Latest

*39 ಜನರಿದ್ದ ಚೀನಾ ಹಡಗು ಹಿಂದೂಮಹಾಸಾಗರದಲ್ಲಿ ಮುಳುಗಡೆ ಪ್ರಕರಣ; ರಕ್ಷಣೆಗೆ ಧಾವಿಸಿದ ಭಾರತ*

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಹಿಂದೂಮಹಾಸಾಗರದಲ್ಲಿ ಮುಳುಗಡೆಯಾಗಿರುವ ಚೀನಾ ಹಡಗಿನಲ್ಲಿದ್ದ ನಾಗರಿಕರ ರಕ್ಷಣೆಗಾಗಿ ಭಾರತ ಧಾವಿಸಿದೆ.

ಎರಡು ದಿನಗಳ ಹಿಂದೆ ಹಿಮ್ದುಮಹಾಸಾಗರದಲ್ಲಿ ಚೀನಾದ ಮೀನುಗಾರಿಕಾ ಹಡಗು ಲು ಪೆಂಗ್ ಯುವಾನ್ ಯು 028 ಮುಳುಗಡೆಯಾಗಿತ್ತು. ಹಡಗಿನಲ್ಲಿ 39 ಜನರಿದ್ದರು. ಚೀನಾ ಸಾಕಷ್ಟು ಶೋಧ ನಡೆಸಿದರೂ ನಾಗರಿಕರ ರಕ್ಷಣೆಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಚೀನಾ ಭಾರತೀಯ ನೌಕಾ ಪಡೆಯ ಸಹಾಯ ಕೋರಿದ್ದು, ಮಾನವೀಯತೆಯ ಕ್ರಮವಾಗಿ ಭಾರತ ರಕ್ಷಣಾ ಕಾರ್ಯಕ್ಕೆ ಮುಂದಾಗಿದೆ.

ಭಾರತದ P81 ವಿಮಾನ ರಕ್ಷನಾ ಕಾರ್ಯಾಚರಣೆಗೆ ತೆರಳಿದೆ. ಚೀನಾ, ಹಡಗು ಮುಳುಗಡೆಯಾದ ನಿಖರ ಸ್ಥಳ ಹೇಳುವಲ್ಲಿಯೂ ವಿಫಲವಾಗಿದೆ.ಆದಾಗ್ಯೂ ಭಾರತೀಯ ನೌಕಾಪದೆ ವಿಮಾನ ಹಡಗು ಮುಳುಗಡೆ ಪ್ರದೇಶ ಪತ್ತೆ ಹಚ್ಚಿದ್ದು, ಹಡಗಿನ ಹಲವು ವಸ್ತುಗಳನ್ನು ಪತ್ತೆ ಮಾಡಿದೆ.

ಭಾರತೀಯ ನೌಕಾ ಪಡೆಯ ವಿಮಾನ ಚೀನಾದ ತನ್ನ ಹಡಗು ಹುಡುಕಲು ನಿಯೋಜಿಸಿರುವ ಎರಡು ಹಡ್ಗುಗಳಿಗೆ ಮಾರ್ಗದರ್ಶನ ನೀಡುತ್ತಿವೆ. ಭಾರತದ ಜೊತೆಗೆ ಆಸ್ಟ್ರೇಲಿಯಾ, ಶ್ರೀಲಂಕಾ, ಇಂಡೋನೇಷ್ಯಾ, ಮಾಲ್ಡಿವ್ಸ್ ಹಾಗೂ ಫಿಲಿಪೈನ್ಸ್ ದೇಶಗಳು ಕೂಡ ಹಡಗಿನ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡುತ್ತಿವೆ ಎಂದು ಚೀನಾ ಅಧಿಕಾರಿಗಳು ತಿಳಿಸಿದ್ದಾರೆ.

https://pragati.taskdun.com/clp-leader-siddaramaiahd-k-shivakumargovernor-meet/


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button