Kannada NewsKarnataka News

ಕಲ್ಲೋಳಿಯಲ್ಲಿ ಮತದಾನ ಮಾಡಿದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ

ಪ್ರಗತಿವಾಹಿನಿ ಸುದ್ದಿ, ಮೂಡಲಗಿ: ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಅರಬಾವಿ ವಿಧಾನಸಭಾ ಕ್ಷೇತ್ರದ ಕಲ್ಲೋಳಿ ನಗರದ ಪಟ್ಟಣ ಪಂಚಾಯಿತಿ ಕಾರ್ಯಾಲಯದ ಬೂತ್ ನಂಬರ್ 101 ರಲ್ಲಿ ಮತದಾನ ಮಾಡಿದರು.

ಇದೆ ವೇಳೆ ಈರಣ್ಣ ಕಡಾಡಿ ಅವರ ತಂದೆ- ತಾಯಿ ಅವರ ಧರ್ಮಪತ್ನಿ, ಸಹೋದರರೂ ಅವರೊಂದಿಗೆ ಸರದಿ ಸಾಲಿನಲ್ಲಿ ನಿಂತು ಮತ ಚಲಾವಣೆ ಮಾಡಿದರು.

ಈ ವೇಳೆ ಮಾತನಾಡಿದ ಈರಣ್ಣ ಕಡಾಡಿ, “ಚುನಾವಣೆ ಪ್ರಜಾಪ್ರಭುತ್ವ ವ್ಯವಸ್ಥೆಯ ದೊಡ್ಡ ಹಬ್ಬವಿದ್ದಂತೆ. ಮತದಾನ ಮಾಡುವ ಮೂಲಕ ಪ್ರತಿಯೊಬ್ಬ ನಾಗರಿಕ ತನ್ನ ಕರ್ತವ್ಯವನ್ನು ನಿಭಾಯಿಸಬೇಕು. ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಆ ಮೂಲಕ ಒಳ್ಳೆಯ ಸರಕಾರ ರಚಿಸುವಲ್ಲಿ ಕೈಜೋಡಿಸಬೇಕು. ಸ್ಪಷ್ಟ ಬಹುಮತವಿಲ್ಲದೇ ಕಳೆದ ಹಲವು ವರ್ಷಗಳಿಂದ ಆಡಳಿತ ವ್ಯವಸ್ಥೆ ತೊಂದರೆಗೊಳಗಾಗಿರುವುದನ್ನು ಎಲ್ಲರೂ ಗಮನಿಸಿದ್ದಾರೆ. ಈ ಬಾರಿ ಆ ತೊಂದರೆಯಾಗದ ರೀತಿಯೊಳಗೆ ನಾವೆಲ್ಲ ನೂರಕ್ಕೆ ನೂರು ಮತದಾನ ಮಾಡುವ ಮೂಲಕ ಪೂರ್ಣ ಬಹುಮತದ ಸರಕಾರ ರಚಿಸಲು ಕಾರಣಿಭೂತರಾಗಬೇಕು” ಎಂದರು.

https://pragati.taskdun.com/voting-from-by-dignitaries-including-mla-anjali-nimbalkar/
https://pragati.taskdun.com/voting-by-65-members-of-the-same-family/

https://pragati.taskdun.com/belagaviwomendeathvoting-booth/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button