Latest
*ಭರ್ಜರಿ ಶಕ್ತಿ ಪ್ರದರ್ಶನದ ಮೂಲಕ ನಾಮಪತ್ರ ಸಲ್ಲಿಕೆ ಮಾಡಿದ ಸಿಎಂ ಬೊಮ್ಮಾಯಿ; ಕಿಚ್ಚ ಸುದೀಪ್, ಜೆ.ಪಿ.ನಡ್ಡಾ ಸಾಥ್*


ಪ್ರಗತಿವಾಹಿನಿ ಸುದ್ದಿ; ಹಾವೇರಿ: ವಿಧಾನಸಭಾ ಚುನಾವಣೆಗೆ ಕೇವಲ 20 ದಿನಗಳು ಮಾತ್ರ ಬಾಕಿಯಿದ್ದು, ಇಂದು ಘಟಾನುಘಟಿ ನಾಯಕರು ಅಬ್ಬರದ ಪ್ರಚಾರ, ಭರ್ಜರಿ ರೋಡ್ ಶೋ ಮೂಲಕವಾಗಿ ಸಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸಿಎಂ ಬಸವರಾಜ್ ಬೊಮ್ಮಾಯಿ ನಾಮಪತ್ರ ಸಲಿಕೆ ಮಾಡಿದರು. ಇದಕ್ಕೂ ಮುನ್ನ ಸ್ವಕ್ಷೇತ್ರ ಶಿಗ್ಗಾಂವಿಯಲ್ಲಿ ಬೃಹತ್ ರೋಡ್ ಶೋ, ಸಮಾವೇಶ್ ನಡೆಸಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ನಟ ಕಿಚ್ಚ ಸುದೀಪ್ ಭಾಗವಹಿಸಿದ್ದರು.
ರೋಡ್ ಶೋ, ಸಮಾವೇಶದ ಬಳಿಕ ಶಿಗ್ಗಾಂವಿ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ಸಿಂ ಬಸವರಾಜ್ ಬೊಮ್ಮಾಯಿ, ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಈ ವೇಳೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಕಿಚ್ಚ ಸುದೀಪ್ ಸಾಥ್ ನೀಡಿದರು.




