ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಪ್ರಪಂಚದಲ್ಲಿ ಪ್ರಜಾಪ್ರಭುತ್ವದ ಜನನ 12 ಶತಮಾನದಲ್ಲಿ ಕರ್ನಾಟಕದಲ್ಲಿ ಭಗವಾನ್ ಬಸವಣ್ಣ ಅನುಭವ ಮಂಟಪದೊಂದಿಗೆ ಜಾರಿಗೆ ತಂದಿರುವದು ಇತಿಹಾಸ. ಅದು ಇಂದು ಸಂಕಷ್ಟದಲ್ಲಿ ಇದೆ ಎನ್ನುವ ಬುದ್ದಿಭ್ರಮಣೆ ಹೊಂದಿದವರು ಇದನ್ನು ತಿಳಿದುಕೊಳ್ಳಬೇಕು ಎಂದು ರಾಷ್ಟ್ರೀಯ ವಕ್ತಾರ ಸುಧಾಂಶು ತ್ರೀವೆದಿ ಬಸವಣ್ಣನವರನ್ನು ನೆನಪಿಸಿದರು.
ಮಹಾನಗರದ ಉದ್ಯಮಭಾಗದ ಫೌಂಡ್ರಿ ಕ್ಲಸ್ಟರ್ ನಲ್ಲಿ ನಡೆದ ಪ್ರಬುದ್ದರ ಗೋಷ್ಠಿಯಲ್ಲಿ ಮಾತನಾಡಿ, ಭಾರತದ ಜ್ಯೋತಿಶ್ಯಾಸ್ತ್ರ ಸಾವಿರಾರು ವರ್ಷಗಳ ಮುಂದಿನ ಭವಿಷ್ಯ ಹೇಳುವ ಸಂಕಲ್ಪ ಹೊಂದಿದ ಭಾರತದ ಸಂಸ್ಕೃತಿಯ ಬಗ್ಗೆ ಮಾತನಾಡುವವರು ಮೊದಲು ಈ ಭೂಮಿಯ ಸಂಸ್ಕೃತಿ ತಿಳಿದುಕೊಳ್ಳಬೇಕು ಎಂದರು.
ಸಾವಿರಾರು ವರ್ಷಗಳ ಹಿಂದೆ ನಿರ್ಮಾಣವಾಗಿರುವ ದೇವಸ್ಥಾನಗಳ ಮೂರ್ತಿಯ ಮೇಲೆ ನಿರ್ದಿಷ್ಟ ದಿನ ಸೂರ್ಯನ ಬೆಳಕು ಸ್ಪರ್ಶಮಾಡುವ ಇಂಜನಿಯರಿಂಗ್ ವ್ಯವಸ್ಥೆ ಹೇಗಿದ ಎನ್ನುವದನ್ನು ಅರ್ಥೈಸಿಕೊಳ್ಳಬೇಕು. ಬರುವ ಮುಂದಿನ 25 ವರ್ಷಗಳಲ್ಲಿ ಐದು ಗುರಿಗಳ ಮೂಲಕ ಮುನ್ನುಗ್ಗೋಣ, ಭಾರತ ಪ್ರಪಂಚದ ಗುರುವಿನ ಸ್ಥಾನಕ್ಕೆ ಏರಲೆಬೇಕು. ದೇಶವಾಸಿಗಳ ತಲೆಯಲ್ಲಿರುವ ಗುಲಾಮಗಿರಿ ವ್ಯವಸ್ಥೆ ಹೋಗಲಾಡಿಸುವದು. ಎಲ್ಲರೂ ಕಾಯಕಮಯವಾಗಬೇಕು. ಎಲ್ಲರೂ ಸೇರಿ ದೇಶದ ಅಭಿವೃದ್ಧಿಗೆ ಕೈ ಜೋಡಿಸುವದು ಎಂದರು.
ಪ್ರಕೃತಿಯಲ್ಲಿ ಬರುವ ಎಲ್ಲ ಜೀವಿಗಳಿಗೆ ತನ್ನ ದುಡಿಮೆಯ ಭಾಗದಲ್ಲಿ ನಿಡುತ್ತಾ ಉದಾತ್ತ ಜೀವನ ಸಾಗಿಸುವ ಕೃಷಿಕನ ಜೀವನ ನಮಗೆಲ್ಲ ಆದರ್ಶವಾಗಿದ್ದು ಆ ನಿಟ್ಟಿನಲ್ಲಿ ಮೋದಿಜಿಯವರು ತಮ್ಮ ಅಧಿಕಾರವಧಿಯಲ್ಲಿ ಜನಧನ್ ಖಾತೆ, ಭೇಟಿ ಪಡಾವೋ ಭೇಟಿ ಬಚಾವೋ, ಸ್ವಚ್ಛ ಭಾರತ ಕಾರ್ಯಕ್ರಮಗಳು ಯಾವ ರಾಜಕಾರಣದ ಉಪಯೋಗಕ್ಕಾಗಿ ಅಲ್ಲ ಎನ್ನುವದನ್ನು ಅರ್ಥೈಸಿಕೊಳ್ಳಬೇಕು.
ಭಾರತ ಮೋದಿಯವರ ಕಾಲಘಟ್ಟದಲ್ಲಿ ಆಟೋಮೊಬೈಲ್ ಕ್ಷೇತ್ರದಲ್ಲಿ ಚೀನಾ ಜಪಾನ್ ದೇಶಗಳನ್ನ ಹಿಂದಕ್ಕೆ ಹಾಕಿದರೆ ಮೊಬೈಲ್ ಪೋನ್ ತಯಾರಿಕೆಯಲ್ಲಿ ದ್ವಿತೀಯ ಸ್ಥಾನದಲ್ಲಿ ಇದ್ದೇವೆ. ಜನತೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಅಭಿವೃದ್ಧಿ ನೀಡುವ ಮೂಲಕ ವಿಕಾಸಕ್ಕೆ ಮೊದಲನೆ ಅಧ್ಯತೆ ನಿಡಲಾಗುತ್ತಿದೆ. ವಿದೇಶಿ ಬಂಡವಾಳ ಹೂಡಿಕೆ ಹರಿದು ಬರುತಿದ್ದು ದೇಶದಲ್ಲಿ ಕರ್ನಾಟಕ ಮೊದಲನೆ ಸ್ಥಾನದಲ್ಲಿದೆ ಎಂದರು.
ಕಾಶ್ಮೀರದಲ್ಲಿ 370 ರದ್ದುಮಾಡಿರುವದು, ಮಸೂದ ಅಜರ್ ಅಂತರರಾಷ್ಟ್ರೀಯ ಭಯತ್ಪೊದಕ ಎಂದು ಘೋಷಿಸಿದ್ದು, ಗಡಿ ರೇಖೆಯಲ್ಲಿ ಚೀನಾ ದೇಶಕ್ಕೆ ಸೆಡ್ಡುಹೊಡಿದಿದ್ದು, ಭಾರತಿಯರಾಗಿ ನಾವೆಲ್ಲ ಮುಂದುವರೆಯೋಣ, ಭಾರತವನ್ನು ಜಗದ್ಗುರುವನ್ನಾಗಿಸೊ ಸಂಕಲ್ಪಮಾಡೋಣ ಎಂದರು.
ರಾಜ್ಯ ವಕ್ತಾರ ಎಮ್.ಬಿ.ಝೀರಲಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶಾಸಕ ಅಭಯ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯ ಮೇಲೆ ಹೇಮೆಂದ್ರ ಪೋರವಾಲ್,ರಾಮ ಭಂಡಾರಿ ಇದ್ದರೆ ಕಾರ್ಯಕ್ರಮದಲ್ಲಿ ನೂರಾರು ಉದ್ಯಮಿಗಳು, ಉಪನ್ಯಾಸಕರು, ಶಿಕ್ಷಣ ತಜ್ಞರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ