ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶುಕ್ರವಾರ ಘಟಪ್ರಭಾ ನದಿ ದಡದಲ್ಲಿ ಈಜಲು ಹೋಗಿದ್ದ 6 ಜನರಲ್ಲಿ 5 ಜನರು ಮೃತರಾಗಿದ್ದಾರೆ.
ಘಟಪ್ರಭಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಧ್ಯಾಹ್ನ 2.15ಕ್ಕೆ ಈ ಘಟನೆ ನಡೆದಿದೆ. ದೂಪದಾಳ ಪ್ರವಾಸಿ ಮಂದಿರ (ಐಬಿ) ಹತ್ತಿರ ಘಟಪ್ರಭಾ ನದಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಶಿರಗೇರಿ ಗ್ರಾಮದ ಐವರು ಮುಳುಗಿ ಸಾವಿಗೀಡಾಗಿದ್ದಾರೆ.
ಮೃತರ ವಿವರ:
:1) ಸಂತೋಷ್ ಬಾಬು ಈಡಗೆ 19 ವರ್ಷ,
2) ಅಜಯ್ ಬಾಬು ಜೋರೆ 19 ವರ್ಷ,
3) ಕೃಷ್ಣ ಬಾಬು ಜೋರೆ 19 ವರ್ಷ,
4) ಆನಂದ ವಿಟ್ಟು ಕೋಕಡೆ 20 ವರ್ಷ.
5. ರಾಮಚಂದ್ರ ಕೋಕಡೆ 19ವರ್ಷ
–
ವಿಠ್ಠಲ್ ಜಾನು ಕೋಕಡೆ 19ವರ್ಷ ಘಟಪ್ರಭಾ ಕೆ ಎಚ್ ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಬಾಲಕಾರ್ಮಿಕರೇ?
ಆಸ್ಪತ್ರೆಯಲ್ಲಿ ಒಬ್ಬ ಸಾವಿಗೀಡಾಗುವ ಮೂಲಕ ಮೃತರ ಸಂಖ್ಯೆ 5ಕ್ಕೇರಿದೆ. ಮೃತರೆಲ್ಲರೂ ಅಪ್ರಾಪ್ತರಿದ್ದು, ಘಟಪ್ರಭಾದ ಬಾರ್ ಒಂದರಲ್ಲಿ ಬಾಲಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎಂದು ನ್ಯಾಯವಾದಿ ಮಲ್ಲಿಕಾರ್ಜುನ ಚೌಕಾಶಿ ದೂರಿದ್ದಾರೆ.
ಘಟನೆಯ ಕುರಿತು ಎಲ್ಲ ಕೋನಗಳಿಂದ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ