Kannada NewsKarnataka News

ನಿಪ್ಪಾಣಿ ಕ್ಷೇತ್ರದಲ್ಲಿ ಮುಂದುವರಿದ ಪಕ್ಷಾಂತರ ಪರ್ವ: ನೂರಾರು ಕಾರ್ಯಕರ್ತರು ಬಿಜೆಪಿ ಸೇರ್ಪಡೆ


ಮಹಿಳಾ ಶಾಸಕಿಯಾಗಿ ಅಭಿವೃದ್ಧಿಯ ಮಹಾಪೂರ – ಆಕಾಶ ದಬಡೆ


ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ಸ್ಥಳೀಯ ನ್ಯೂ ಏಕತಾ ತರುಣ ಮಂಡಳದ ಪದಾಧಿಕಾರಿಗಳು ಹಾಗೂ ಸದಸ್ಯರು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆಯವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಎಲ್ಲರನ್ನು ಪಕ್ಷದ ಶಾಲು ಹೊದಿಸಿ ಸಚಿವೆ ಜೊಲ್ಲೆ ಬರಮಾಡಿಕೊಂಡರು.
ಮಂಡಳದ ಅಧ್ಯಕ್ಷ ಆಕಾಶ ದಬಡೆ, ಉಪಾಧ್ಯಕ್ಷ ಅನಮೋಲ ವರುಟೆ, ಓಂಕಾರ ಪಾಂಢರೆ, ವೈಭವ ಶ್ರೀಖಂಡೆ, ಗಣೇಶ ಘಾಟಗೆ, ವೈಶಾಲಿ ಕಾಂಬಳೆ, ರಾಜಶ್ರೀ ಶ್ರೀಖಂಡೆ, ಉಮಾ ವರುಟೆ, ಮಹಾದೇವಿ ಘಾಟಗೆ, ಕಮಲ ಸಾಳವೆ, ಮೊದಲಾದವರು ಸೇರಿದಂತೆ ನೂರಾರು ಕೈ ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಆಕಾಶ ದಬಡೆ ಮಾತನಾಡಿ ’ನಗರದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಅಭಿವೃದ್ಧಿಯ ಮಹಾಪೂರವೇ ಹರಿಸುತ್ತಿದ್ದನ್ನು ನಾವು ನೋಡುತ್ತಿದ್ದೇವೆ. ಇಲ್ಲಿಯವರೆಗೆ ನಗರದಲ್ಲಿ ಯಾವೊಬ್ಬ ಶಾಸಕರು ಮಾಡದ ಅಭಿವೃಧ್ಧಿ ಓರ್ವ ಮಹಿಳೆಯಾಗಿ ಕೇವಲ ೧೦ ವರ್ಷಗಳಲ್ಲಿ ಅವರು ಮಾಡಿದ್ದಾರೆ. ನಗರವು ರಾಜ್ಯದಲ್ಲೆ ಮಾದರಿಯಾಗಬೇಕೆಂಬ ಹಂಬಲದಿಂದ ನಾವು ಅವರಿಗೆ ಮತ್ತು ಪಕ್ಷಕ್ಕೆ ಬಲ ತುಂಬಲು ಬಿಜೆಪಿಗೆ ಸೇರ್ಪಡೆಗೊಂಡಿದ್ದೇವೆ’ ಎಂದರು.


ಭೋಜ ಹಾಗೂ ಭೋಜವಾಡಿ ಗ್ರಾಮದ ನೂರಾರು ಕಾರ್ಯಕರ್ತರು ಬಿಜೆಪಿಗೆ

ತಾಲೂಕಿನ ಹಾಗೂ ಇತರ ಸಮಾಜಗಳ ಅಭಿವೃಧ್ಧಿ ಕಂಡು ಬಿಜೆಪಿಗೆ ಸೇರ್ಪಡೆ – ರಾಜು ಮಗದುಮ್


ತಾಲೂಕಿನ ಭೋಜ ಹಾಗೂ ಭೋಜವಾಡಿ ಗ್ರಾಮಗಳ ನೂರಾರು ಜನ ಕಾರ್ಯಕರ್ತರು ಮುಜರಾಯಿ ಸಚಿವೆ ಶಶಿಕಲಾ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು. ಸಚಿವೆ ಶಶಿಕಲಾ ಜೊಲ್ಲೆ ಅವರನ್ನು ಪಕ್ಷದ ಶಾಲು ಹೊದೆಸಿ ಸ್ವಾಗತಿಸಿದರು.
ಶ್ರೀಕೃಷ್ಣ ಹಣಬರ(ಗವಳಿ) ಸಮಾಜದ ರಾಜು ಮಗದುಮ, ಉತ್ತಮಕುಮಾರ ಬಾಡದಹಟ್ಟಿ, ವೈಶಾಲಿ ನಾಯಿಕ, ದಾದಾಸಾಬ ಬಾಡದಹಟ್ಟಿ, ಅಂದುಬಾಯಿ ಹಣಬರ, ಅಶೋಕ ಮಗದುಮ, ಸಂತೋಷ ಬಾಡದಟ್ಟೆ, ಶೋಭಾ ಹಣಬರ, ರವಿಂದ್ರ ಬಾಡದಟ್ಟೆ, ನಾಗರಾಜ ಖೋತ, ಭೀಮರಾವ ಖೋತ, ಸಚಿನ ಮಸ್ತಿ, ರಾಜು ಯಲ್ಲನ್ನವರ, ಶೋಭಾ ಯಲ್ಲನ್ನವರ, ಅಜಿತ ಹಣಬರ, ರಾಜು ಪಾಟೀಲ, ಉತ್ತಮ ಮೋಗಲೆ, ಚಂದ್ರಕಾಂತ ಬೂದಾಳೆ, ರಾಜು ಇಟ್ನಾಳೆ, ಮಾರುತಿ ಬಿದರೊಳೆ, ಕುಮಾರ ಹಣಬರ, ಭರತ ಹಣಬರ, ಸತ್ಯವ್ವಾ ಕುರಳ್ಳೆ, ಮೊದಲಾದವರು ಸೇರಿದಂತೆ ನೂರಾರು ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ರಾಜು ಮಗದುಮ ಮಾತನಾಡಿ ’ಇಚ್ಟು ವರ್ಷ ನಾವು ಒಂದೆ ಪಕ್ಷಕ್ಕೆ ಸೀಮಿತಗೊಂಡು ಇಲ್ಲಿಯವರೆಗೆ ಸಮಾಜದ ಅಭಿವೃದ್ಧಿಯ ಕುರಿತು ಅಪೇಕ್ಷೆ ಮಾಡುತ್ತಲೆ ಇದ್ದೇವು. ಆದರೆ ಕಾಂಗ್ರೆಸ್ ಪಕ್ಷದಿಂದ ಯಾವುದೇ ಪ್ರಗತಿಯಾಗುವ ಕುರುಹು ಸಿಗದೆ ನಾವು ಒದ್ದಾಡುತ್ತಿದ್ದೇವು. ನಮ್ಮ ಕಣ್ಣು ಮುಂದೆಯೇ ಬಿಜೆಪಿ ಪಕ್ಷ ಹಾಗೂ ಜೊಲ್ಲೆ ದಂಪತಿಯಿಂದ ತಾಲೂಕಿನ ಅಭಿವೃದ್ಧಿ, ಇತರ ಸಮಾಜಗಳ ಅಭಿವೃದ್ಧಿ ಕಣ್ಣಾರೆ ಕಾಣುತ್ತಿದ್ದೇವು. ನಮ್ಮ ಸಮಾಜದ ಅಭಿವೃಧ್ಧಿಗಾಗಿ ಬಿಜೆಪಿ ಪಕ್ಷ ಹಾಗೂ ಜೊಲ್ಲೆ ದಂಪತಿಯೊಂದಿಗಿರಲು ಎಲ್ಲ ಬಾಂದವರು ನಿರ್ಣಯಿಸಿ ನಾವು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇವೆ’ ಎಂದರು.

https://pragati.taskdun.com/only-two-stars-in-belgaum/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button