ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಚಿಕ್ಕೋಡಿಯ ಕೆ. ಎಲ್. ಇ. ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟ್ರೀಯ ತಂತ್ರಜ್ಞಾನ ದಿನದ ನಿಮಿತ್ತ ಟೆಕ್ನಿಕಲ್ ಕ್ಲಬ್ ವತಿಯಿಂದ ಇನಸ್ಟಿಟ್ಯೂಟ್ ಇನ್ನೊವೆಶನ್ ಕೌನ್ಸಿಲ್ ಸಹಯೋಗದೊಂದಿಗೆ ಅಂತೀಮ ವರ್ಷದ ವಿದ್ಯಾರ್ಥಿಗಳಿಗೆ ಟೆಕ್ನೊವಿಜನ್ 2ಕೆ23 ಪ್ರಾಜೆಕ್ಟ್ ಪ್ರದರ್ಶನ ಹಾಗೂ ಸ್ಪರ್ಧೆ ಏರ್ಪಡಿಸಲಾಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ. ಸಚೀನ ಸಬ್ನಿಸ್, ಅಧ್ಯಕ್ಷರು, ಲಘು ಉದ್ಯೋಗ ಭಾರತಿ, ಕರ್ನಾಟಕ ಮಾತನಾಡಿ – ಪ್ರಾಜೆಕ್ಟಗಳನ್ನ ಕೇವಲ ಮಾಕ್ರ್ಸಗಾಗಿ ಸಿದ್ದಪಡಿಸದೇ, ಅವುಗಳನ್ನ ಉತ್ತಮ ಗುಣಮಟ್ಟದ ಪ್ರಾಡಕ್ಟ್ ಆಗೀ ಪರಿವರ್ತಿಸಿ ಎಂದರು. ಇಂದು ನಮಗೆ ಸಂಶೋಧನೆ ಕೈಗೊಳ್ಳಲು ವಿಪುಲ ಅವಕಾಶವಿದೆ. ಆದರೆ ನಾವಿನ್ಯತೆ ಕಂಡುಬರುತ್ತಿಲ್ಲ. ಪಾಶ್ಚಿಮಾತ್ಯ ದೇಶಗಳ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ಜರುಗುತ್ತದೆ. ನಮ್ಮಲ್ಲಿಯು ಸಹಿತ ಪ್ರತಿ ಕಾಲೇಜು ಸಂಶೋಧನೆಗೆ ಒತ್ತು ನೀಡಬೇಕು. ಹೊಸ ವಿಕಲ್ಪಗಳನ್ನ ಸ್ಟಾರ್ಟಅಪ ಆಗೀ ಪರಿವರ್ತಿಸಿ. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಉಪಯುಕ್ತವಾಗುವ ರೀತಿಯಲ್ಲಿ ಪ್ರಾಜೆಕ್ಟಗಳನ್ನ ಸಿದ್ಧಪಡಿಸಿ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಪ್ರಸಾದ ರಾಂಪುರೆ, ಇಂದು ಎಲ್ಲರೂ ನೌಕರಿಯ ಬೇನ್ನುಹತ್ತಿದ್ದಾರೆ. ಆದರೆ ನಿಮ್ಮದೇ ಆದ ಸ್ವಂತ ಉದ್ಯಮ ಆರಂಭಿಸಿದರೇ ನೀವು ಬೇರೆಯವರಿಗೆ ಉದ್ಯೋಗ ಕೊಡಬಹುದು. ಉದ್ಯಮ ಸ್ಥಾಪನೆ ಕಷ್ಟವಾದರು ಸಹಿತ ನಾಲ್ಕೈದು ವರ್ಷಗಳಲ್ಲಿ ಯಶಸ್ವಿಯಾಗಬಹುದು. ಕೃಷಿ ಮತ್ತು ಆಹಾರ ಕ್ಷೇತ್ರದಲ್ಲಿ ತಾಂತ್ರಿಕತೆಗೆ ಸಾಕಷ್ಟು ಅವಕಾಶಗಳಿವೆ. ಈ ನಿಟ್ಟಿನಲ್ಲಿ ಯೋಚಿಸಿ ಎಂದರು.
ಡಾ. ಸಂಜಯ ಪೂಜಾರಿ, ಡಾ. ಸತೀಶ ಭೋಜನ್ನವರ, ಪ್ರೊ. ಸುನೀಲ ಹೆಬ್ಬಾಳೆ, ಡಾ. ಆರ್. ಕೆ. ಪಾಟೀಲ, ಪ್ರೊ. ಅಶ್ವಿನಿ ಹೆಬ್ಬಾಳೆ, ಡಾ. ಮಹಾಂತಯ್ಯ ಮಠಪತಿ, ಪ್ರೊ. ಬಿ ಎನ್ ಚೌಕಿಮಠ, ಪ್ರೊ. ಸುನೀಲ ಶಿಂಧೆ, ಪ್ರೊ. ಸಚೀನ ಮೆಕ್ಕಳಕಿ ಉಪಸ್ಥಿತರಿದ್ದರು.
ಕು. ಪೂರ್ವಾ ಹವಾಲ್ದಾರ ಸ್ವಾಗತಗೀತೆ ಹಾಡಿದರು. ಪ್ರೊ. ಪ್ರಸಾದ ರಾಯನ್ನವರ ಅಥಿತಿ ಪರಿಚಯಿಸಿದರು. ಪ್ರೊ. ಮಹೇಶ್ವರಿ ಬಿಸನಾಳ ಸ್ವಾಗತಿಸಿದರು. ಪ್ರೊ. ಅನೀತಾ ಬಿರಾಜ ಮತ್ತು ಸುಂದರ ಗೋಟುರೆ ನಿರೂಪಿಸಿದರು. ಪ್ರೊ. ಮಲ್ಲಿಕಾರ್ಜುನ ಗಣಾಚಾರಿ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ