Kannada NewsKarnataka News
ಬಡ ವಿದ್ಯಾರ್ಥಿಗೆ ನಿಯತಿ ಫೌಂಡೇಶನ್ ನೆರವು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪ್ರತಿಭಾನ್ವಿತ ಬಡ ವಿದ್ಯಾರ್ಥಿಯೋರ್ವನಿಗೆ ಆತನ ಉನ್ನತ ಶಿಕ್ಷಣಕ್ಕಾಗಿ ನಿಯತಿ ಫೌಂಡೇಶನ್ ಆರ್ಥಿಕ ನೆರವು ನೀಡಿದೆ.
ಬಿಕಾಂ ಓದುತ್ತಿರುವ ವಿದ್ಯಾರ್ಥಿಯ ಕುಟುಂಬದ ಆರ್ಥಿಕ ಸ್ಥಿತಿ ದುರ್ಬಲವಾಗಿದ್ದರಿಂದ ಆತನ ಓದಿಗೆ ತೊಂಡರೆಯಾಗಿತ್ತು. ಇದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ನಿಯತಿ ಫೌಂಡೇಶನ್ ನೆರವಿಗೆ ಮುಂದೆ ಬಂದಿದೆ.
ಡಾ ಸಮೀರ್ ಸರ್ನೋಬತ್, ಡಾ ಸೋನಾಲಿ ಸರ್ನೋಬತ್, ವಿದ್ಯಾರ್ಥಿಯ ತಾಯಿ ಸಾರಿಕಾ ನವಲೆ ಉಪಸ್ಥಿತರಿದ್ದರು. ನಿಯತಿ ಫೌಂಡೇಶನ್ ಈ ಹಿಂದೆ ಕೂಡ ಹಲವಾರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡುತ್ತ ಬಂದಿದ್ದು ಇಲ್ಲಿ ಉಲ್ಲೇಖನೀಯ.
*11 ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ*




