Karnataka News

21ನೇ ಶತಮಾನ ಮೋದಿ ಯುಗ : ಮುರುಗೇಶ ನಿರಾಣಿ

ಪ್ರಗತಿವಾಹಿನಿ ಸುದ್ದಿ, ಬೀಳಗಿ: ಕಳೆದ ೫ ವರ್ಷಗಳ ಅವಧಿಯಲ್ಲಿ ನಾನು ಮಾಡಿದ ಅಭಿವೃದ್ದಿ ಕಾರ್ಯಗಳು ಮತಕ್ಷೇತ್ರದ ಮನೆ-ಮನೆಗೂ ತಲುಪಿವೆ. ಜನ ಸಮುದಾಯದ ನಾಡಿಮಿಡಿತ ಅರಿತು ಕೆಲಸ ಮಾಡಿದ ಸಾರ್ಥಕತೆ ನನ್ನಲ್ಲಿದೆ ಎಂದು ಸಚಿವ ಮುರುಗೇಶ ನಿರಾಣಿ ಹೇಳಿದರು.
ಬೀಳಗಿ ಮತಕ್ಷೇತ್ರ ವ್ಯಾಪ್ತಿಯ ಫಕೀರ ಬೂದಿಹಾಳ, ನರೆನೂರ, ಅಂಕಲಗಿ, ಕಾತರಕಿ, ಶಿರಗುಪ್ಪಿ, ನೀರ ಬೂದಿಹಾಳ ಗ್ರಾಮಗಳಿಗೆ ತೆರಳಿ ಪ್ರಚಾರ ನಡೆಸಿ ಕೊಪ್ಪ ಎಸ್. ಕೆ. ಗ್ರಾಮದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು ಗ್ರಾಮೀಣ ಜನರ ಮೂಲಭೂತ ಸೌಕರ್ಯವನ್ನು ಉನ್ನತೀಕರಿಸುವಲ್ಲಿ ಶಕ್ತಿ ಮೀರಿ ಕೆಲಸ ಮಾಡಿದ್ದೇನೆ. ಪ್ರತಿ ಗ್ರಾಮಗಳಲ್ಲಿಯೂ ರಸ್ತೆ, ವಿದ್ಯುತ್, ಶಾಲೆ, ಸಮುದಾಯ ಭವನ, ಶುದ್ದ ಕುಡಿಯುವ ನೀರು ದೊರೆಯುತ್ತಿದೆ. ಅಭಿವೃದ್ದಿ ಕೆಲಸಗಳನ್ನು ಮೆಚ್ಚಿ ಅನೇಕರು ಕಾಂಗ್ರೇಸ್ ತೊರೆದು ಬಿಜೆಪಿ ಸೇರುತ್ತಿದ್ದಾರೆ. ಅಭಿವೃದ್ದಿಯ ಈ ಪರ್ವಕಾಲ ಮುಂದುವರೆಯಲು ಮತ್ತೊಮ್ಮೆ ಜನಾಶಿರ್ವಾದ ಮಾಡಿ ಎಂದು ವಿನಂತಿಸಿಕೊಂಡರು.
ಕಾಂಗ್ರೇಸ್ ಸುಳ್ಳಿನ ಕಂತೆಗಳನ್ನು ಜನರ ಮೇಲೆ ಹೇರುತ್ತಿದೆ. ಕಳೆದ ೭೫ ವರ್ಷಗಳಲ್ಲಿ ದಲಿತರು ಹಿಂದುಳಿದವರನ್ನು ವೋಟಿಗಾಗಿ ಬಳಕೆ ಮಾಡಿಕೊಂಡವರು ಇಂದು ಬಿಜೆಪಿಗೆ ಪಾಠ ಮಾಡಲು ಬರುತ್ತಿದ್ದಾರೆ. ಇದು ೨೧ನೇ ಶತಮಾನದ ಮೋದಿ ಯುಗ ಜನ ಪ್ರಜ್ಞಾವಂತರಾಗಿದ್ದಾರೆ. ಪುಕ್ಸಟ್ಟೆ ಭರವಸೆಗಳ ಪೊಳ್ಳು ಮಾತಿಗೆ ಮರಳಾಗುವುದಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಲ್ಲಿಕಾಆರ್ಜುನ ಅಂಗಡಿ, ಮಲ್ಲಪ್ಪ ಪೂಜೇರಿ, ಲಕ್ಷ್ಮಣ ದೊಡ್ಡಮನಿ, ಗಿರೇಪ್ಪ ಕಟಗಿ, ಈರಣ್ಣ ಕುಂದರಗಿಮಠ, ಶ್ರೀಶೈಲ ಸಂಶಿ ಪ್ರಮುಖರು ಭಾಗವಹಿಸಿದ್ದರು.
ಕಾಂಗ್ರೇಸ್ ತೊರೆದು ಬಿಜೆಪಿ ಸೇರ್ಪಡೆ.
ಕಳೆದ ೫ ವರ್ಷಗಳ ಅವಧಿಯಲ್ಲಿ ಕೊಪ್ಪ ಎಸ್.ಕೆ. ಗ್ರಾಮದಲ್ಲಿ ನಡೆದ ಅಭಿವೃದ್ದಿ ಕಾರ್ಯಗಳನ್ನು ಮೆಚ್ಚಿ ರೆಡ್ಡಿ, ವಾಲ್ಮಿಕಿ, ಹಾಲುಮತ ಹಾಗೂ ವಿವಿಧ ಸಮಾಜಗಳ ಮುಖಂಡರುಗಳಾದ ಬಸವರಾಜ ಮಲಘಾಣ, ಈರಪ್ಪ ಮಲಘಾಣ, ವೆಂಕಪ್ಪ ಹಲಗತ್ತಿ, ರಮೇಶ ಪಾಟೀಲ, ವೆಂಕಟೇಶ ವಜ್ಜರಮಟ್ಟಿ, ಗಂಗಾಧರ ಮೇಟಿ, ಕಾಶಿಲಿಂಗ ಜೋಗಿ, ಸಚಿನ ಮೇಟಿ, ಗಂಗಾಧರ ಮಾಸ್ತಿ, ರವಿ ಮದಭಾಂವಿ, ಮಂಜುನಾಥ ತಳವಾರ ಸೇರಿ ಅನೇಕರು ಮುರುಗೇಶ ನಿರಾಣಿಯವರ ನೇತೃತ್ವದಲ್ಲಿ ಕಾಂಗ್ರೇಸ್ ಬಿಜೆಪಿ ಸೇರ್ಪಡೆಯಾದರು.

https://pragati.taskdun.com/unsettled-assembly-not-created-murugesha-nirani/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button