Kannada NewsKarnataka News

ವಿವಿಧೆಡೆ ವಿದ್ಯುತ್ ವ್ಯತ್ಯಯ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ದಿನಾಂಕ ೦೪.೦೬.೨೦೨೩ ರಂದು ಬೆಳಿಗ್ಗೆ ೦೯.೦೦ ಘಂಟೆಯಿಂದ ಸಾಯಂಕಾಲ ೦೪.೦೦ ಘಂಟೆಯವರೆಗೆ ಕ.ವಿ.ಪ್ರ.ನಿ.ನಿ. ವತಿಯಿಂದ ೧೧೦ ಕೆ.ವ್ಹಿ. ಸುವರ್ಣ ಸೌಧ ಉಪಕೇಂದ್ರದಲ್ಲಿ ಮೊದಲನೇಯ ತ್ರೈಮಾಸಿಕ ಹಾಗೂ ಇತರೆ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಸದರಿ ಉಪಕೇಂದ್ರದಿಂದ ವಿತರಣೆಯಾಗುವ ಕೊಂಡಸಕೊಪ್ಪ, ಹಲಗಾ, ಬಸ್ತವಾಡ, ಶಗನಮಟ್ಟಿ, ಮಾಸ್ತಮರಡಿ, ಬಸರಿಕಟ್ಟಿ, ಶಿಂಧೋಳ್ಳಿ, ಮುತಗಾ, ಶ್ರೀರಾಮ ಕಾಲನಿ, ಸಾರಿಗೆ ನಗರ, ಮಹಾಲಕ್ಷ್ಮೀ ಪುರಂ, ಸಾಯಿ ನಗರ, ಭರತೇಶ ಕಾಲೇಜ, ಶಿಂಧೋಳ್ಳಿ ಕ್ರಾಸ್, ನಿಲಜಿ ಕ್ರಾಸ್, ಕಮಕಾರಟ್ಟಿ, ಬಡೆಕೊಳ್ಳಮಠ, ಕೋಳಿಕೊಪ್ಪ ಗ್ರಾಮಗಳಿಗೆ ಹಾಗೂ ಸದರಿ ಗ್ರಾಮಗಳ ನೀರಾವರಿ ಪಂಪ್‌ಸೆಟ್‌ಗಳ ಏರಿಯಾಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಮಚ್ಛೆ ಉಪಕೇಂದ್ರ

ದಿನಾಂಕ ೦೪.೦೬.೨೦೨೩ ರಂದು ಬೆಳಿಗ್ಗೆ ೦೯.೦೦ ಘಂಟೆಯಿಂದ ಸಾಯಂಕಾಲ ೦೫.೦೦ ಘಂಟೆಯವರೆಗೆ ಕ.ವಿ.ಪ್ರ.ನಿ.ನಿ. ವತಿಯಿಂದ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ೧೧೦ ಕೆ.ವ್ಹಿ. ಮಚ್ಛೆ ಉಪಕೇಂದ್ರದಿಂದ ಸರಬರಾಜು ಆಗುವ ಬೆಳಗಾವಿ ತಾಲೂಕಿನ ದತ್ತ ನಗರ, ನಾವಗೇಕರ ನಗರ, ಹವಳ ನಗರ, ಗೋಡಸೆ ಕಾಲನಿ, ಓಂಕಾರ ನಗರ, ಮಚ್ಛೆ, ಝಾಡಶಾಪೂರ, ದೇಸೂರ, ಸುಸ್ಗ್ಯಾನಟ್ಟಿ, ಬಳಗಾಮಟ್ಟಿ, ಕುಟ್ಟಲವಾಡಿ, ಬಾಮನವಾಡಿ, ನಾವಗೆ, ಜಾನೇವಾಡಿ, ಬಾದರವಾಡಿ, ರಣಕುಂಡೆ, ಕರ್ಲೇ, ಕಿನಯೇ, ಸಂತಿ ಬಸ್ತವಾಡ, ಕಾಳೇನಟ್ಟಿ, ವಾಘವಾಡೆ, ರಂಗಧೋಳಿ, ಪೀರಣವಾಡಿ, S‘ದರವಾಡಿ, ಮಾರ್ಕಂಡೇಯ ನಗರ, ವಾಲ್ಮೀಕಿ ನಗರ, ತೀರ್ಥಕುಂಡೆ, ಹುಂಚ್ಯಾನಟ್ಟಿ, ಅಶೋಕ ಐರನ್ ಕಾಲನಿ, ನಾವಗೆ, ವಾಘವಾಡೆ ಹಾಗೂ ಮಚ್ಚೆ ಔದ್ಯೋಗಿಕ ಕ್ಷೇತ್ರಗಳಿಗೆ ಹಾಗೂ ಖಾನಾಪೂರ ತಾಲೂಕಿನ ಉಚವಡಾ, ಕುಸಮಳಿ, ಬೈಲೂರ, ಮೊರಬ, ಜಾಂಬೋಟಿ, ಓಲಮನಿ, ವಡಗಾಂವ, ದಾರೋಳಿ, ಚಾಪೋಲಿ, ಕಾಪೋಲಿ, ಮುಡವಿ, ಹಬ್ಬಾನಟ್ಟಿ, ದೇವಾಚಿಹಟ್ಟಿ, ತೋರಾಳಿ, ಗೋಲ್ಯಾಳಿ, ಬೆಟಗೇರಿ, ತಳೇವಾಡಿ, ಅಮಟೆ, ಕಾಲಮನಿ, ಚಿಕಲೆ, ಕಣಕುಂಬಿ, ಗವಸೆ, ಅಮಗಾಂವ, ಬೇಟ್ನೆ, ಪಾರವಾಡ, ಚಿಗುಳೆ, ಮಾನ, ಸಡಾ, ಚೋರ್ಲಾ, ಹಳೆ ಹಾಗೂ ಹೊಸ ಹುಳಂದ ಗ್ರಾಮಗಳಿಗೆ ಹಾಗೂ ಸದರಿ ಗ್ರಾಮಗಳ ನೀರಾವರಿ ಪಂಪ್‌ಸೆಟ್‌ಗಳ ಏರಿಯಾಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಕಾಂಗ್ರೆಸ್ ಸರಕಾರದಿಂದ ಕ್ರಾಂತಿಕಾರಕ ಯೋಜನೆಗಳ ಘೋಷಣೆ; ಎಲ್ಲಾ ಗ್ಯಾರಂಟಿ ಜಾರಿ

https://pragati.taskdun.com/the-announcement-of-revolutionary-schemes-by-the-congress-government-all-guarantees-enforced/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button