ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಗುರುವಿನ ಆಶೀರ್ವಾದವಿಲ್ಲದೇ ಯಾರು ಏನನ್ನೂ ಸಾಧಿಸಲಾಗುವುದಿಲ್ಲ, ಸಾಧನೆ ಆಗಬೇಕಿದ್ದರೆ ಗುರುವಿನ ಆಶಿರ್ವಾದ ಬೇಕು, ಅಂತಹ ಕಾರ್ಯಕ್ಕೆ ಅಮ್ಮನೇ ಮೊದಲ ಗುರು, ಅವರದೇ ಸಾಧನೆಗೆ ಮೊದಲ ಮೆಟ್ಟಿಲು ಎಂದು ಉದ್ಯಮಿ ಕಿಶೋರ ಕಾಕಡೆ ಹೇಳಿದರು.
ಅವರು ಸ್ಥಳೀಯ ಎಸ್ ಜಿ ವಿ ಮಹೇಶ ಪದವಿ ಪೂರ್ವ ಕಾಲೇಜಿನಲ್ಲಿ ಗುರುಪೂರ್ಣಿಮೆಯ ನಿಮಿತ್ತ ನಡೆದ ಕಾರ್ಯಕ್ರಮದ ಅಥಿತಿಗಳಾಗಿ ಮಾತನಾಡುತ್ತಿದ್ದರು.
“ಗುರುವೇ ಮನುಷ್ಯನ ವ್ಯಕ್ಕಿತ್ವವನ್ನು ರೂಪಿಸಿ ನಿರ್ದೇಶಿಸುವುದು, ಅಂತಹ ಗುರುವಿಗೆ ನಾವು ಸದಾ ವಿಧೇಯರಾಗಿರಬೇಕು, ಪ್ರತಿಯೊಬ್ಬರೂ ತಮ್ಮ ಜೀವಿತದ ಅವಧಿಯನ್ನು ಸಮಾಜ ಹಾಗೂ ದೇಶಕ್ಕಾಗಿ ಮೀಸಲಿಡಬೇಕು” ಎಂದರು.
ಕಾಲೇಜಿನ ಪ್ರಾಚಾರ್ಯ ಎಂ ವಿ ಭಟ್ ಮಾತನಾಡಿ “ವಿದ್ಯಾರ್ಥಿಯಾಗಿದ್ದಾಗಲೇ ವಿನಯ, ವಿಧೇಯತೆ ಭಾವವನ್ನು ಕಲಿಸುವ ಗುರುವಿಗೆ ನಮಿಸಬೇಕು ” ಎಂದರು.
ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಅಬ್ದುಲ್ ನಯಿಮ್ ಸ್ವಾಗತಿಸಿದರು. ಉಪನ್ಯಾಸಕಿ ಐಶ್ವರ್ಯ ಅಡವಿ ನಿರ್ವಹಿಸಿದರು. ಉಪಪ್ರಾಚಾರ್ಯ ಆನಂದ ಖೋತ ಹಾಗೂ ಹಿರಿಯ ಉಪನ್ಯಾಸಕ ಮುಕುಂದ ಗೋಖಲೆ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಉಪನ್ಯಾಸಕ ರಾಜು ಭಟ್ಟ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ