ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಬೆಳಗಾವಿ ನಗರದಲ್ಲಿ ರಸ್ತೆ ಸುರಕ್ಷತೆ ಹಾಗೂ ಸುಗಮ ಸಂಚಾರ ಕಲ್ಪಿಸುವ ನಿಟ್ಟಿನಲ್ಲಿ 21 ಸ್ಥಳಗಳಲ್ಲಿ ಎಲ್ಲ ಮಾದರಿಯ ವಾಹನ ನಿಲುಗಡೆಯನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
೧) ಚನ್ನಮ್ಮಾ ವೃತ್ತ ದಿಂದ ಕೃಷ್ಣದೇವರಾಯ ವೃತ್ತ ದವರೆಗಿನ ಡಾ|| ಬಿ.ಆರ್.ಅಂಬೇಡ್ಕರ ರಸ್ತ್ತೆ.
೨) ಕೃಷ್ಣದೇವರಾಯ ವೃತ್ತ ದಿಂದ ಕೆಎಲ್ಇ ಛತ್ರಿ ವರೆಗಿನ ಕೆಎಲ್ಇ ಆಸ್ಪತ್ರೆ ರಸ್ತ್ತೆ.
೩) ಕೃಷ್ಣದೇವರಾಯ ವೃತ್ತ ದಿಂದ ಸಂಗೊಳ್ಳಿ ರಾಯಣ್ಣ ವೃತ್ತ ದವರೆಗಿನ ಹಳೆ ಪಿಬಿ ರಸ್ತೆ.
೪) ಚನ್ನಮ್ಮಾ ವೃತ್ತ ದಿಂದ ಸಂಗೊಳ್ಳಿ ರಾಯಣ್ಣ ವೃತ್ತ ದವರೆಗಿನ ಸಂಗೊಳ್ಳಿ ರಾಯಣ್ಣ ರಸ್ತ್ತೆ.
೫) ಸಂಗೊಳ್ಳಿ ರಾಯಣ್ಣ ವೃತ್ತ ದಿಂದ ಕಿಲ್ಲಾ ಕೆರೆ ಅಶೋಕ ವೃತ್ತ.
೬) ಕಿಲ್ಲಾ ಕೆರೆ ಅಶೋಕ ವೃತ್ತ ದಿಂದ ಕನಕದಾಸ ವೃತ್ತ.
೭) ಕಿಲ್ಲಾ ಕೆರೆ ಅಶೋಕ ವೃತ್ತ ದಿಂದ ಹೊಸ ಗಾಂಧಿ ನಗರ ವೃತ್ತ
೮) ಸರ್ಕಿಟ್ ಹೌಸ ದಿಂದ ಮುಜಾವರ ಖೂಟ.
೯) ಕೇಂದ್ರ ಬಸ್ ನಿಲ್ದಾಣ ದಿಂದ ವ್ಹಿ.ಆರ್.ಎಲ್. ಲಾಜಿಸ್ಟಿಕ್ ವರೆಗಿನ ಹಳೆ ಪಿಬಿ ರಸ್ತೆ.
೧೦) ಧರ್ಮನಾಥ ಭವನ ದಿಂದ ಪೊಲೀಸ್ ಭವನ ವರೆಗಿನ ನ್ಯಾಯಮಾರ್ಗ ರಸ್ತೆ.
೧೧) ರಾಮದೇವ ಹೊಟೇಲ್ ಕ್ರಾಸ್ ದಿಂದ ಧರ್ಮನಾಥ ಭವನ ವರೆಗಿನ ರಸ್ತೆ.
೧೨) ಚನ್ನಮ್ಮ ಸರ್ಕಲ್ ಗಣೇಶ ಮಂದಿರ ಹಿಂದಿನಿಂದ ಪವನ ಹೊಟೇಲ್ ವರೆಗಿನ ಕಾಲೇಜ್ ರಸ್ತ್ತೆ.
೧೩) ಯಂಡೇಖೂಟ ದಿಂದ ಆರ್ಎಲ್ಎಸ್ ಕಾಲೇಜ್ ವರೆಗಿನ ಕಾಲೇಜ್ ರಸ್ತೆ.
೧೪) ಯಂಡೇಖೂಟ ದಿಂದ ಬೋಗಾರವೇಸ್ ವರೆಗಿನ ಕಾಲೇಜ್ ರಸ್ತೆ.
೧೫) ಮಿಲನ ಹೊಟೇಲ್ ದಿಂದ ಹರ್ಷಾ ಎಲೆಕ್ಟ್ರಾನಿಕ್ಸ್ ವರೆಗಿನ ಕ್ಲಬ್ ರಸ್ತೆ.
೧೬) ಗೊಂಧಳಿ ಗಲ್ಲಿ ಕ್ರಾಸ್ ದಿಂದ ಐಡಿಬಿಐ ಬ್ಯಾಂಕ ವರೆಗಿನ ಸಮಾದೇವಿ ಗಲ್ಲಿ ರಸ್ತೆ.
೧೭) ಬೋಗಾರವೇಸ್ ವೃತ್ತದಿಂದ ರಾಮಲಿಂಗಖಿಂಡಗಲ್ಲಿ ಕ್ರಾಸ್ ವರೆಗಿನ ಕಿರ್ಲೋಸ್ಕರ ರಸ್ತೆ.
೧೮) ರೇಣುಕಾ ಹೊಟೇಲ್ ಕ್ರಾಸ್ ದಿಂದ ಪ್ರಕಾಶ ಥಿಯೇಟರ್ ವರೆಗಿನ ಎಸ್ಪಿ ರಸ್ತೆ.
೧೯) ಬ್ಯಾಂಕ ಆಫ್ ಇಂಡಿಯಾ ದಿಂದ ಶಿವಾಜಿ ಗಾರ್ಡನ ಗೇಟ ವರೆಗಿನ ಎಸ್ಪಿಎಮ್ ರಸ್ತೆ.
೨೦) ಆರ್ಪಿಡಿ ವೃತ್ತ ದಿಂದ ಭಾಗ್ಯ ನಗರ ಕ್ರಾಸ್ ವರೆಗಿನ ಖಾನಾಪೂರ ರಸ್ತೆ.
೨೧) ಸಮಾದೇವಿ ಗಲ್ಲಿಯಿಂದ [ಸಮಾದೇವಿ ಮಂದಿರ ಎದುರಿಗಿನ ರಸ್ತೆಯಿಂದ] ನಾರ್ವೇಕರ ಗಲ್ಲಿ. ರಿಸಲ್ದಾರ ಗಲ್ಲಿ ಮುಖಾಂತರ ಶನಿವಾರ ಖೂಟ ಸೇರುವ ಮಾರ್ಗ ದ್ವಿಚಕ್ರ ವಾಹನಗಳನ್ನು ಹೊರತುಪಡಿಸಿ ಇನ್ನಿತರೆ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ
ದಂಡದ ಮೊತ್ತ ಹೆಚ್ಚಳ
ಸಂಚಾರ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಪ್ರಕರಣಗಳಲ್ಲಿ ದಾಖಲಿಸಿ ವಿಧಿಸಲಾಗುವ ದಂಡದ ಮೊತ್ತವನ್ನು ಹೆಚ್ಚಿಸಿ ಆದೇಶ ಹೊರಡಿಸಿದ್ದು, ಪರಿಷ್ಕೃತ ದಂಡದ ಮೊತ್ತ ಹೀಗಿದೆ.
೧. ನಿಗಧಿಪಡಿಸಲಾದ ಗರಿಷ್ಠ ವೇಗದ ಮಿತಿಯನ್ನು ಮೀರಿ ವೇಗವಾಗಿ ಯಾರಾದರೂ ವಾಹನವನ್ನು ಚಾಲನೆ ಮಾಡುವುದು ಅಥವಾ ಚಾಲನೆ ಮಾಡುವಂತೆ ಮಾಡುವುದು- ರೂ.೧೦೦೦, [ಮೋ.ವಾ.ಕಾಯ್ದೆ ಕಲಂ. ೧೮೩(೧)] ರೂ.೫೦೦=೦೦ ಮಾತ್ರ [ಮೋ.ವಾ.ಕಾಯ್ದೆ ಕಲಂ. ೧೮೩(೧)]
೨. ಅಪಾಯಕಾರಿಯಾಗಿ ವಾಹನವನ್ನು ಚಾಲನೆ ಮಾಡುವುದು, ಚಾಲನೆ ವೇಳೆ ಮೋಬೈಲ್ ಬಳಕೆ, ವಾಹನದ ಎರಡೂ ಕಡೆಗಳಲ್ಲಿ ಲೋಡ್ ಪ್ರೊಜೆಕ್ಷನ್ ಹೊಂದಿರುವ ಸರಕುಗಳನ್ನು ಅಪಾಯಕಾರಿ ರೀತಿಯಲ್ಲಿ ಸಾಗಿಸುವುದು. ಯಾವುದೇ ವರ್ಗದ ವಾಹನಗಳಿಗೆ ಪ್ರಥಮ ಅಪರಾಧಕ್ಕೆ ರೂ.೧೦೦೦, ಎರಡನೇ ಅಪರಾಧಕ್ಕೆ ಮತ್ತು ನಂತರದ ಅಪರಾಧಗಳಿಗೆ ರೂ.೨೦೦೦.
೩. ವಿಮೆ ಮಾಡಿಸದ ವಾಹನವನ್ನು ಚಾಲನೆ ಮಾಡುವುದು ಅಥವಾ ಚಾಲನೆ ಮಾಡುವಂತೆ ಮಾಡುವುದು ಅಥವಾ ಚಾಲನೆ ಮಾಡಲು ಅನುಮತಿಸುವುದು.ರೂ. ೧೦೦೦.
೪. ರಾಂಗ್ ಪಾರ್ಕಿಂಗ್, ಅಪಾಯಕಾರಿ ರೀತಿಯಲ್ಲಿ ವಾಹನ ನಿಲುಗಡೆ ಮತ್ತು ನಿಷೇಧಿತ ಪ್ರದೇಶದಲ್ಲಿ ವಾಹನವನ್ನು ನಿಲ್ಲಿಸುವುದು ರೂ. ೧೦೦೦.
ಹೀಗೆ ಇನ್ನು ಮುಂದೆ ಬೆಳಗಾವಿ ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದವರ ವಿರುದ್ಧ ಪರಿಷ್ಕೃತ ಮೊತ್ತದಂತೆ ದಂಡವನ್ನು ವಿಧಿಸಲಾಗುವುದು.
ಎಂವಿ ಕಾಯ್ದೆಯಡಿ ೩೨೩ ಪ್ರಕರಣ ದಾಖಲು
ಬೆಳಗಾವಿ ನಗರದಲ್ಲಿ ಆಟೋರಿಕ್ಷಾ/ಬಸ್/ಮಿನಿ ಬಸ್ಗಳಲ್ಲಿ ಮಿತಿಗಿಂತ ಹೆಚ್ಚು ಶಾಲಾ ಮಕ್ಕಳನ್ನು ಸಾಗಿಸುವ ಹಾಗೂ ಸರಕು ವಾಹನಗಳಲ್ಲಿ ಕಾರ್ಮಿಕರನ್ನು ಸಾಗಿಸುವ ವಾಹನಗಳ ವಿರುದ್ಧ ಬೆಳಗಾವಿ ನಗರ ಪೊಲೀಸರು ಶನಿವಾರ ಕಾರ್ಯಾಚರಣೆಯನ್ನು ಮುಂದುವರೆಸಿ ೧)ಮಿತಿಗಿಂತ ಹೆಚ್ಚು ಶಾಲಾ ಮಕ್ಕಳನ್ನು ಸಾಗಿಸುವ ೨)ನಿಗದಿಗಿಂತ ಹೆಚ್ಚಿನ ಪ್ರಯಾಣಿಕರನ್ನು ಸಾಗಿಸುವ ೩) ಬಸ್/ಇತರೆ ಸಾರಿಗೆ ವಾಹನಗಳಲ್ಲಿ ನಿಗದಿಗಿಂತ ಹೆಚ್ಚಿನ ಪ್ರಯಾಣಿಕರನ್ನು ಸಾಗಿಸುವ ೪)ಅಟೋರಿಕ್ಷಾದಲ್ಲಿ ನಿಗದಿಗಿಂತ ಹೆಚ್ಚಿನ ಪ್ರಯಾಣಿಕರನ್ನು ಸಾಗಿಸುವ ೫)ಭಾರಿವಾಹನಗಳಲ್ಲಿ ೫ ಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಸಾಗಿಸುವ ೬)ವಾಹನಗಳ ಮೇಲ್ಛಾವಣಿ ಮೇಲೆ ಪ್ರಯಾಣಿಕರನ್ನು ಸಾಗಿಸುವಂತಹ ತಪ್ಪಿತಸ್ಥ ವಾಹನ ಚಾಲಕರುಗಳ ವಿರುದ್ಧ ಮೋಟರ್ ವಾಹನ ಕಾಯ್ದೆಯಡಿ ೨೬೩ ಪ್ರಕರಣಗಳನ್ನು ದಾಖಲಿಸಿ ರೂ.೩೧,೮೦೦ ರಷ್ಟು ಹಾಗೂ ಇನ್ನಿತರ ಸಂಚಾರ ನಿಯಮ ಉಲ್ಲಂಘಿಸಿದವರ ವಿರುದ್ಧ ೬೦ ಪ್ರಕರಣಗಳನ್ನು ದಾಖಲಿಸಿ ರೂ.೬,೧೦೦ ರಷ್ಟು ಹೀಗೆ ತಪ್ಪಿತಸ್ಥ ವಾಹನ ಮಾಲೀಕ/ಚಾಲಕರ ವಿರುದ್ಧ ಒಟ್ಟು ೩೨೩ ಪ್ರಕರಣಗಳನ್ನು ದಾಖಲಿಸಿ ರೂ. ೩೭,೯೦೦ ರಷ್ಟು ದಂಡವನ್ನು ವಿಧಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ