Kannada NewsKarnataka News

ಮನೆ ಮಗಳಾಗಿ ಸಾರ್ವಜನಿಕರ ಅಹವಾಲು ಆಲಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರೂ, ಹಿರಿಯ ನಾಗರಿಕರು ಹಾಗೂ ವಿಕಲಚೇತನರ ಸಬಲೀಕರಣ ಸಚಿವರೂ ಆಗಿರುವ ಲಕ್ಷ್ಮೀ ಹೆಬ್ಬಾಳಕರ್ ಅವರು ಮಂಗಳವಾರ ಬೆಳಗಾವಿಯಲ್ಲಿ ಸಾರ್ವಜನಿಕರ ಅಹವಾಲು ಆಲಿಸಿದರು.
ಗೃಹ ಕಚೇರಿ ಬಳಿ ಕಿಕ್ಕಿರಿದು ಸೇರಿದ್ದ ಸಾರ್ವಜನಿಕರಿಂದ ಅವರ ಸಮಸ್ಯೆ, ಬೇಡಿಕೆಗಳ ಕುರಿತು ಅಹವಾಲು ಆಲಿಸಿ, ಹಲವಾರು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಲಾಯಿತು. ಇನ್ನಿತರ ಸಮಸ್ಯೆಗಳ ಕುರಿತು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಎಲ್ಲರೊಂದಿಗೂ ನಗು ನಗುತ್ತಲೇ  ಮಾತನಾಡಿ ಬಂದವರ ಕಷ್ಟ ವಿಚಾರಿಸುತ್ತಿದ್ದ ದೃಶ್ಯ ಒಬ್ಬ ಮಗಳು, ಒಬ್ಬ ಸಹೋದರಿ, ಒಬ್ಬ ತಾಯಿಯ ಜೊತೆ ಸಮಸ್ಯೆಗಳನ್ನು ಹೇಳಿಕೊಂಡ ಅನುಭವ ಸಾರ್ವಜನಿಕರಿಗೆ ಉಂಟಾಗುವಂತಾಯಿತು.
https://pragati.taskdun.com/dont-listen-to-such-rumors-the-government-is-with-you-minister-to-the-people-lakshmi-hebbalkar-abhay/

Related Articles

Back to top button