ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೆಎಲ್ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯ, ಇದೇ ಮೇ 27ರಂದು ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ಪ್ರಾಜೆಕ್ಟಗಳ ಪ್ರದರ್ಶನ, “ಪ್ರಾಜೆಕ್ಟ್ ಎಕ್ಸ್‌ಪೋ -2023” ಅನ್ನು ಆಯೋಜಿಸುತ್ತಿದೆ.
ಈ ಕಾರ್ಯಕ್ರಮವನ್ನು ಖ್ಯಾತ ವಿಜ್ಞಾನಿ ಮತ್ತು ಕಂಟ್ರೋಲ್ ಡೈನಾಮಿಕ್ಸ್ ಮತ್ತು ಅನಾಲಿಸಿಸ್, ಇಸ್ರೋ ಉಪಗ್ರಹ ಕೇಂದ್ರ, ಬೆಂಗಳೂರು , ಮಾಜಿ ಉಪವಿಭಾಗದ ಮುಖ್ಯಸ್ಥರಾದ ಡಾ. ವೆಂಕಟೇಶ್ವರಲು ಆಂಧ್ರ ಉದ್ಘಾಟಿಸಲಿದ್ದಾರೆ.
ಪ್ರಾಜೆಕ್ಟ್ ಎಕ್ಸ್‌ಪೋ-2023 ರಲ್ಲಿ ಒಟ್ಟು 250 ಕ್ಕೂ ಹೆಚ್ಚು ನವೀನ ಪ್ರಾಜೆಕ್ಟ್ ಗಳ ಪ್ರದರ್ಶನ ದಲ್ಲಿ, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದಿಂದ 62, ಏರೋನಾಟಿಕಲ್ ಇಂಜಿನಿಯರ್‌ನಿಂದ 16, ಸಿವಿಲ್ ಎಂಜಿನಿಯರಿಂಗ್‌ನಿಂದ 35 , ಕಂಪ್ಯೂಟರ್ ಸೈನ್ಸ್ ನಿಂದ 84, ಮೆಕ್ಯಾನಿಕಲ್ ವಿಭಾಗದಿಂದ 51, ಇನ್ಫಾರ್ಮಶನ್ ಸಯನ್ಸ್ ದಿಂದ 25, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ನಿಂದ 16 ಮತ್ತು ಆರ್ಕಿಟೆಕ್ಚರ್ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ 17 ಪ್ರಾಜೆಕ್ಟ ಗಳನ್ನು ವಿದ್ಯಾರ್ಥಿಗಳು ಈ ಮೇಳದಲ್ಲಿ ಪ್ರದರ್ಶಿಸಲಿದ್ದಾರೆ.
ಐಒಟಿ, ಪಿಎಲ್‌ಸಿ, ಇಂಧನ ಸಂರಕ್ಷಣೆ, ವಿದ್ಯುತ್ ವ್ಯವಸ್ಥೆಗಳು, ನೆಟ್‌ವರ್ಕಿಂಗ್, ಮಷೀನ್ ಲರ್ನಿಂಗ್, ವೆಬ್ ತಂತ್ರಜ್ಞಾನಗಳು, ಯಂತ್ರ ವಿನ್ಯಾಸ, ಉತ್ಪಾದನೆ, ಥರ್ಮಲ್ ಎಂಜಿನಿಯರಿಂಗ್, ತ್ಯಾಜ್ಯ ನಿರ್ವಹಣೆ, ಕೃಷಿ, ಸ್ಟ್ರಕ್ಚರಲ್ ಇಂಜಿನಿಯರಿಂಗ್, ನಿರ್ಮಾಣ ಸಾಮಗ್ರಿಗಳು ಮತ್ತು ನಿರ್ವಹಣೆ, ಮಣ್ಣು ಮತ್ತು ನೀರಿನ ಸಂರಕ್ಷಣೆ, ಸಾರಿಗೆ ಎಂಜಿನಿಯರಿಂಗ್, ನ್ಯಾನೋ ತಂತ್ರಜ್ಞಾನ, ಉಪಗ್ರಹ ಚಿತ್ರ ಸಂಸ್ಕರಣೆ ಮತ್ತು ಇನ್ನೂ ವಿವಿಧ ಆಧುನಿಕ ಹಾಗೂ ಉನ್ನತ ತಂತ್ರಜ್ಞಾನ ಬಳಸಿ, ಅಭಿವೃದ್ಧಿಪಡಿಸಿದ ಈ ಪ್ರಾಜೆಕ್ಟ್ ಪ್ರದರ್ಶನ ಮೇಳವು ಬೆಳಗಾವಿ ಮತ್ತು ಸುತ್ತಮುತ್ತಲಿನ ನಾಗರಿಕರು, ವಿದ್ಯಾರ್ಥಿಗಳಿಗೆ, ಪೋಷಕರಿಗೆ ಹಾಗೂ ಆಸಕ್ತರಿಗೆ ವೀಕ್ಷಣೆಗೆ ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 2:30 ರವರೆಗೆ ತೆರೆದಿರುತ್ತದೆ ಎಂದು ಕೆಎಲ್‌ಎಸ್ ಜಿಐಟಿಯ ಪ್ರಾಂಶುಪಾಲರಾದ ಪ್ರೊ. ಡಿ. ಎ. ಕುಲಕರ್ಣಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ