ಯುವತಿಯ ಮೇಲಿನ ಲೈಂಗಿಕ ದೌರ್ಜನ್ಯ ಖಂಡಿಸಿ ಜಿಲ್ಲಾಧಿಕಾರಿಗಳಿಗೆ ಮನವಿ : ಸಂಚಾಲಕ ತೋಳಿ ಭರಮಣ್ಣ
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಇತ್ತೀಚಿಗೆ ಪುತ್ತೂರಿನಲ್ಲಿ ಯುವತಿಯ ಮೇಲೆ ನಡೆದ ಲೈಂಗೀಕ ದೌರ್ಜನ್ಯವನ್ನು ನಾಗರಿಕರಾದ ನಾವೆಲ್ಲರೂ ಖಂಡಿಸಬೇಕೆಂದು ವಿದ್ಯಾರ್ಥಿ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ತೋಳಿ ಭರಮಣ್ಣ ಹೇಳಿದರು
ಅವರು ಬೆಳಗಾವಿ ಜಿಲ್ಲಾಧಿಕಾರಿಗಳ ಮೂಲಕ ರಾಜಪಾಲರಿಗೆ ಮನವಿ ಮಾಡುತ್ತಾ ಯುವಕರಲ್ಲಿ ವಿಷ ಬೀಜ ಬಿತ್ತುವ, ನಾಗರಿಕ ಸಮಾಜ ತಲೆತಗಿಸುವ ಕೆಲಸ ಕೆಲವು ಸಂಘ, ಸಂಸ್ಥೆಗಳಿಂದ ನಡೆಯುತ್ತದೆ. ಅವಗಳನ್ನು ನಿಯಂತ್ರಣಕ್ಕೆ ತರಬೇಕು. ಇಂತಹ ಪಾಪಕೃತ್ಯಗಳಲ್ಲಿ ಭಾಗಿಯಾದ ವಿಕೃತ ಮನಸ್ಸಿನ ಆರೋಪಿಯನ್ನು ಕೂಡಲೇ ಬಂಧಿಸಿ, ಗಲ್ಲು ಶಿಕ್ಷೆ ನೀಡಬೇಕು ಎಂದರು.
ಶಾಲೆ ಹಾಗೂ ಕಾಲೇಜುಗಳಲ್ಲಿ ಈ ಕೂಡಲೇ ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ನೀಡುವುದರ ಮೂಲಕ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಜಾಗೃತಿ ಮೂಡಿಸುವ ಕಾರ್ಯ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಕಾನೂನು ಇಲಾಖೆ ಜಂಟಿ ಸಹಭಾಗಿತ್ವದಲ್ಲಿ ಜರುಗಬೇಕಾಗಿದೆ ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ಬಂಧುತ್ವ ವೇದಿಕೆಯ ಸಂಚಾಲಕರಾದ ಗೋಪಾಲ ದಳವಾಯಿ, ಬಾಳಕೃಷ್ಣ ನಾಯಕ, ಬಸಪ್ಪ ಪೆಂಡಾರಿ, ವಂಸತ ಮೇಲಿನಮನಿ, ಮಹೇಶ ಹಾದಿಮನಿ, ಸಾಗರ ಹೆಳವಿ, ದುರ್ಗಪ್ಪ ಎಮ್ಮಿ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ