ಪ್ರಗತಿವಾಹಿನಿ ಸುದ್ದಿ, ವಿಜಯಪುರ: ಜಿಲ್ಲೆಯ ಮಸಬಿನಾಳ ಗ್ರಾಮದಲ್ಲಿ ಮತಯಂತ್ರಗಳ ಧ್ವಂಸ ಪ್ರಕರಣ ಅತ್ಯಂತ ಗಂಭೀರ ಸ್ವರೂಪದ ಅಪರಾಧವಾಗಿದ್ದು ಇದಕ್ಕೆ ಸಂಬಂಧಿಸಿದಂತೆ ಸುಮಾರು 25 ಜನರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದ್ ಕುಮಾರ್ ತಿಳಿಸಿದ್ದಾರೆ.
ಮಸಬಿನಾಳ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಆನಂದ್ ಕುಮಾರ್, “ಹೆಚ್ಚುವರಿ ಇವಿಎಮ್ ಮತ್ತು ವಿವಿ ಪ್ಯಾಟ್ ಗಳನ್ನು ಕಾರಿನಲ್ಲಿ ತರುವಾಗ ಮತಯಂತ್ರಗಳಲ್ಲಿ ಮತಗಳನ್ನು ಮ್ಯಾನಿಪ್ಯುಲೇಶನ್ ಮಾಡಲಾಗುತ್ತಿದೆ ಎಂಬ ತಪ್ಪುಕಲ್ಪನೆಗೊಳಗಾದ ಜನ ಅವುಗಳನ್ನು ಕಿತ್ತುಕೊಂಡು ನಾಶಗೊಳಿಸಿದ್ದಾರೆ. ಸರ್ಕಾರಿ ವಸ್ತುಗಳನ್ನು ಹಾಳು ಮಾಡುವುದು ಗಂಭೀರ ಸ್ವರೂಪದ ಅಪರಾಧವೆನಿಸಿಕೊಳ್ಳುವುದರಿಂದ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು ಹೇಳಿದರು.
ತಪ್ಪು ಗ್ರಹಿಕೆಯಿಂದ ಮತಯಂತ್ರ, ವಿವಿ ಪ್ಯಾಟ್ ಗಳನ್ನು ಧ್ವಂಸಗೊಳಿಸಿದ್ದ ಸ್ಥಳೀಯರು ಚುನಾವಣಾಧಿಕಾರಿಯ ಕಾರನ್ನೂ ಉರುಳಿಸಿ ಜಖಂಗೊಳಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ