ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಹಿಡಕಲ ಕಚ್ಚಾ ನೀರು ಸರಬರಾಜಿನ ೧೦೦೦ ಎಮ್.ಎಮ್. ಒ ಮುಖ್ಯ ಕೊಳವೆಯು ಖನಗಾವ ಹತ್ತಿರ ಗಣನೀಯ ಪ್ರಮಾಣದಲ್ಲಿ ಸೊರಿಕೆ ಉಂಟಾಗಿದ್ದು, ಏ.೧೫ ೨೦೨೩ ರಂದು ತುರ್ತಾಗಿ ದುರಸ್ಥಿ ಕಾರ್ಯ ಕೈಗೊಳ್ಳಲಾಗುವುದು. ಈ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಪ್ರಸ್ತುತ ಇರುವ ನೀರು ಸರಬರಾಜು ಷೆಡ್ಯೂಲ್ ಏ.೧೫ ೨೦೨೩ & ಏ.೧೬ ೨೦೨೩ ರವರೆಗೆ ಮುಂದುವರಿಯುತ್ತದೆ. ಎರಡು ದಿನಗಳ ಕಾಲ ಬೆಳಗಾವಿ ನಗರದ ದಕ್ಷಿಣ ಪ್ರದೇಶಗಳಾದ: ಮಜಗಾಂವ್, ನಾನವಾಡಿ, ಚಿದಂಬರ್ ನಗರ, ಶಹಾಪುರ, ವಡಗಾಂವ್, ಹಳೇ ಬೆಳಗಾವಿ ಹಾಗೂ ಉತ್ತರ- ಪ್ರದೇಶಗಳಾದ: ಸಹ್ಯಾದ್ರಿ ನಗರ, ಕುವೆಂಪು ನಗರ, ಟಿವಿ ಕೇಂದ್ರ, ಸದಾಶಿವ ನಗರ, ಬಸವ ಕಾಲೋನಿ, ಕಲ್ಮೇಶ್ವರ ನಗರ, ಸುಭಾಸ್ ನಗರ, ಅಶೋಕ್ ನಗರ, ಎಂಎಂ ಬಡಾವಣೆ ಏರಿಯಾ, ಹೊಸ ಗಾಂಧಿ ನಗರ, ಕಣಬರ್ಗಿ, ಕುಡಚಿ ಹಾಗೂ ಸುಭಾಷ್ ನಗರ, ವೀರಭದ್ರ ನಗರ, ಅಲರವಾಡ ಎಂಇಎಸ್ ಕಂಟೋನ್ಮೆಂಟ್ ಮತ್ತು ಸೈನಿಕ ನಗರ ಹಾಗೂ ಕಂಟೋನ್ಮೆಂಟ್ ಪ್ರದೇಶ, ಹಿಂಡಾಲ್ಕೊ ಕಾರ್ಖಾನೆ,. ಕೆಎಐಡಿಬಿ ಕೈಗಾರಿಕಾ ಪ್ರದೇಶ, ಎನ್-ರೂಟ್ ವಿಲೇಜ್ ಟ್ಯಾಪಿಂಗ್ಸ್, ಡಿಫೈಯನ್ಸ್ ಏರಿಯಾ, ಸೈನಿಕ್ ನಗರ, ಕೆಎಲ್‌ಇ ಆಸ್ಪತ್ರೆ, ಬಿಮ್ಸ್ ಆಸ್ಪತ್ರೆ. ಆರ್.ಸಿ ನಗರ ಹಾಗೂ ಎಲ್ಲಾ ಸಗಟು ನೀರು ಪೂರೈಕೆ ಸಹಿತ ನೀರು ಸರಬರಾಜು ಮಾಡುವ ಷೆಡ್ಯೂಲ್‌ನಲ್ಲಿ ವ್ಯತ್ಯಯ ಉಂಟಾಗುವುದು ಆದ್ದರಿಂದ ಸಾರ್ವಜನಿಕರು ಮೇ||. ಎಲ್ & ಟಿ ಯೊಂದಿಗೆ ಸಹಕರಿಸಬೇಕು ಎಂದು ಯೋ.ಅ.ಘ, ಕುಸ್ಸೆಂಪ್-ಕೆ.ಯು.ಐ.ಡಿ.ಎಫ್.ಸಿ, ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ