Kannada NewsKarnataka NewsLatest

*ಶಶಿಕಲಾ ಜೊಲ್ಲೆ ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸ; ಮಹಾ ಡಿಸಿಎಂ ದೇವೇಂದ್ರ ಫಡ್ನವಿಸ್*

ಪ್ರಗತಿವಾಹಿನಿ ಸುದ್ದಿ; ನಿಪ್ಪಾಣಿ: ‘ಶಶಿಕಲಾ ಜೊಲ್ಲೆಯವರು ಕ್ಷೇತ್ರದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಪ್ರಯತ್ನಿಸುತ್ತಿರುವುದು ಪ್ರಚಾರಸಭೆಯಲ್ಲಿ ನೆರೆದಿದ್ದ ಮಹಿಳೆಯರ ಸಂಖ್ಯೆಯಿಂದ ತಿಳಿಯುತ್ತದೆ. ಸುಮಾರು ಒಂದು ಲಕ್ಷ ಮತಗಳ ಅಂತರದಿಂದ ಸಚಿವೆ ಜೊಲ್ಲೆ ಹ್ಯಾಟ್ರಿಕ್ ಸಾಧಿಸಲಿದ್ದಾರೆ’ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದರು.

ನಗರದ ಮುನಿಸಿಪಲ್ ಪ್ರೌಢಶಾಲೆಯ ಮೈದಾನದಲ್ಲಿ ಸ್ಥಳೀಯ ಮತಕ್ಷೇತ್ರದ ಅಭ್ಯರ್ಥಿ ಸಚಿವೆ ಶಶಿಕಲಾ ಜೊಲ್ಲೆ ಪರ ಭಾನುವಾರ ಆಯೋಜಿಸಿದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ‘2014ರಲ್ಲಿ ಪ್ರಧಾನಿ ಮೋದಿಯವರು ನವಭಾರತದ ಸಂಕಲ್ಪ ಹೊತ್ತುಕೊಂಡು ಆಡಳಿತ ನಡೆಸಿದರು. ರೈತರ ಖಾತೆಗೆ ನೇರ ಹಣ, ದಲ್ಲಾಳಿಗೆ ಕಡಿವಾನ, ಯಾವುದೇ ಲಂಚ ಕೊಡದೆ ಎಲ್ಲಾ ಯೋಜನೆಗಳ ಅನುದಾನ ಆಯಾ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡುವ ವ್ಯವಸ್ಥೆ ಜಾರಿಗೆ ತಂದರು. ಕರೊನಾ ವ್ಯಾಕ್ಸಿನ್ ತಯಾರಿಸಿದ 5 ದೇಶಗಳಲ್ಲಿ ನಮ್ಮ ದೇಶ ಒಂದಾಗಿದೆ. ಪ್ರಧಾನಿ ಮೋದಿಯವರು 130 ಕೋಟಿ ಜನರಿಗೆ ಉಚಿತ ವ್ಯಾಕ್ಸಿನ್ ಕೊಟ್ಟರು’ ಎಂದರು.

‘ಕೊರೊನಾ ನಂತರ ಅನೇಕ ದೇಶಗಳು ದಿವಾಳಿಯತ್ತ ಸಾಗಿವೆ. ಆದರೆ ಮೋದಿ ಸರ್ಕಾರವು ಸುಭದ್ರ ಆರ್ಥಿಕತೆ ನೀತಿಗಳಿಂದ ವಿಶ್ವದಾದ್ಯಂತ ಬಲಿಷ್ಠ ರಾಷ್ಟçದತ್ತ ದಾಪುಗಾಲು ಇಡುತ್ತಿದೆ. ಡಬಲ್ ಎಂಜಿನ್ ಸರ್ಕಾರದಿಂದ ಈ ಕ್ಷೇತ್ರದಲ್ಲಿ ಸಚಿವೆ ಜೊಲ್ಲೆಯವರು 2000 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಯಾಗಿವೆ’ ಎಂದರು.

‘ಬಜರಂಗ ದಳವನ್ನು ನಿಷೇಧಿಸಲು ಹೊರಟಿರುವ ಕಾಂಗ್ರೆಸ್ ತಲೆ ಕೆಟ್ಟಿದೆ. ಜೈ ಬಜರಂಗ ಬಲಿ, ಜೈ ಶ್ರೀರಾಮ ಘೋಷಣೆಗೆ ಅಡ್ಡಿ ಪಡಿಸುವವರಿಗೆ ಮೇ10ರಂದು ಉತ್ತರ ಕೊಡಿ. ನಿಮ್ಮ ಮನದಲ್ಲಿಯ ಬಜರಂಗ ಜಾಗೃತ ಮಾಡಲು ನಾನು ಬಂದಿದ್ದೇನೆ. ಕೇವಲ ಒಂದೆ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಎನ್‌ಸಿಪಿಯು ಮಹಾರಾಷ್ಟçದಲ್ಲಿ ಕೇವಲ ಮೂರೂವರೆ ಜಿಲ್ಲೆಯ ಪಕ್ಷವಾಗಿದೆ. ಅದನ್ನು ಪ್ಯಾಕ್ ಮಾಡಿ ನಮ್ಮ ರಾಜ್ಯಕ್ಕೆ ಕಳುಹಿಸಿ’ ಎಂದ ಅವರು ಸತೀಶ ಜಾರಕಿಹೊಳಿ ಹಿಂದೂ ಪದ ಅಶ್ಲೀಲವೆಂದು ಹೇಳಿದ್ದರು. ಆದರೆ ಹಿಂದೂ ಪದ ಅಶ್ಲೀಲವಲ್ಲ, ಅವರ ಮನಸ್ಥಿತಿ ಅಶ್ಲೀಲ, ಅವರ ಮೆದುಳಿನಲ್ಲಿ ಅಶ್ಲೀಲತೆ ತುಂಬಿದೆ’ ಎಂದರು.

ದೇಶಕ್ಕೆ ಮೋದಿ, ಕರ್ನಾಟಕಕ್ಕೆ ಬಿಜೆಪಿ ಮತ್ತು ಸ್ಥಳೀಯ ಕ್ಷೇತ್ರಕ್ಕೆ ಶಶಿಕಲಾ ಜೊಲ್ಲೆಯವರಿಗೆ ಪರ್ಯಾಯ ಇಲ್ಲ. ಮತ ಪೆಟ್ಟಿಗೆಯಿಂದ ನಿಮ್ಮ ಸೇವಕರನ್ನು ಚುನಾಯಿಸಿ, ಅಭಿವೃದ್ಧಿ ಮಾಡಿದ ಶಶಿಕಲಾ ಜೊಲ್ಲೆಯವರು ಹ್ಯಾಟ್ರಿಕ್ ಸಾಧಿಸುವಲ್ಲಿ ಸಹಕರಿಸಿ. ಬಜರಂಗ ದಳ ನಿಷೇಧಿಸುತ್ತಿರುವವರಿಗೆ ಮನೆಗೆ ಕಳುಹಿಸಿ’ ಎಂದರು.

ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ ‘ಮಹಿಳಾ ಸಬಲೀಕರಣದೊಂದಿಗೆ ಅವರು ಸಿದ್ಧಪಡಿಸಿದ ಉತ್ಪನ್ನಗಳನ್ನು ರಫ್ತು ಮಾಡುವ ಯೋಜನೆ ರೂಪಿಸಿದ್ದೇನೆ. ಕ್ಷೇತ್ರದಲ್ಲಿ ಶಿಕ್ಷಣ, ಆರೋಗ್ಯ, ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಅಭಿವೃಧ್ಧಿಗೆ ಆದ್ಯೆ ನೀಡಿದ್ದೇನೆ. ಜೊಲ್ಲೆ ಗ್ರುಪ್ ಹಾಗೂ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಸಹಯೋಗದಲ್ಲಿ ಕ್ಷೇತ್ರದ ಸುಮಾರು 2 ಸಾವಿರಕ್ಕೂ ಅಧಿಕ ಯುವವರ್ಗಕ್ಕೆ ಉದ್ಯೋಗವಕಾಶ ನೀಡಲಾಗಿದೆ. ಇನ್ನುಮುಂದೆ 3 ಸಾವಿರಕ್ಕೂ ಅಧಿಕ ಉದ್ಯೋಗವಕಾಶಗಳನ್ನು ನೀಡುವುದೊಂದಿಗೆ ಅನೇಕ ಯೋಜನೆಗಳನ್ನು ಜಾರಿಗೊಳಸಲಾಗುವುದು. ವಿರೋಧಿಗಳು ಅಭಿವೃಧ್ಧಿ ಕಾರ್ಯಗಳ ಕುರಿತು ಮಾತನಾಡದೆ ವೈಯಕ್ತಿಕವಾಗಿ ಟೀಕೆ ಮಾಡುತ್ತಿದ್ದಾರೆ. ನಾನು ಅದನ್ನು ಗಮನಿಸದೆ ಕೇವಲ ಅಭಿವೃಧ್ಧಿಯತ್ತ ಚಿತ್ತ ಹರಿಸುತ್ತೇನೆ’ ಎಂಧರು.

ಈ ಸಂದರ್ಭದಲ್ಲಿ ಮಹಾರಾಷ್ಟ್ರದ ನಾಯಕರು ಜಯಕುಮಾರ ರಾವಳ, ಸುರೇಶ ಹಳವನಕರ, ಪ್ರಕಾಶ ಆವಾಡೆ, ಧನಂಜಯ ಮಹಾಡಿಕ, ಸಮರಜೀತಸಿಂಹ ಘಾಟಗೆ, ಸಂಜಯ ಪಾಟೀಲ, ಕವಿತಾ ದೇಶಮುಖ, ರಾಹುಲ ಅವಾಡೆ, ಡಾ. ಅಜೀತ ಗೋಪಚಾಡೆ, ಸದಾಭಾವು ಖೋತ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಈರಣ್ಣ ಕಡಾಡಿ, ಚಂದ್ರಕಾಂತ ಕೋಠಿವಾಲೆ, ರಾಮಗೊಂಡಾ ಪಾಟೀಲ, ಜಯವಂತ ಭಾಟಲೆ, ಬಸವಪ್ರಸಾದ ಜೊಲ್ಲೆ ಮತ್ತು ಸಾವಿರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

https://pragati.taskdun.com/dasara-mahotsavabalarama-elephantdeath/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button