ಪ್ರಗತಿವಾಹಿನಿ ಸುದ್ದಿ; ಕುಂದಗೋಳ: ವಿಧಾನಸಭಾ ಚುನಾವಣಾ ಅಖಾಡದಲ್ಲಿ ರಾಜಕೀಯ ಪಕ್ಷಗಳ ನಾಯಕರ ವಾಕ್ಸಮರ ತಾರಕಕ್ಕೇರಿದೆ. ಪರಸ್ಪರ ವಾಗ್ದಾಳಿ ನಡೆಸುವ ಬರದಲ್ಲಿ ಬಾಯಿಗೆ ಬಂದಂತೆ ಪದ ಪ್ರಯೋಗ ಮಾಡುತ್ತಿದ್ದಾರೆ. ಕಾಂಗ್ರೆಸ್ ವಿರುದ್ಧ ವಾಕ್ಪ್ರಹಾರ ನಡೆಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಗಾಂಧಿ ಕುಟುಂಬದ ಬಗ್ಗೆ ನಾಲಿಗೆ ಹರಿ ಬಿಟ್ಟಿದ್ದಾರೆ.
ಕುಂದಗೋಳದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಯತ್ನಾಳ್, ಕಾಂಗ್ರೆಸ್ ಪಕ್ಷದಲ್ಲಿ ಮೂರು ಬಿಟ್ಟವರು ಇದ್ದಾರೆ. ಊರ ಬದ್ಮಾಷ್ ಗಳು ಇದ್ದಾರೆ ಎಂದು ಕಿಡಿಕಾರಿದ್ದಾರೆ.
ಇಂದು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರ ಮಗ ಅವಹೇಲನಕಾರಿಯಾಗಿ ಮಾತನಾಡಿದ್ದರೆ. ಕಾಂಗ್ರೆಸ್ ಪಕ್ಷದಲ್ಲಿ ಮೂರೂ ಬಿಟ್ಟವರು ಇದ್ದಾರೆ. ಎಲ್ಲ ಬಿಟ್ಟು ನಿಂತ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಕಾಂಗ್ರೆಸ್ ನಲ್ಲಿದ್ದಾರೆ. ಮೋದಿಯವರು ಪ್ರಧಾನಿಯಾಗಿದ್ದಾರೆ ಎಂಬ ಕಾರಣಕ್ಕೆ ಹತಾಶರಾಗಿ ಹಗುರವಾಗಿ ಮಾತನಾಡುತ್ತಿದ್ದಾರೆ. ಈ ಬಗ್ಗೆ ಯೋಚನೆ ಮಾಡಿ ಎಂದು ಹೇಳಿದರು.
ಇಷ್ಟಕ್ಕೆ ಸುಮ್ಮನಾಗದ ಯತ್ನಾಳ್, ಗಾಂಧಿ ಕುಟುಂಬದ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ. ಈ ಗಾಂಧಿ ಕುಟುಂಬ ಮಿಕ್ಸ್ ವೆಜಿಟೇಬಲ್ಸ್ ಇದ್ದಂತೆ. ಇದು ಮಹಾತ್ಮಾ ಗಾಂಧಿ ಕಾಂಗ್ರೆಸ್ ಅಲ್ಲ, ಇದು ನಕಲಿ ಗಾಂಧಿಗಳ ಕಾಂಗ್ರೆಸ್. ಇವರ ಅಡ್ಡ ಹೆಸರು ಗಾಂಧಿ ಅಲ್ಲವೇ ಅಲ್ಲ, ಇವರು ಒರಿಜಿನಲ್ ಗಾಂಧಿಗಳೂ ಅಲ್ಲ. ಈ ಗಾಂಧಿ ಕುಟುಂಬ ಮಿಕ್ಸ್ ವೆಜಿಟೇಬಲ್ಸ್ ಇದ್ದಂತೆ. ಒಂದು ಇಟಲಿ ಪ್ರಾಡೆಕ್ಟ್, ಒಂದು ಇಂಡಿಯಾ ಪ್ರಾಡೆಕ್ಟ್, ಒಂದು ಖಾನ್ ಪ್ರಾಡೆಕ್ಟ್. ಇವರದ್ದು ಯಾವುದೋ ಖಾನ್ ಗಳ ಕಂಪನಿ ಎಂದು ಹೇಳುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ