Kannada NewsKarnataka NewsLatest

ಮಾಂಗೂರ ಗ್ರಾಮದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಚುನಾವಣಾ ಪ್ರಚಾರ

ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: “ರಾಜ್ಯದ ಸಚಿವೆ, ಕ್ಷೇತ್ರದ ಶಾಸಕಿ, ಯಾಗಿ ಮೂಲ ಸೌಕರ್ಯಗಳನ್ನು ಒದಗಿಸುವುದೊಂದಿಗೆ ಜನರ ತೊಂದರೆ, ಸಂಕಷ್ಟಗಳನ್ನು ನಿವಾರಿಸಲು ಆದ್ಯತೆ ನೀಡಿದ್ದು ಯುವವರ್ಗ ಹಾಗೂ ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡಿದ್ದೇನೆ. ಶೇ.20ರಷ್ಟು ರಾಜಕಾರಣ ಹಾಗೂ ಶೇ.80ರಷ್ಟು ಸಮಾಜಕಾರಣ ಮಾಡಿದ್ದರ ಫಲವಾಗಿ ಜನರು ನನ್ನಗೆ ಯಶಸ್ಸಿನ ಉಡುಗೊರೆ ನೀಡಲಿದ್ದಾರೆ” ಎಂದು ಸಚಿವೆ ಶಶಿಕಲಾ ಜೊಲ್ಲೆ ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕಿನ ಮಾಂಗೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸ್ಥಳೀಯ ಮತಕ್ಷೇತ್ರದ ತಮ್ಮ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ‘ಸ್ಥಳೀಯ ಹಾಲಶುಗರ್ ಕಾರ್ಖಾನೆ ಹಾಗೂ ಜೊಲ್ಲೆ ಗ್ರುಪ್ ಅಡಿಯಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಯುವವರ್ಗಕ್ಕೆ ಉದ್ಯೋಗವಕಾಶ ನೀಡಿದ್ದು ಬರುವ ದಿನಗಳಲ್ಲಿ ಇನ್ನೂ ಸಾವಿರಾರು ಯುವವರ್ಗಕ್ಕೆ ಉದ್ಯೋಗವಕಾಶ ನೀಡುವ ಉದ್ದೇಶವಿದೆ. ಕ್ಷೇತ್ರದ ಸುಮಾರು 70 ಮಹಿಳೆಯರು ಉದ್ಯೋಗಿನಿ ಯೋಜನೆಯಡಿ 10 ಲಕ್ಷ ರೂ. ಸಾಲ ಪಡೆದು ಉದ್ಯೋಗ ಆರಂಭಿಸಿದ್ದು ನನಗೆ ಹೆಮ್ಮೆ ತಂದಿದೆ. ಇದೆ ರೀತಿ ಕ್ಷೇತ್ರದ ಎಲ್ಲ ಮಹಿಳೆ, ಯುವವರ್ಗಕ್ಕೆ ಸ್ವಾವಲಂಬಿಯಾಗುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು. ಇಂತಹ ಅನೇಕ ಯೋಜನೆಗಳು ನಾವು ರೂಪಿಸಿದ್ದು ಚುನಾವಣೆಯಲ್ಲಿ ಬಹುಮತಗಳಿಂದ ಗೆಲ್ಲಿಸಿ’ ಎಂದರು.

ರಾಜ್ಯಸಭಾ ಸದಸ್ಯ ಧನಂಜಯ ಮಾಡಿಕ ಮಾತನಾಡಿ ‘ಜೊಲ್ಲೆ ದಂಪತಿ ಮತಕ್ಷೇತ್ರದ ಚಿತ್ರಣವನ್ನೇ ಬದಲಾಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಬಲ ತುಂಬಲು ಶಶಿಕಲಾ ಜೊಲ್ಲೆಯವರಿಗೆ ಎಲ್ಲರೂ ಮತದಾನ ಮಾಡಿ’ ಎಂದರು.
ಉದ್ಯಮಿ ರುಷಭ್ ಜೈನ, ವಿಶಾಲ ಸುತಾರ ಮಾತನಾಡಿದರು.

ಸ್ಥಳೀಯ ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ಸಂತೋಷ ಸಾಂಗಾವಕರ, ಪವನ ಪಾಟೀಲ, ವೀರೇಂದ್ರ ಮಾನೆ, ಮಲ್ಲಪ್ಪಾ ಚೌಗುಲೆ, ಭೈಯ್ಯಾ ಬೋಧಲೆ, ನೀತೇಶ ಖೋತ, ಶೀತಲ ಬಾಚಣೆ, ಸುನೀತಾ ಪಾಟೀಲ, ಸುಹಾಸಿನಿ ಚೌಗುಲೆ, ಮತ್ತಿತರರು ಉಪಸ್ಥಿತರಿದ್ದರು.

https://pragati.taskdun.com/election-campaign-in-various-places-in-raibag-by-taluk-dr-prabhakar-kore/
https://pragati.taskdun.com/demand-to-name-belagavi-railway-station-as-dr-shivabasava-swamini-station/
https://pragati.taskdun.com/amit-shah-met-harihar-veerashaiva-panchamasali-peethadhipati-vachanananda-shri/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button