ ಸರಿಯಾಗಿ ಮಾಡದೇ ಇರುವುದು, ಶಾಲಾ ಕೊಠಡಿಯ ಹಿಂದುಗಡೆ ಜನ ಓಡಾಡುತ್ತಿರುವುದು, ನಕಲು ಚೀಟಿಗಳನ್ನು ಕೊಠಡಿಯೊಳಗೆ ಎಸೆಯುತ್ತಿರುವುದು ಕಂಡು ಬಂದ ಕಾರಣ ಕೇಂದ್ರದ ಮುಖ್ಯಸ್ಥರು ಹಾಗೂ ಕೊಠಡಿ ಮೇಲ್ವಿಚಾರಕರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಉಲ್ಲೇಖ (3)ರ ಪ್ರಕಾರ ನಿರ್ದೇಶನವನ್ನು ನೀಡಿದಂತೆ ಉಲ್ಲೇಖ(1)ರ ಪ್ರಕಾರ ಕಾರಣ ಕೇಳುವ ನೋಟವನ್ನು ನೀಡಲಾಗಿದೆ. ಉಲ್ಲೇಖ(5)ರ ಪ್ರಕಾರ ಮಾನ್ಯ ಅಪರ ಆಯುಕ್ತರು ಶಾಲಾ ಶಿಕ್ಷಣ ಇಲಾಖೆ ಧಾರವಾಡ ಇವರು ಕರ್ನಾಟಕ ಪ್ರೌಢ ಶಾಲೆ ಹಿರೇಬಾಗೇವಾಡಿ ತಾ, ಬೆಳಗಾವಿ: ಕರ್ನಾಟಕ ನಾಗರಿಕ ಸೇವಾ (ನಡತ ನಿಯಮಗಳು 2021 ನಿಯಮ 3(1) ಉಪನಿಯಮ, , ನ್ನು ಉಲ್ಲಂಘಿಸಿರುವ ಕಾರಣ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತುಗೊಳಿಸಿ ಶಿಸ್ತು ಕ್ರಮ ಜರುಗಿಸುವಂತೆ ನಿರ್ದೇಶನವನ್ನು ನೀಡಿರುತ್ತಾರೆ. ಉಲ್ಲೇಖ(5)ರ ಸುತ್ತೋಲೆಯಂತೆ ಎಸ್.ಎಸ್.ಎಲ್.ಸಿ.ಪರೀಕ್ಷೆಗೆ ಸಂಬಂಧಿಸಿದಂತೆ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ನಿರ್ವಹಿಸಬೇಕಾದ ಕರ್ತವ್ಯಗಳು ಮತ್ತು ಜವಾಬ್ದಾರಿಗಳ ಕುರಿತು ಮಾರ್ಗಸೂಚಿಗಳನ್ನು ಹೊರಡಿಸಿರುತ್ತಾರೆ. ಈ ಸೂಚನೆಯಂತೆ ನೇಮಕವಾದ ಎಲ್ಲ ಅಧಿಕಾರಿಗಳು/ಸಿಬ್ಬಂಧಿಗಳಿಗೆ ಈ ಕಛೇರಿಯಿಂದ ಹಲವಾರು ಸಭೆ, ಜೂಮ್ ಸಭೆ, ಹಾಗೂ ಅನೇಕ ತರಬೇತಿ ಕಾರ್ಯಾಗಾರಗಳ ಮೂಲಕ ನಿರ್ದೇಶನವನ್ನು ನೀಡಲಾಗಿರುತ್ತದೆ. ಆದಾಗ್ಯೂ ಪರೀಕ್ಷೆಯ ನಿಯಮಗಳನ್ನು ಪಾಲಿಸದೇ ಕರ್ತವ್ಯಲೋಪವನ್ನು ಮಾಡಿರುತ್ತಾರೆ. ಎಸ್.ಎಸ್.ಎಲ್.ಸಿ. ಪರೀಕ್ಷೆಯು ಇಲಾಖೆಯ ಮಹತ್ವಾಕಾಂಕ್ಷೆಯ ಕಾರ್ಯವಾಗಿದ್ದು, ಈ ಪರೀಕ್ಷಾ ಕೇಂದ್ರದ ಪರೀಕ್ಷಾ ಕಾರ್ಯನಿರತ ಶಿಕ್ಷಕರ ಕರ್ತವ್ಯ ನಿರ್ಲಕ್ಷತೆ ಹಾಗೂ ಪರೀಕ್ಷೆಯ ಪಾವಿತ್ರ್ಯತೆಯನ್ನು ಕಾಪಾಡುವಲ್ಲಿ ವಿಫಲತೆಯ ಕಾರಣ ಈ ಘಟನೆ ಸಂಭವಿಸಿವುದು ಕಂಡು ಬರುತ್ತದೆ. ಪ್ರಯುಕ್ತ ಮಾನ್ಯ ಅಪರ ಆಯುಕ್ತರು ಸಾ.ಶಿ.ಇಲಾಖೆ ಇವರು ನೀಡಿದ ನಿರ್ದೇಶನದಂತೆ ಪರೀಕ್ಷಾ ಕೇಂದ್ರದ ಸಿಬ್ಬಂದಿಗಳು ಕರ್ನಾಟಕ ನಾಗರಿಕ ಸೇವಾ (ನಡತೆ ನಿಯಮಗಳು 2021 ನಿಯಮ 3(1) ಉಪನಿಯಮ 1, ii, iii ನ್ನು ಉಲ್ಲಂಘಿಸಿರುವ ಪ್ರಯುಕ್ತ ದಿ:3-4-2023ರಂದು ನಡೆದ ಪರೀಕ್ಷಾ ಕಾರ್ಯದಲ್ಲಿ ಕಾರ್ಯನಿರ್ವಹಿಸಿದ ಶಿಕ್ಷಕರನ್ನು 1957ರ ಕರ್ನಾಟಕ ಸರಕಾರಿ ನೌಕರರ ಸೇವಾ (ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳ ನಿಯಮ 10ರನ್ವಯ ಇಲಾಖಾ ವಿಚಾರಣೆ ಬಾಕಿ ಇಟ್ಟು ಸೇವೆಯಿಂದ ಅಮಾನತ್ತಿನಲ್ಲಿಡಲು ನಿರ್ಧರಿಸಿ ಈ ಕೆಳಗಿನಂತೆ ಆದೇಶಿಸಿದೆ. ಆದೇಶ:
ಮೇಲಿನ ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳ ಹಿನ್ನಲೆಯಲ್ಲಿ ಕರ್ನಾಟಕ ಸರಕಾರಿ ನೌಕರರ ಸೇವಾ (ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ) ನಿಯಮ 1957 ನಿಯಮ 10ರ ಪ್ರಕಾರ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಬೆಳಗಾವಿ(ದ) ಎಂಬ ನಾನು ಈ ಕೆಳಕಂಡ ಪರೀಕ್ಷಾ ಕಾರ್ಯನಿರತ ಶಿಕ್ಷಕರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಇಲಾಖಾ ಆದೇಶಿಸಲಾಗಿದೆ. ವಿಚಾರಣೆಯನ್ನು ಕಾಯ್ದಿರಿಸಿ ಸೇವೆಯಿಂದ ಅಮಾನತ್ತುಗೊಳಿಸಿ
1)ಶ್ರೀಮತಿ ಎಸ್.ಎಸ್. ಕರವಿನಕೊಪ್ಪ ಸ. ಸ.ಪ್ರೌಢ ಶಾಲೆ ಕೆ.ಕೆ.ಕೊಪ್ಪ ತಾ:ಬೆಳಗಾವಿ 2)ಶ್ರೀ ವಿ.ಎಸ್.ಬಿಳಗಿ ಸ. ಸ.ಪ್ರೌಢ ಶಾಲೆ ಕೆ.ಕೆ.ಕೊಪ್ಪ ತಾ:ಬೆಳಗಾವಿ
3)ಶ್ರೀಮತಿ ಎಲ್.ಆರ್.ಮಹಾಜನಶೆಟ್ಟಿ ಸ.ಪ್ರೌಢ ಶಾಲೆ ಕೆ.ಕೆ.ಕೊಪ್ಪ ತಾ:ಬೆಳಗಾವಿ 4)ಶ್ರೀ ಎಮ್.ಎಸ್.ಅಕ್ಕಿ ಸ.ಶಿ ಸ.ಪ್ರೌಢ ಶಾಲೆ ಕೆ.ಕೆ.ಕೊಪ್ಪ ತಾ:ಬೆಳಗಾವಿ
5)ಶ್ರೀ ಎ.ಎಚ್.ಪಾಟೀಲ ಸ.ಶಿ ಸ.ಪ್ರೌಢ ಶಾಲೆ ಕೆ.ಕೆ.ಕೊಪ್ಪ ತಾಬೆಳಗಾವಿ
6)ಶ್ರೀ ಎನ್.ಎಮ್ ನಂದಿಹಳ್ಳಿ ಸ.ಶಿ ಸರಕಾರಿ ಪ್ರೌಢ ಶಾಲೆ ಹೊಸ ಇದ್ದಿಲಹೊಂಡ ತಾ: ಬೆಳಗಾವಿ 7)ಶ್ರೀಮತಿ ಎಸ್.ಸಿ.ದೂಳಪ್ಪನವರ ಸತಿ ಸರಕಾರಿ ಪ್ರೌಢ ಶಾಲೆ ಸೂಳೆಭಾವಿ ತಾ:ಬೆಳಗಾವಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ