LatestUncategorized

*ವಿಧಾನಸಭಾ ಚುನಾವಣೆ; 50 ಲಕ್ಷ ಕಾರ್ಯಕರ್ತರೊಂದಿಗೆ ಮೋದಿ ಮಹಾ ಸಂವಾದ ಆರಂಭ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭಾ ಚುನಾವಣೆಗೆ ಕೇವಲ 13 ದಿನಗಳು ಬಾಕಿಯಿದ್ದು ಬಿಜೆಪಿ ಮತ್ತೊಮ್ಮೆ ಅಧಿಕಾರದ ಗದ್ದುಗೆಗೇರಲು ಸಕಲ ಯತ್ನ ನಡೆಸಿದೆ. ಪ್ರಧಾನಿ ನರೇಂದ್ರ ಮೋದಿ ಇಂದು 50 ಲಕ್ಷ ಬಿಜೆಪಿ ಕಾರ್ಯಕರ್ತರೊಂದಿಗೆ ವರ್ಚುವಲ್ ಸಂವಾದ ನಡೆಸಿದ್ದಾರೆ.

Home add -Advt

ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದ ಬಿಜೆಪಿ ಕಾರ್ಯಕರ್ತರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ ಮಹಾ ಸಂವಾದ ಆರಂಭವಾಗಿದ್ದು, ಡಿಜಿಟಲ್ ಕ್ಯಾಂಪೇನ್ ಮೂಲಕ ಯುವಕರನ್ನು ಸೆಳೆಯುವ ನಿಟ್ಟಿನಲ್ಲಿ ತಂತ್ರ ನಡೆಸಿದ್ದಾರೆ.

1680 ಜಿಲ್ಲಾಪಂಚಾಯತ್ ಕ್ಷೇತ್ರಮಟ್ಟದಲ್ಲಿ ಸಂವಾದಕ್ಕೆ ಸಿದ್ಧತೆ ನಡೆಸಲಾಗಿದೆ, ಪ್ರತಿ ಬೂತ್ ಗಳಲ್ಲು ಎಲ್ ಇಡಿ ಸ್ಕ್ರೀನ್ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಧಾನಿ ಮೋದಿ ಸಂವಾದಕ್ಕೆ 24 ಲಕ್ಷಕ್ಕೂ ಹೆಚ್ಚು ಜನರಿಂದ ನಮೋ ಆಪ್ ಡೌನ್ ಲೋಡ್ ಮಾಡಲಾಗಿದೆ.

https://pragati.taskdun.com/karnatakarainupdate-3/


Related Articles

Back to top button