ಪ್ರಗತಿವಾಹಿನಿ ಸುದ್ದಿ; ರಾಯಭಾಗ: ಶ್ರೀ ಬಸವ ಜಯ ಮೃತ್ಯುಂಜಯ ಮಹಾ ಸ್ವಾಮೀಜಿಯವರು ಇದೇ 25 ರಂದು ರಾಯಬಾಗ ಟ್ಟಣಕ್ಕೆ ಆಗಮಿಸುತ್ತಿದ್ದಾರೆ. ನಿರಂತರವಾಗಿ ಮೀಸಲಾತಿ ಹೋರಾಟವನ್ನು ಮಾಡಿ ಸಮಾಜಕ್ಕೆ ಮೀಸಲಾತಿ ಪ್ರಥಮ ಜಯ ತಂದುಕೊಟ್ಟ ಪ್ರಯುಕ್ತ ಭಕ್ತರಿಂದ ಜಗದ್ಗುರುಗಳಿಗೆ ಗುರು ವಂದನಾ ಹಾಗೂ ಜನತಾ ದೇವರಿಗೆ ಶರಣು ವಂದನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕ ಪಂಚಮಸಾಲಿ ಘಟಕ ತಿಳಿಸಿದೆ.
ಈ ಕಾರ್ಯಕ್ರಮಕ್ಕೆ ತಾಲೂಕಿನ ಎಲ್ಲ ಪಂಚಮಸಾಲಿ ಲಿಂಗಾಯತ, ಹಾಗೂ ಲಿಂಗಾಯತ ಒಳಪಂಗಡಗಳ ಭಕ್ತ ಸಮೂಹ ತಪ್ಪದೆ ಬೆಳಗ್ಗೆ 10 ಗಂಟೆಗೆ ಅಂಕಲಿ ರಸ್ತೆಯಲ್ಲಿರುವ ಬೇಡಿಕಿಹಾಳ ತೋಟದಲ್ಲಿ ಆಗಮಿಸಬೇಕೆಂದು ಕೋರಲಾಗಿದೆ. ಜಗದ್ಗುರುಗಳಿಗೆ ಭಕ್ತರಿಂದ ಪಾದಪೂಜೆ ನೆರವೇರಿಸಲಾಗುವುದು. ಶ್ರೀಗಳ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬರಬೇಕೆಂದು ತಾಲೂಕ ಘಟಕ ಮನವಿ ಮಾಡಿದೆ.
ಪಂಚಮಸಾಲಿ – ಗೌಡ- ಮಲೆ ಗೌಡ – ದೀಕ್ಷಾ ಹಾಗೂ ಲಿಂಗಾಯತ ಒಳ ಪಂಗಡಗಳ ಗಳಿಗೆ ಎರಡು ವರ್ಷಗಳ ಐದು ತಿಂಗಳ ನಿರಂತರ ಹೋರಾಟದ ಮೂಲಕ 2D ಹೊಸ ಮೀಸಲಾತಿ ಜಯ ತಂದು ಕೊಟ್ಟ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಪ್ರಥಮ ಜಗದ್ಗುರು ಹಾಗೂ ಮೀಸಲಾತಿ ಕ್ರಾಂತಿಯೋಗಿ ಹಾಗೂ ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಪ್ರಥಮ ಜಗದ್ಗುರು ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳವರ ವಿಜಯೋತ್ಸವಕ್ಕೆ
ರಾಯಬಾಗ ತಾಲ್ಲೂಕಿನ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ವತಿಯಿಂದ ಹಾಗೂ ಭಕ್ತರಿಂದ – ಜಗದ್ಗುರುವಂದನಾ ಹಾಗೂ ಜಗದ್ಗುರುಗಳಿಂದ – ಜನತಾ ದೇವರಿಗೆ ಶರಣುವಂದನಾ ಕಾರ್ಯಕ್ರಮವನ್ನು ನೆರವೇರಿಸಲಾಗುತ್ತದೆ ಎಂದು ಶ್ರೀಗಳ ಆಪ್ತ ವಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ