Latest

ರೆಡ್ಡಿ ಸೋದರರು, ಅವರ ಪತ್ನಿಯರ ಕೊರಳು ಸುತ್ತಿಕೊಂಡ ಪದ್ಮಾವತಿ ಯಾದವ ಕೊಲೆ ಪ್ರಕರಣ; 13 ವರ್ಷಗಳ ನಂತರ ಹೊಸ ಸಂಕಟ

ಪ್ರಗತಿವಾಹಿನಿ ಸುದ್ದಿ, ಬಳ್ಳಾರಿ: 13 ವರ್ಷಗಳ ಹಿಂದೆ ನಡೆದಿದ್ದ ಇಲ್ಲಿನ ಮಹಾನಗರ ಪಾಲಿಕೆ ಬಿಜೆಪಿ ಸದಸ್ಯೆ ಪದ್ಮಾವತಿ ಯಾದವ ಕೊಲೆ ಪ್ರಕರಣ ಒಂದು ಹಂತದಲ್ಲಿ ಮುಚ್ಚಿ ಹೋಗಿದ್ದರೂ ಇದೀಗ ಮತ್ತೆ ಎದ್ದು ಕುಳಿತು ರೆಡ್ಡಿ ಸಹೋದರರು ಹಾಗೂ ಅವರ ಪತ್ನಿಯರ ಕೊರಳಿಗೆ ಸುತ್ತಿಕೊಂಡಿದೆ.

ಶಾಸಕ ಗಾಲಿ ಜನಾರ್ದನ ರೆಡ್ಡಿ ಹಾಗೂ ಅವರ ಸಹೋದರ, ಮಾಜಿ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಮತ್ತಿ ಇಬ್ಬರ ಪತ್ನಿಯರ ವಿರುದ್ಧ ನ್ಯಾಯಾಲಯದಲ್ಲಿ ಸಾಕ್ಷ್ಯ ದಾಖಲಾಗುವ ಮೂಲಕ ಪ್ರಕರಣ ಮರುಜೀವ ಪಡೆದಿದೆ.

2012ರ ಫೆಬ್ರವರಿ 4ರಂದು ಪದ್ಮಾವತಿ ಯಾದವ ಅವರ ನಿಗೂಢ ಹತ್ಯೆ ನಡೆದಿತ್ತು. ಇದು ರಾಜ್ಯಾದ್ಯಂತ ಭಾರೀ ಸುದ್ದಿ ಮಾಡಿತ್ತು. ಪ್ರಕರಣವನ್ನು ಅಂದಿನ ಸರಕಾರ ಸಿಐಡಿಗೆ ವಹಿಸಿತ್ತು. ಆದರೆ ತನಿಖೆ ಆರಂಭಿಸಿದ ಸಿಐಡಿ ಅಧಿಕಾರಿಗಳು ಐದು ವರ್ಷಗಳ ಸುದೀರ್ಘ ಅವಧಿಯನ್ನು ತನಿಖೆಯಲ್ಲೇ ಕಳೆದರೇ ಹೊರತು ಪೂರ್ಣಗೊಳಿಸಲಿಲ್ಲ. ಕ್ಷಿಪ್ರ ಗತಿಯಲ್ಲಿ ತನಿಖೆ ಮುಗಿಸುವಂತೆ ಹೈಕೋರ್ಟ್ 2015ರ ಡಿಸೆಂಬರ್ 8 ರಂದು ಸಿಐಡಿಗೆ ಸೂಚಿಸಿತ್ತು.‌

ಆದರೂ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಮಾಡಲು ವಿಫಲರಾದ ಸಿಐಡಿ ಅಧಿಕಾರಿಗಳು 2016ರ ಸೆಪ್ಟೆಂಬರ್ 20ರಂದು ಬಳ್ಳಾರಿ ನ್ಯಾಯಾಲಯಕ್ಕೆ ‘ಸಿ’ ರಿರ್ಪೋರ್ಟ್ ಸಲ್ಲಿಸಿ ಕೈ ತೊಳೆದುಕೊಂಡಿದ್ದರು.

ಕೊಲೆ ನಡೆದ ದಿನದಿಂದಲೂ ಪದ್ಮಾವತಿ ಯಾದವ್ ಅವರ ಸಹೋದರ ಸುಬ್ಬರಾಯಡು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಲೇ ಇದ್ದಾರೆ. ಕೊಲೆ ಪ್ರಕರಣದಲ್ಲಿ ಗಾಲಿ ಜನಾರ್ದನರೆಡ್ಡಿ, ಅವರ ಪತ್ನಿ ಲಕ್ಷ್ಮೀ ಅರುಣಾ, ಗಾಲಿ ಸೋಮಶೇಖರರೆಡ್ಡಿ ಹಾಗೂ ಅವರ ಪತ್ನಿ ವಿಜಯಲಕ್ಷ್ಮೀ, ಕೈವಾಡವಿದೆ ಎಂದು ಆರೋಪಿಸುತ್ತ ಬಂದಿದ್ದಾರೆ. ಕೊಲೆಗೆ ಅವರೇ ಪ್ರಮುಖ ಕಾರಣವೆಂದು ಸಾಕ್ಷ್ಯ ನುಡಿದಿದ್ದಾರೆ. ಅಲ್ಲದೇ ಪದ್ಮಾವತಿ ಕೊಲೆ ಪ್ರಕರಣದಲ್ಲಿ ಸಾಕ್ಷ್ಯ ನುಡಿದಿರುವುದಕ್ಕೆ ತಮಗೆ ಬೆದರಿಕೆಯಿದ್ದು, ತಮ್ಮ ಪ್ರಾಣಕ್ಕೆ ಅನಾಹುತವಾದರೆ ಅದಕ್ಕೆ ರೆಡ್ಡಿ ಸಹೋದರರೇ ಕಾರಣ ಎಂದು ಸಹ ಸುಬ್ಬರಾಯಡು ಆರೋಪಿಸಿದ್ದಾರೆ.

ಇದೀಗ ಸಿಐಡಿ ಅಧಿಕಾರಿಗಳು ಸಲ್ಲಿಸಿದ ಸಿ ರಿರ್ಪೋರ್ಟ್ ವಿರುದ್ಧ ಸುಬ್ಬರಾಯಡು ನ್ಯಾಯಾಲಯದಲ್ಲಿ ಪ್ರೊಟೆಸ್ಟ್ ಮೆಮೋ ಸಲ್ಲಿಸಿದ್ದಾರೆ. ಅವರು ಪ್ಕೊರಕರಣದಲ್ಲೆಲಿ ಸದಾಕ್ಷ್ಯ ನುಡಿದಿರುವುದು ರೆಡ್ಡಿ ಸೋದರರು ಹಾಗೂ ಅವರ ಪತ್ನಿಯರಿಗೆ 13 ವರ್ಷಗಳ ನಂತರ ಮತ್ತೆ ಸಂಕಷ್ಟ ತಂದೊಡ್ಡಿದೆ.

https://pragati.taskdun.com/a-student-who-shot-his-girlfriend-and-surrendered-himself-to-death-in-the-vv-campus/
https://pragati.taskdun.com/first-priority-for-nippani-taluk-center-development-shashikala-jolla/
https://pragati.taskdun.com/satish-jarakiholireaction8-ministersoath/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button