Kannada News

*ವಿಟಿಯು 24ನೇ ರಾಜ್ಯ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ; ಬೆಳಗಾವಿಯ ಪಿಜಿ ಸೆಂಟರ್ ವಿದ್ಯಾರ್ಥಿಗೆ ಪ್ರಥಮ ಸ್ಥಾನ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿಯು “ರಜತ ಮಹೋತ್ಸವ” ಅಂಗವಾಗಿ ೨೦೨೩ ಮೇ ದಿನಾಂಕ ೨೧ನೇ ರಿಂದ ೨೪ನೇ ರವರಿಗೆ ರಂದು ‘೨೪ ನೇ ಅಂತರ ಕಾಲೇಜು ರಾಜ್ಯ ಮಟ್ಟದ ಅಥ್ಲೆಟಿಕ್ ಕೂಟ’ ಎರಡನೇ ದಿನವೂ ಹಾಲಿ ಚಾಂಪಿಯನ್ ಪುತ್ತೂರಿನ ವಿವೇಕಾನಂದ ಕಾಲೇಜು ಆಫ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅಧ್ಭುತ ಪ್ರದರ್ಶನವನ್ನು ತೋರಿ ಅತಿ ಹೆಚ್ಚು ಪದಕಗಳನ್ನು ಬಾಚಿಕೊಂಡಿದ್ದಾರೆ.

೨೦ ಕಿಲೋ ಮಿಟರ ನಡಿಗೆಯ ಮಹಿಳೆಯ ವಿಭಾಗದಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜು ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ವಿದ್ಯಾರ್ಥಿನಿ ರಕ್ಷೀತಾ ಐ ೨ ಗಂಟೆ ೧೬ ನೀ ೫೩ ಸೆ ದಾಖಲೆಯನ್ನು ಉತ್ತಮ ಪಡಿಸಿಕೊಂಡು ಈ ಕ್ರೀಡಾ ಕೂಟದಲ್ಲಿ ೨ಗಂಟೆ ೧೭ ನೀ ೧೩ ಸೆ ನಲ್ಲಿ ಕ್ರಮಿಸಿ ಹೊಸ ದಾಖಲೆಯನ್ನು ಬರೆದಳು. ಇದೇ ಕಾಲೇಜು ವಿದ್ಯಾರ್ಥಿನಿ ವಿದ್ಯಾ ಸಿ ಎಸ ೨ ಗಂಟೆ ೩೮ ನೀ ೧೩ ಸೆ ನಲ್ಲಿ ಕ್ರಮಿಸಿ ಎರಡನೇ ಸ್ಥಾನವನ್ನು ಹಾಗೂ ಮಂಗಳೂರಿನ ಕೆನರಾ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ರಶ್ಮಿತಾ ೩ ಗಂಟೆ ೮ ನೀ ೮ ಸೆ ಕ್ರಮಿಸಿ ತೃತೀಯ ಸ್ಥಾನವನ್ನು ಪಡೆದುಕೊಂಡರು.

“ವಿ ಟಿ ಯುನ ಬೆಳಗಾವಿಯ ಪಿ ಜಿ ಸೆಂಟರ್ ವಿದ್ಯಾರ್ಥಿಗೆ ಪ್ರಥಮ ಸ್ಥಾನ”

ಕ್ರೀಡಾಕೂಟದ ಜಾವಲಿನ್ ಎಸೆತದಲ್ಲಿ ವಿ ಟಿ ಯುನ ಬೆಳಗಾವಿಯ ಪಿ ಜಿ ಸೆಂಟರ್ ನ ಎಂಬಿಎ ವಿಭಾಗದಲ್ಲಿ ಓದುತ್ತಿರುವ ವಿದ್ಯಾರ್ಥಿ ಸ್ಥಾನ ಏನ್. ರವಿ ನಾಯಿಕ್ ೪೪.೯೩ ಮೀ ಉದ್ದ ಜಾವಲಿನ್ ಎಸೆದು ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾನೆ. ಇದೆ ವಿಭಾಗದಲ್ಲಿ ಪೂತ್ತಿರಿನ ವಿವೇಕಾನಂದ ಕಾಲೇಜು ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯ ರಂಜಿತ್ ಪಿ ವಿ ೪೪.೦೨ ಮೀ ಎಸೆತದೊಂದಿಗೆ ಎರಡನೇ ಸ್ಥಾನ ಹಾಗೂ ೪೩.೬೪ ಮೀ ಎಸೆತದೊಂದಿಗೆ ಬೆಂಗಳೂರಿನ ಎಸ ಜೆ ಬಿ ಐ ಟಿ ಕಾಲೇಜು ವಿದ್ಯಾರ್ಥಿ ರೋಹಿತ್ ಆಶೀಶ್ ಏನ್ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಎರಡನೇ ದಿನದ ಉಳಿದ ಕ್ರೀಡೆಗಳ ಫಲಿತಾಂಶ

೧. ೮೦೦ ಮೀ ಓಟ (ಪುರಷರ ವಿಭಾಗ)
ಪ್ರಥಮ ಸ್ಥಾನ – ಸಂಜಯ್ ಕುಮಾರ್ ಬಿ ಎಂ, ಎಸ ಐ ಟಿ ಮಂಗಳೂರು
ದ್ವಿತೀಯ ಸ್ಥಾನ – ಮನೋಜ್ ಬಿ., ಏನ್ ಎಂ ಎ ಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನಿಟ್ಟೆ
ತೃತೀಯ ಸ್ಥಾನ – ಶರತ್ ಕೆ ಎಸ. ವಿವೇಕಾನಂದ ಕಾಲೇಜು ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಪುತ್ತೂರು

೨. ೮೦೦ ಮೀ ಓಟ (ಮಹಿಳಾ ವಿಭಾಗ)
ಪ್ರಥಮ ಸ್ಥಾನ – ಶ್ರೀನಿಧಿ ಸೂರಗೊಂಡ, ಎಸ್ ಡಿ ಎಂ ಇಂಜಿನಿಯರಿಂಗ ಕಾಲೇಜು ಧಾರವಾಡ
ದ್ವಿತೀಯ ಸ್ಥಾನ – ವಿಭಾ ಬಿ ಕೆ., ಸಹ್ಯಾದ್ರಿ ಕಾಲೇಜು ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್, ಮಂಗಳೂರು
ತೃತೀಯ ಸ್ಥಾನ – ಜೇಕ್ಷಿತಾ ಕೆ,. ವಿವೇಕಾನಂದ ಕಾಲೇಜು ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಪುತ್ತೂರು

೩. ಎತ್ತರ ಜಿಗಿತ -ಪುರುಷರ ವಿಭಾಗ
ಪ್ರಥಮ ಸ್ಥಾನ – ಆದಿತ್ ಪಿ ಕೋಟಿಯನ್, ಆಳ್ವ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮೂಡಬಿದರೆ
ದ್ವಿತೀಯ ಸ್ಥಾನ – ರಿತೇಶ್ – ಏನ್ ಎಂ ಎ ಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನಿಟ್ಟೆ
ತೃತೀಯ ಸ್ಥಾನ – ಆದಿತ್ಯ ಸುರೇಶ, ದಯಾನಂದ ಸಾಗರ್ ಕಾಲೇಜು ಆಫ್ ಇಂಜಿನಿಯರಿಂಗ್, ಬೆಂಗಳೂರ್

೪. ೨೦ ಕೀ ಮೀ ನಡಿಗೆ -ಪುರುಷರ ವಿಭಾಗ
ಪ್ರಥಮ ಸ್ಥಾನ – ಜಿತಿನ್ ಕುಮಾರ್ – ಏನ್ ಎಂ ಎ ಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನಿಟ್ಟೆ
ದ್ವಿತೀಯ ಸ್ಥಾನ – ಯುವರಾಜ್ – ಏನ್ ಎಂ ಎ ಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನಿಟ್ಟೆ
ತೃತೀಯ ಸ್ಥಾನ – ಅನ್ವಿತ ಬಿ ಏನ್., ವಿವೇಕಾನಂದ ಕಾಲೇಜು ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಪುತ್ತೂರು

೫. ಡಿಸ್ಕಸ್ ಥ್ರೋ – ಪುರುಷರ ವಿಭಾಗ
ಪ್ರಥಮ ಸ್ಥಾನ – ಕರ‍್ತಿ ಕುಮಾರ ಯು ಕೆ., ರ‍್ಕಾರೀ ಇಂಜಿನಿಯರಿಂಗ್ ಕಾಲೇಜು ಮಂಡ್ಯ
ದ್ವಿತೀಯ ಸ್ಥಾನ – ಚಿರಾಗ್ – ಕೆನರಾ ಇಂಜಿನಿಯರಿಂಗ್ ಕಾಲೇಜು, ಮಂಗಳೂರು
ತೃತೀಯ ಸ್ಥಾನ – ಸಚಿನ್ ಸೈಬಣ್ಣವರ್ – ಕೆ ಎಲ್ ಇ ಎಂ ಎಸ ಶೇಷಗಿರಿ ಇಂಜಿನಿಯರಿಂಗ್ ಕಾಲೇಜು ಬೆಳಗಾವಿ.

೬. ೧೦೦ ಮೀ ಅಡೆತಡೆ ಓಟ – ಮಹಿಳಾ ವಿಭಾಗ
ಪ್ರಥಮ ಸ್ಥಾನ – ಯಶಿತಾ ಏನ್., ವಿವೇಕಾನಂದ ಕಾಲೇಜು ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಪುತ್ತೂರು
ದ್ವಿತೀಯ ಸ್ಥಾನ – ಚೈತನ್ಯ ಎ ಏನ್., ವಿವೇಕಾನಂದ ಕಾಲೇಜು ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಪುತ್ತೂರು
ತೃತೀಯ ಸ್ಥಾನ – ರಕ್ಷಿತಾ ಎಚ್ ಬಿ., ಜಿ ಎಂ ಐ ಟಿ ದಾವಣಗೆರೆ

೭. ಉದ್ದ ಜಿಗಿತ – ಮಹಿಳಾ ವಿಭಾಗ
ಪ್ರಥಮ ಸ್ಥಾನ – ಪವಿತ್ರಾ ಜಿ., ವಿವೇಕಾನಂದ ಕಾಲೇಜು ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಪುತ್ತೂರು
ದ್ವಿತೀಯ ಸ್ಥಾನ – ಮೇಧಾ ಎಸ – ಏನ್ ಎಂ ಎ ಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನಿಟ್ಟೆ
ತೃತೀಯ ಸ್ಥಾನ – ಛಾಯಶ್ರೀ ಎಚ್ ಜೆ., ರಾಜೀವ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಹಾಸನ್

೮ ಉದ್ದ ಜಿಗಿತ – ಪುರಷರ ವಿಭಾಗ
ಪ್ರಥಮ ಸ್ಥಾನ – ವಿಕಾಸ್ ರಾವತ್ – ನ್ಯೂ ಹಾರಿಜನ್ ಕಾಲೇಜ್ ಆಫ್ ಇಂಜಿನಿಯರಿಂಗ್ ಬೆಂಗಳೂರು.
ದ್ವಿತೀಯ ಸ್ಥಾನ – ಜೀವನ್ ಏನ್ ಎಂ – ಜ್ಯೋತಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು
ತೃತೀಯ ಸ್ಥಾನ – ಶರಣ್ ಜೇಜಸ್ವಿ – ಆರ್ ಏನ್ ಎಸ ಐ ಟಿ ಬೆಂಗಳೂರು.

೯. ೪೦೦ ಮೀ ಓಟ – ಪುರುಷರ ವಿಭಾಗ
ಪ್ರಥಮ ಸ್ಥಾನ – ಬಿ. ಧನುಷ್ – ಡಾ ತಿಮ್ಮಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕೋಲಾರ
ದ್ವಿತೀಯ ಸ್ಥಾನ – ಆಶನ್ಸ್ ಪ್ರಸಾದ – ಏಟ್ರಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆನಗಳೂರು.
ತೃತೀಯ ಸ್ಥಾನ – ಶರತ್ ಕೆ ಎಸ – ವಿವೇಕಾನಂದ ಕಾಲೇಜು ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಪುತ್ತೂರು

೧೦. ೪೦೦ ಮೀ ಓಟ – ಮಹಿಳಾ ವಿಭಾಗ
ಪ್ರಥಮ ಸ್ಥಾನ – ಸಿಮರನ್ ಎಫ್., – ಎಂ ಎಸ ಆರ್ ಐ ಟಿ ಬೆಂಗಳೂರು
ದ್ವಿತೀಯ ಸ್ಥಾನ – ಆಕ್ಷಾ ಕೆ ಬಿ., ಸಹ್ಯಾದ್ರಿ ಕಾಲೇಜು ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್, ಮಂಗಳೂರು
ತೃತೀಯ ಸ್ಥಾನ – ಅಶ್ವಿನಿ – ವಿವೇಕಾನಂದ ಕಾಲೇಜು ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಪುತ್ತೂರು

೧೧. ೧೫೦೦ ಮೀ ಓಟ – ಮಹಿಳಾ ವಿಭಾಗ
ಪ್ರಥಮ ಸ್ಥಾನ – ಶ್ರೀನಿಧಿ ಸೂರಗೊಂಡ – ಎಸ ಡಿ ಎಂ ಇಂಜಿನಿಯರಿಂಗ್ ಕಾಲೇಜು ಧಾರವಾಡ
ದ್ವಿತೀಯ ಸ್ಥಾನ – ಚೋ೦ದಮ್ಮ ಕೆ ಟಿ- ಕರ‍್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ‍್ಗ
ತೃತೀಯ ಸ್ಥಾನ – ಜೇಕ್ಷಿತಾ ಕೆ,. ವಿವೇಕಾನಂದ ಕಾಲೇಜು ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಪುತ್ತೂರು

೧೨. ಡಿಸ್ಕಸ್ ಥ್ರೋ – ಮಹಿಳಾ ವಿಭಾಗ
ಪ್ರಥಮ ಸ್ಥಾನ – ರಿಕ್ತಾ ಕಿರಣ್ – ಎಸ ಐ ಟಿ ಮಂಗಳೂರು
ದ್ವಿತೀಯ ಸ್ಥಾನ – ವೀಕ್ಷಾ ಪಟೇಲ್ – ಜಿ ಎಸ ಎಸ ಎಸ ಐ ಟಿ ಮಹಿಳಾ ಕಾಲೇಜು ಮೈಸೂರು
ತೃತೀಯ ಸ್ಥಾನ – ಆಶಿಕಾ ಗೌಡ – ಏನ್ ಎಂ ಎ ಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ನಿಟ್ಟೆ

ಎರಡನೇ ದಿಂದ ಅಂತ್ಯಕ್ಕೆ ವಿವೇಕಾನಂದ ಕಾಲೇಜು ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಪುತ್ತೂರು ೪೫ ಅಂಕಗಳೊಂದಿಗೆ ಪ್ರಥಮ್ ಸ್ಥಾನದಲ್ಲಿದ್ದರೆ, ೧೭ ಅಂಕಗಳಿಸಿದ ನಿಟ್ಟೆಯ ಏನ್ ಎಂ ಎ ಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ದ್ವಿತೀಯ ಹಾಗೂ ೧೩ ಅಂಕಗಳಿಸಿದ ಧಾರವಾಡದ ಎಸ ಡಿ ಎಂ ಇಂಜಿನಿಯರಿಂಗ್ ಕಾಲೇಜು ತೃತೀಯ ಮತ್ತು ೧೧ ಅಂಕಗಳೊಂದಿಗೆ ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ನಾಲ್ಕನೇ ಸ್ಥಾನದಲ್ಲಿವೆ. ಈ ಕ್ರೀಡಾ ಕೂಟ ಇನ್ನೂ ಎರಡು ದಿನಗಳ ಕಾಲ ನಡೆಯಲಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button