Latest

*ಜಗದೀಶ್ ಶೆಟ್ಟರ್ ಆರೋಪ ತಳ್ಳಿ ಹಾಕಿದ ಬಿಎಸ್ ವೈ; ಆ ಬಗ್ಗೆ ಚರ್ಚೆ ನಡೆಸಿ ಅರ್ಥವಿಲ್ಲ ಎಂದ ಯಡಿಯೂರಪ್ಪ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ತನಗೆ ಬಿಜೆಪಿ ಟಿಕೆಟ್ ಕೈತಪ್ಪಲು ಬಿ.ಎಲ್.ಸಂತೋಷ್ ಕಾರಣ ಎಂಬ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆರೋಪವನ್ನು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಳ್ಳಿಹಾಕಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಬಿ.ಎಲ್.ಸಂತೋಷ್ ವಿರುದ್ಧ ಶೆಟ್ಟರ್ ಆರೋಪ ಮಾಡುವುದು ಸರಿಯಲ್ಲ. ಶೆಟ್ಟರ್ ಬಿಜೆಪಿ ತಿಒರೆದು ಕಾಂಗ್ರೆಸ್ ಸೇರುವ ನಿರ್ಧರ ಮಾಡಬಾರದಿತ್ತು. ಈಗಾಗಲೇ ಅವರು ನಿರ್ಧಾರ ಕೈಗೊಂಡಿದ್ದಾರೆ. ಇನ್ನು ಆ ಬಗ್ಗೆ ಚರ್ಚೆ ನಡೆಸಿ ಅರ್ಥವಿಲ್ಲ ಎಂದರು.

ಜಗದೀಶ್ ಶೆಟ್ಟರ್ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿರುವುದರಿಂದ ಪಕ್ಷಕ್ಕೆ ಯಾವುದೇ ತೊಂದರೆಯಾಗದು. ಶೆಟ್ಟರ್ ಜೊತೆ ಬಿಜೆಪಿ ಮುಖಂಡರಾಗಲಿ, ಪಕ್ಷದ ಕಾರ್ಯಕರ್ತರಾಗಲಿ ಹೋಗಿಲ್ಲ. ಇಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಹುಬ್ಬಳ್ಳಿಗೆ ಭೇಟಿ ಕೊಡುತ್ತಾರೆ. ಎರಡು ದಿನಗಳ ಬಳಿಕ ನಾನೂ ಕೂಡ ಅಲ್ಲಿಗೆ ಹೋಗುತ್ತೇನೆ ಎಂದರು.

Home add -Advt

ಶೆಟ್ಟರ್ ಅವರಿಗೆ ಅವರದೇ ಕುಟುಂಬ ಸದಸ್ಯರನ್ನು ಕಣಕ್ಕಿಳಿಸಲು ಅವಕಾಶ ಕೊಡುವುದಾಗಿ ಹೇಳಿದ್ದೆವು. ರಾಜ್ಯಸಭೆಗೆ ಆಯ್ಕೆ ಮಾಡಿ ನಂತರ ಕೇಂದ್ರದಲ್ಲಿ ಸಚಿವ ಸ್ಥಾನ ಕೊಡುವುದಾಗಿಯೂ ಹೇಳಿದ್ದೆವು. ಅವರನ್ನು ಸಮಾಧಾನ ಮಾಡಲು ಯತ್ನಿಸಿದೆವು. ಆದರೆ ಅವರು ಯಾವುದಕ್ಕೂ ಒಪ್ಪಲಿಲ್ಲ. ಅವರು ಅವರ ದಾರಿಯಲ್ಲಿ ಹೋಗುತ್ತಾರೆ. ನಾವು ನಮ್ಮ ದಾರಿಯಲ್ಲಿ ಹೋಗುತ್ತೇವೆ ಎಂದು ಹೇಳಿದರು.

https://pragati.taskdun.com/nalin-kumar-kateelreactionjagadish-shettarb-l-santosh/

Related Articles

Back to top button