ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭಾ ಚುನಾವಣೆಗೆ ಒಂದು ದಿನ ಮಾತ್ರ ಬಾಕಿಯಿದ್ದು, ನಾಳೆ ನಡೆಯಲಿರುವ ಮತದಾನಕ್ಕೆ ರಾಜಧಾನಿ ಬೆಂಗಳೂರಿನಿಂದ ಊರುಗಳಿಗೆ ತೆರಳುವ ಮತದಾರರಿಗಾಗಿ ನೈಋತ್ಯ ರೈಲ್ವೆ ಇಲಾಖೆ ವಿಶೇಷ ರೈಲು ವ್ಯವಸ್ಥೆಗಳನ್ನು ಮಾಡಿದೆ.
ಈಗಾಗಲೇ ಅಸ್ಥಿತ್ವದಲ್ಲಿರುವ ರೈಲುಗಳಿಗೆ ಹೆಚ್ಚುವರಿ ಕೋಚ್ ಅಳವಡಿಸಲಾಗಿದೆ. ಅಲ್ಲದೇ ಬೆಂಗಳೂರು ಹಾಗೂ ಬೆಳಗಾವಿ ಮಧ್ಯೆ ಒಂದು ವಿಶೇಷ ರೈಲು ಸಂಚರಿಸಲಿದೆ.
ಬೆಂಗಳೂರಿನಿಂದ ಹುಬ್ಬಳ್ಳಿ ಮಾರ್ಗವಾಗಿ ಬೆಳಗಾವಿಗೆ ಈ ವಿಶೇಷ ರೈಲು ಸಂಚರಿಸಲಿದೆ. ಇನ್ನು ಬೆಂಗಳೂರಿನಿಂದ ಬೀದರ್ ಗೆ ಕಲಬುರ್ಗಿ ಮಾರ್ಗವಾಗಿಯೂ ರೈಲು ಸಂಚರಿಸಲಿದೆ. ಬೆಂಗಳೂರಿನ ಯಶವಂತಪುರದಿಂದ ಮುರುಡೇಶ್ವರಕ್ಕೆ ವಿಶೇಷ ರೈಲು ಸಂಚರಿಸಲಿದೆ.
ಇನ್ನು ಬೆಂಗಳೂರು- ಹುಬ್ಬಳ್ಳಿ ಜನಶತಾಬ್ದಿ ಎಕ್ಸ್ ಪ್ರೆಸ್ (12079/80) ರೈಲಿಗೆ ಎರಡು ಹೆಚ್ಚುವರಿ ಕೋಚ್ ಅಳವಡಿಸಲಾಗಿದೆ. ಬಾಗಲಕೋಟೆ, ಮೈಸೂರು, ಬಸವ ಎಕ್ಸ್ ಪ್ರೆಸ್(17307/17308) ಗೆ ಹಾಗೂ ಬೆಂಗಳೂರು-ನಾಂದೇಡ್ ವಯಾ ರಾಯಚೂರು, ಯಾದಗಿರಿ ರೈಲಿಗೆ ತಲಾ ಒಂದು ಹೆಚ್ಚುವರಿ ಕೋಚ್ ಹಾಗೂ ಬೆಂಗಳೂರು ಕಾರವಾರ ಮಧ್ಯೆ ಸಂಚರಿಸುವ ರೈಲಿಗೂ ಹೆಚ್ಚುವರಿ ಕೋಚ್ ಅಳವಡಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ