ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ನಾಗನೂರ ಪಟ್ಟಣದ ಅಥರ್ವ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯಕ್ಕೆ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದೊರಕಿದೆ. ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ ೨೫ ವಿದ್ಯಾರ್ಥಿಗಳಲ್ಲಿ ೧೨ ಡಿಸ್ಟಿಕ್ಷನ್ ಹಾಗೂ ೧೦ ಫಸ್ಟಕ್ಲಾಸ್ನಲ್ಲಿ ತೆರ್ಗಡೆಯಾಗುವ ಮೂಲಕ ಶೇ.೧೦೦ ರಷ್ಟು ಫಲಿತಾಂಶ ದೊರೆತರೆ ವಿಜ್ಞಾನ ವಿಭಾಗದಲ್ಲಿ ೫೮ ವಿದ್ಯಾರ್ಥಿಗಳಲ್ಲಿ ೯ ಡಿಸ್ಟಿಕ್ಷನ್, ೩೪ ಫಸ್ಟ್ಕ್ಲಾಸ್ನಲ್ಲಿ ತೇರ್ಗಡೆಯಾಗುವ ಮೂಲಕ ಶೇ. ೯೧.೩೦ ರಷ್ಟು ಫಲಿತಾಂಶ ಪಡೆದಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಜಂಬಗಿ ತಿಳಿಸಿದ್ದಾರೆ.
ವಿಜ್ಞಾನ ವಿಭಾಗ: ಆನಂದ ಮುಚ್ಚಂಡಿ (೯೨.೮೩%) ಪ್ರಥಮ, ಕಿರಣ ಕಾಳೆಪ್ಪನವರ (೯೧.೮೩%) ದ್ವಿತೀಯ ಹಾಗೂ ಪವಿತ್ರಾ ಬಾಗೇವಾಡಿ (೯೧.೫೦%) ತೃತೀಯ ಸ್ಥಾನ ಪಡೆದರೆ ಆಕಾಶ ಹುಲಕುಂದ, ಆನಂದ ಮುಚ್ಚಂಡಿ, ಕಿರಣ ಕಾಳೆಪ್ಪನವರ ಗಣಿತ ವಿಷಯದಲ್ಲಿ ೧೦೦ಕ್ಕೆ ೧೦೦ ಅಂಕ ಪಡೆದಿದ್ದಾರೆ.
ವಾಣಿಜ್ಯ ವಿಭಾಗ: ಹೊಳಬಸು ಹುರಕನ್ನವರ (೯೩%) ಪ್ರಥಮ, ಉದ್ದವ್ವ ಹುಣಶ್ಯಾಳ (೯೧.೮೩%) ದ್ವಿತೀಯ, ರಾಮಸಿದ್ದ ಮಡ್ಡೆಪ್ಪಗೋಳ (೯೦.೫೦%) ತೃತೀಯ ಸ್ಥಾನ ಪಡೆದರೆ ಹಣಮಂತ ಪಾತ್ರೋಟ, ಶ್ರೀದೇವಿ ಉಪ್ಪಾರ, ಸೌಖ್ಯಾ ಸಕ್ರೇಪ್ಪಗೋಳ ಲೆಕ್ಕಾಶಾಸ್ತç ವಿಷಯದಲ್ಲಿ ೧೦೦ ಕ್ಕೆ ೧೦೦ ಅಂಕ ಪಡೆದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಪ್ರಚಾರ್ಯ ಗಿರೀಶ ಗೋರಬಾಳ, ನಿರ್ದೇಶಕರಾದ ಆಶಿರ್ವಾದ ಹುಲಕುಂದ, ಡಾ. ಸಂತೋಷ ಮಿರ್ಜಿ, ಚೇತನ ಜೋಗನ್ನವರ, ಉಪನ್ಯಸಕರಾದ ಡಾ. ಲಖಮಗೌಡ ಪಾಟೀಲ, ಸಂಜೀವ್ ವಾಲಿ, ರಾಚಯ್ಯ ನಿರ್ವಾಣಿ, ರಾಜೇಂದ್ರ ಪಾಟೀಲ, ಎಸ್. ವಿ, ಮೆಳವಂಕಿ, ಮಂಜುನಾಥ ಹಟ್ಟಿ, ಸೇರಿ ಹಲವರು ವಿದ್ಯಾರ್ಥಿಗಳಿಗೆ ಶುಭ ಕೋರಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ