Kannada NewsKarnataka NewsLatest

*ನಡುರಸ್ತೆಯಲ್ಲಿಯೇ ಪತಿಯಿಂದ ಪತ್ನಿಯ ಮೇಲೆ ಮಚ್ಚಿನಿಂದ ಹಲ್ಲೆ: ಹತ್ಯೆಗೆ ಯತ್ನ*

ಪ್ರಗತಿವಾಹಿನಿ ಸುದ್ದಿ: ಹಾಡಹಗಲೇ ನಡುರಸ್ತೆಯಲ್ಲಿಯೇ ಪತಿ ಮಹಾಶಯನೊಬ್ಬ ಪತ್ನಿ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.

ಸಿಂದಗಿ ಪಟ್ಟಣದ ಆನಂದ ಥಿಯೇಟರ್ ಬಳಿ ಈ ಘಟನೆ ನಡೆದಿದೆ. ಪತಿ ಯಮನಪ್ಪ, ಪತ್ನಿ ಅನಸೂಯ (೫೦) ಮೇಲೆ ನಡುರಸ್ತೆಯಲ್ಲಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ತಲೆ, ಕತ್ತು ಕೈ ಭಾಗಗಳಿಗೆ ಮಚ್ಚಿನ ಏಟು ಬೀಳುತ್ತಿದ್ದಂತೆ ರಸ್ತೆಯಲ್ಲಿಯೇ ಪತ್ನಿ ಅನಸೂಯಾ ಕುಸಿದು ಬಿದ್ದಿದ್ದಾರೆ. ಆದರೂ ಹಲ್ಲೆ ನಿಲ್ಲಿಸದ ಯಮನಪ್ಪ, ಮತ್ತಷ್ಟು ಹಲ್ಲೆ ನಡೆಸಿದ್ದಾನೆ. ಯಮನಪ್ಪನ ಕೃತ್ಯ ಬಿಡಿಸಲು ಬಂದ ಸ್ಥಳೀಯರ ಮೇಲೂ ಮಚ್ಚು ತೋರಿಸಿ ಬೆದರಿಕೆ ಹಾಕಿದ್ದಾನೆ.

ಆವಾಜ್ ಹಾಕಿತ್ತಾ ಮಚ್ಚು ಹಿಡಿದು ರಸ್ತೆಯಲ್ಲಿ ಸಾಗಿದ ಯಮನಪ್ಪನನ್ನು ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿ ದೊಣ್ಣೆಯನ್ನು ಆತನ ಕಾಲಿಗೆ ಅಡ್ಡವಿಟ್ಟು ಬೀಳಿಸಿದ್ದಾನೆ. ಗಂಭೀರವಾಗಿ ಹಲ್ಲೆಗೊಳಗಾಗಿರುವ ಅನಸೂಯಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಾಡಹಗಲೇ, ನಡುರಸ್ತೆಯಲ್ಲಿ ಪತಿ ಮಹಾಶಯನ ಅಟ್ಟಹಾಸಕ್ಕೆ ಇಡೀ ಸಿಂದಗಿ ಪಟ್ಟಣ ಬೆಚ್ಚಿ ಬಿದ್ದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button