Kannada NewsKarnataka News

ದೇಶದಲ್ಲಿ ಪ್ರಧಾನಿ ಮೋದಿ, ನಿಪ್ಪಾಣಿಯಲ್ಲಿ ಜೊಲ್ಲೆ – ಸಚಿವ ರಾಮದಾಸ್ ಅಠವಳೆ



ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ಪ್ರಧಾನಿ ನರೇಂದ್ರ ಮೋದಿಯವರು ಕಾಂಗ್ರೆಸ್ ನಾಶ ಮಾಡುವ ಕಾರ್ಯ ಮಾಡಿದ್ದಾರೆ. ದೇಶಕ್ಕೆ ಪ್ರಧಾನಿ ಮೋದಿ ಹಾಗೂ ಸ್ಥಳೀಯ ಕ್ಷೇತ್ರಕ್ಕೆ ಶಶಿಕಲಾ ಜೊಲ್ಲೆಯವರನ್ನು ಬಿಟ್ಟು ಪರ್ಯಾಯವೇ ಇಲ್ಲ’ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ರಾಮದಾಸ್ ಅಠವಳೆ ಹೇಳಿದರು.
ತಾಲೂಕಿನ ಗಳತಗಾ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಸಚಿವೆ ಶಶಿಕಲಾ ಜೊಲ್ಲೆಯವರ ಪರ ಮಂಗಳವಾರ ಆಯೋಜಿಸಿದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ’ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಪಾದಸ್ಪರ್ಶದಿಂದ ನಗರವು ಪವಿತ್ರವಾಗಿದೆ. ಅದರ ನೆನಪಿಗಾಗಿ ಅವರ ಭವ್ಯ ಪ್ರತಿಮೆಯನ್ನು ಶಶಿಕಲಾ ಜೊಲ್ಲೆ ಗವಾಣ ಗ್ರಾಮದ ೧೦ ಎಕರೆ ಜಾಗದಲ್ಲಿ ಸ್ಥಾಪನೆ ಮಾಡುತ್ತಿರುವುದು ಹೆಮ್ಮೆಯ ವಿಷಯ’ ಎಂದರು.
ಬಿಜೆಪಿ ಅಭ್ಯರ್ಥಿ ಶಶಿಕಲಾ ಜೊಲ್ಲೆ ಮಾತನಾಡಿ ’ಡಾ. ಬಿ. ಆರ್. ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸದೇ ಹೋಗಿದ್ದರೆ ತಾನೊಬ್ಬ ಸಚಿವಳಾಗಿ ತಮ್ಮ ಮುಂದೆ ನಿಲ್ಲಲು ಆಗುತ್ತಿರಲಿಲ್ಲ. ಹಾಗಾಗಿ ತನಗೆ ಡಾ. ಬಿ.ಆರ್. ಅಂಬೇಡ್ಕರ, ಛತ್ರಪತಿ ಶಿವಾಜಿ ಮಹಾರಾಜರು, ಜಗಜ್ಯೋತಿ ಬಸವೇಶ್ವರ ಅವರು ಆದರ್ಶರು. ಅವರ ದಾರಿಯಲ್ಲಿಯೇ ತಾನು ನಡೆಯುತ್ತಿದ್ದು, ಈ ಚುನಾವಣೆಯಲ್ಲಿ ತನ್ನನ್ನು ಗೆಲ್ಲಿಸಿ. ನಿಪ್ಪಾಣಿಯ ಸವಾಂಗೀಣ ಅಭಿವೃದ್ಧಿಯ ಮುಂದುವರಿಕೆಗೆ ಸಹಕರಿಸಿ’ ಎಂದು ಮನವಿ ಮಾಡಿಕೊಂಡರು. ಗವಾಣ ಗ್ರಾಮದಲ್ಲಿ ಡಾ. ಅಂಬೇಡ್ಕರರ ಸ್ಮಾರಕದೊಂದಿಗೆ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಗ್ರಂಥಾಲಯ ಹಾಗೂ ಒಂದು ವಿಜ್ಞಾನ ಕೇಂದ್ರವನ್ನು ಪ್ರಾರಂಭಿಸಲಾಗುವುದೆಂದರು.
ಸಂಸದ ಅಣ್ಣಾಸಾಹೇಬ ಜೊಲ್ಲೆ, ರಾಜ್ಯಸಭಾ ಸದಸ್ಯ ಧನಂಜಯ ಮಾಡಿಕ, ಡಾ. ಅಜಿತ ಗೋಪಚಾಡೆ, ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಚೇರ್ಮನ್ ಸಹಕಾರ ರತ್ನ ಚಂದ್ರಕಾಂತ ಕೋಠಿವಾಲೆ, ಬಸವಪ್ರಸಾದ ಜೊಲ್ಲೆ, ಜ್ಯೋತಿಪ್ರಸಾದ ಜೊಲ್ಲೆ, ದುಂಡಪ್ಪ ಬೆಂಡವಾಡೆ, ಮಲಗೌಡ ಪಾಟೀಲ, ಸುಭಾ? ಯರನಾಳೆ, ರೂಪಾಲಿ ವಾಯ್ದಂಡೆ, ಉತ್ತಮ ಕಾಂಬಳೆ, ಶಹಾಜಿ ಕಾಂಬಳೆ, ಮೊದಲಾದವರು ಸಹಿತ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದರು.

https://pragati.taskdun.com/jolle-model-in-state-through-development-of-crores-of-rupees-without-caste-party-discrimination-gopichand-padalkar/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button