Latest

*ನನ್ನನ್ನು ಯಾವಾಗ ಸಿಎಂ ಮಾಡ್ತೀರಿ? ಬಿಜೆಪಿ ಮುಖಂಡನ ಜೊತೆ ಮುಖ್ಯಮಂತ್ರಿ ಕನಸು ಬಿಚ್ಚಿಟ್ಟ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಮುಖ್ಯಮಂತ್ರಿ ಹುದ್ದೆಯ ವಿಚಾರ ರಾಜಕೀಯ ಪಕ್ಷಗಳಲ್ಲಿ ದಿನವೂ ಚರ್ಚೆಯಾಗುತ್ತಲೇ ಇದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತೆ ಸಿಎಂ ಹುದ್ದೆ ಕನಸಿನ ಬಗ್ಗೆ ಹೇಳಿದ್ದಾರೆ.

ದೇವನಹಳ್ಳಿಯಲ್ಲಿ ಸಂಸದ ಕೆ.ಹೆಚ್.ಮುನಿಯಪ್ಪ ಹಾಗೂ ಬಿಜೆಪಿ ಮುಖಂಡ ಬಸವರಾಜ್ ಸಮ್ಮುಖದಲ್ಲಿ ನನ್ನನ್ನು ಯಾವಾಗ ಮುಖ್ಯಮಂತ್ರಿ ಮಾಡ್ತೀರಿ? ಎಂದು ಕೇಳಿದ್ದಾರೆ. ಬಸವರಾಜ್ ಗೆ ಹೇಳಿದ್ದೀನಿ ನನ್ನ ಸಿಎಂ ಮಾಡ್ಬೇಕು ಅಂತಾ. ಸಿಎಂ ಮಾಡ್ತೀರೋ ಇಲ್ವೋ? ಎಂದು ಕೇಳಿದ್ದೇನೆ ಎಂದು ನಗುತ್ತಾ ಕೆ.ಹೆಚ್.ಮುನಿಯಪ್ಪ ಬಳಿ ಹೇಳಿದರು. ಡಿ.ಕೆ.ಶಿವಕುಮಾರ್ ಮಾತಿಗೆ ಮುನಿಯಪ್ಪ ನಕ್ಕು ಸುಮ್ಮನಾದರು.

ಬಸವರಾಜ್ ನನ್ನ ಆತ್ಮೀಯ, ನನ್ನ ಆತ್ಮೀಯನಿಗೆ ಕೇಳಿದ್ದೇನೆ ನನ್ನ ಸಿಎಂ ಮಾಡ್ತೀಯಾ? ಅಂತಾ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಾಳಯದಲ್ಲಿ ಸಿಎಂ ಹುದ್ದೆ ವಿಚಾರ ಮತ್ತೆ ಚರ್ಚೆಗೆ ಬಂದಿದೆ.

https://pragati.taskdun.com/vidhanasabha-electioncongress-candidate3rd-list/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button