Kannada NewsKarnataka NewsLatest

*ಬೆಳಗಾವಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರೋಡ್ ಶೋ ಆರಂಭ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ನಾಯಕರು ಅಭ್ಯರ್ಥಿಗಳ ಪರ ಕೊನೆ ಹಂತದ ಪ್ರಚಾರದಲ್ಲಿ ತೊಡಗಿದ್ದು, ಒಂದೆಡೆ ರಾಜಧಾನಿ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ರೋಡ್ ಶೋ ನಡೆಸಿದ್ದರೆ, ಇತ್ತ ಕುಂದಾನಗರಿ ಬೆಳಗಾವಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರೋಡ್ ಶೋ ನಡೆಸಿದ್ದಾರೆ.

ಬೆಳಗಾವಿ ದಕ್ಷಿಣ ಕ್ಷೇತ್ರದ ವಡಗಾವಿಯ ಅರಳಿಕಟ್ಟೆಯಿಮ್ದ ರೊಡ್ ಶೋ ಆರಂಭವಾಗಿದ್ದು, ಬಿಜೆಪಿ ಅಭ್ಯರ್ಥಿ ಅಭಯ್ ಪಾಟೀಲ್ ಪರ ಅಮಿತ್ ಶಾ ಮತ ಯಾಚನೆ ನಡೆಸಿದ್ದಾರೆ.

Home add -Advt

ವಡಗಾವಿ ಮುಖ್ಯರಸ್ತೆ, ನಾಥ್ ಫೈ ವೃತ್ತ, ಶಹಾಪುರ ಖಡೇಬಜಾರ್ ಮಾರ್ಗವಾಗಿ ರೋಡ್ ಶೋ ಸಾಗಿದ್ದು, ಶಹಾಪುರದ ಶಿವಚರಿತ್ರೆ ಬಳಿ ಮುಕ್ತಾಯಗೊಳ್ಳಲಿದೆ.

ರ್ಯಾಲಿ ನೋಡಲು ರಸ್ತೆಯುದ್ದಕ್ಕೂ ಜನ ಅಪಾರ ಸಂಖ್ಯೆಯಲ್ಲಿ ಸೇರಿದ್ದಾರೆ.

https://pragati.taskdun.com/pm-narendra-modiroad-showbangalore-4/

Related Articles

Back to top button