
ಸೆ. 29 ರಂದು ಬೆಳಗಾವಿಯಲ್ಲಿ ಹಾಫ್ ಮ್ಯಾರಾಥಾನ್
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಲೇಕವ್ಯೂವ ಫೌಂಡೇಶನ್ ಮತ್ತು ರೋಟರಿ ಕ್ಲಬ್ ಆಫ್ ವೇಣುಗ್ರಾಮ ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ಮುಂಬರುವ ಸೆ. 29 ರಂದು ಬೆಳಗಾವಿಯಲ್ಲಿ ಹಾಫ್ ಮ್ಯಾರಾಥಾನ್ ಸ್ಫರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಲೇಕವ್ಯೂವ ಫೌಂಡೇಶನ್ ಅಧ್ಯಕ್ಷ ಡಾ. ಶಶಿಕಾಂತ ಕುಲಗೋಡ ಅವರು ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೇಕವ್ಯೂವ ಫೌಂಡೇಶನ್ ಮತ್ತು ರೋಟರಿ ಕ್ಲಬ್ ಆಫ್ ವೇಣುಗ್ರಾಮ ಬೆಳಗಾವಿ ಈ ಎರಡು ಸಂಸ್ಥೆಗಳು ಕಳೆದ ಅನೇಕ ವರ್ಷಗಳಿಂದ ಜನರಲ್ಲಿ ಉತ್ತಮ ಆರೋಗ್ಯ ಕುರಿತಾಗಿ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ. ಕಳೆದ ವರ್ಷವೂ ಸಹ ಹಾಫ್ ಮ್ಯಾರಾಥಾನ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವರ್ಷದ ಸ್ಫರ್ಧೆಯಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಜನರು ಈ ಸ್ಫರ್ಧೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಈ ಸ್ಫರ್ಧೆಯಲ್ಲಿ 5 ಕಿಮಿ, 10 ಕೀಮಿ, 21 ಕಿಮೀ ಮೂರು ವಿಭಾಗಗಳಲ್ಲಿ ಸ್ಫರ್ಧೆ ನಡೆಯಲಿದೆ. ಅದಲ್ಲದೇ ಎಂಎಲ್‌ಆರ್‌ಸಿ, ಕಮಾಂಡೋ, ಏರಫೋರ್ಸ್ , ಮತ್ತು ಪೋಲಿಸರಿಗಾಗಿ ವಿಶೇಷ ವಿಭಾಗವನ್ನು ರಚಿಸಲಾಗಿದೆ ಎಂದು ಹೇಳಿದ ಅವರು, ರೆಂಜೆಂಟಾ ಹೋಟೆಲ್ ಅವರು ಮುಖ್ಯ ಪ್ರಾಯೋಜಕರಾಗಿದ್ದು, ಕೆನರಾ ಬ್ಯಾಂಕ್ ಮತ್ತು ಏಕಸ್ ಸಂಸ್ಥೆ ಸಹ ಪ್ರಾಯೋಜಕತ್ವವನ್ನು ವಹಿಸಿದೆ.
ಅದಲ್ಲದೇ ಈ ಮ್ಯಾರಾಥಾನ್ ಸ್ಫರ್ಧೆಯಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಪಟುಗಳಾದ ವೆಂಕಟೇಶ್ ಪ್ರಸಾದ್, ಸುನಿಲ್ ಜೋಶಿ ಅವರೂ ಸಹ ಭಾಗವಹಿಸಲಿದ್ದಾರೆ, ಈ ಸ್ಫರ್ಧೆಯಲ್ಲಿ ಭಾಗವಹಿಸುವವರು ಹೆಚ್ಚಿನ ಮಾಹಿತಿಗಾಗಿ ವಿನಯ ಬಾಳಿಕಾಯಿ 8453004747 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ರೋಟರಿ ಕ್ಲಬ್ ಆಫ್ ವೇಣುಗ್ರಾಮ ಬೆಳಗಾವಿ ಅಧ್ಯಕ್ಷ ರಾಜೇಶಕುಮಾರ ತಳೆಗಾಂವ, ರೆಂಜೆಂಟಾ ಹೋಟೆಲ್ ಸಿಇಓ ಅಸಿಫ ಖೋಜಾ, ಏಕಸ್ ಸಂಸ್ಥೆಯ ಡಾ.ಪ್ರವೀಣ ನಾಯಕ, ಕೆನರಾ ಬ್ಯಾಂಕಿನ ವಿಭಾಗೀಯ ಪ್ರಬಂಧಕ ಸಂಗಮೇಶ ಪಡನಾಡ, ಡಾ.ಕೆ.ಎಸ್.ಮಾನೆ, ವಿನಯ ಬಾಳಿಕಾಯಿ, ಕುಲದೀಪ ಹಂಗಿರಿಗೇಕರ ಮೊದಲಾದವರು ಉಪಸ್ಥಿತರಿದ್ದರು.////



